Wednesday, October 18, 2023

ಜನರ ಸಮಸ್ಯೆಳಿಗೆ ಸ್ಪಂದನೆ ನೀಡಿ : ಶಾಸಕ ರಾಜೇಶ್ ನಾಯ್ಕ್

Must read

ಸಮಸ್ಯೆಗಳನ್ನು ಹೇಳಿಕೊಂಡು ಬಂದ ಜನರ ಕೆಲಸ ಕ್ಕಾಗಿ ಅಳೆದಾಡುವಂತೆ ಮಾಡದೆ ಶೀಘ್ರವಾಗಿ ಮಾಡಿಕೊಡುವಂತೆ ಅಧಿಕಾರಿಗಳಿಗೆ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಸೂಚನೆ ನೀಡಿದರು.

ಅವರು ತಾಲೂಕು ಆಡಳಿತ ಬಂಟ್ವಾಳ ವತಿಯಿಂದ ನಡೆದ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅಧಿಕಾರಿಗಳು ಕೆಲಸ ಮಾಡುವಲ್ಲಿ ವಿಳಂಬ ಮಾಡಿದರೆ ನೇರವಾಗಿ ನನ್ನ ಗಮನಕ್ಕೆ ತನ್ನಿ ಎಂದು ಅವರು ಹೇಳಿದರು.
ಬಡಗಬೆಳ್ಳೂರು ಗ್ರಾಮದಲ್ಲಿ
50 ಕ್ಕಿಂತಲೂ ಹೆಚ್ಚು ಮನೆಯವರಿಗೆ ತಾಂತ್ರಿಕ ತೊಂದರೆಯಿಂದ 94 ಸಿ ಪತ್ರ ಸಿಗದೆ ವಂಚಿತರಾದವರಿಗೆ ನ್ಯಾಯ ಒದಗಿಸಿ 94 ಸಿ ಪತ್ರವನ್ನು ನೀಡುವ ಕೆಕಸ ಶೀಘ್ರವಾಗಿ ಮಾಡಲಿದ್ದೇವೆ ಎಂದು ಭರವಸೆ ನೀಡಿದರು.
ಕಳೆದ ಎರಡು ವರ್ಷ ಗಳಿಂದ ಅಧಿಕಾರಿಗಳ ಬೇಜಾಬ್ದಾರಿಯಿಂದ ಕಂದಾಯ ಇಲಾಖೆಯಿಂದ ಕೆಲಸಗಳು ಆಗದೆ ಬಾಕಿ ಉಳಿದಿದೆ.
ಇಷ್ಟು ವರ್ಷ ಅಧಿಕಾರಿಗಳು ಏನು ಮಾಡುತ್ತಿದ್ದರು ಎಂದು ಅವರು ಪ್ರಶ್ನೆ ಮಾಡಿದ್ದಲ್ಲದೆ ಶೀಘ್ರವಾಗಿ ಜನರ ಕೆಲಸವನ್ನು ಮಾಡಿಕೊಡುವಂತೆ ಅವರು ಸೂಚನೆ ನೀಡಿದರು.

ಪ್ರಸ್ತಾವಿಕವಾಗಿ ಮಾತನಾಡಿದ ಬಂಟ್ವಾಳ ತಹಶೀಲ್ದಾರ್ ರಶ್ಮಿ ,
ತಾಲೂಕಿನ ಜನರ ಸಮಸ್ಯೆಗಳಿಗೆ ಸ್ಪಂದನೆ ನೀಡುವ ಕಾರ್ಯಕ್ರಮವಾಗಿದ್ದು, ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬೇಕು.
ಸಮಸ್ಯೆಗಳನ್ನು ಪರಿಹರಿಸಲು ಇಲಾಖೆ ಇಲಾಖೆಯನ್ನು ಅಳೆದಾಡುವುದನ್ನು ನಿಲ್ಲಿಸಲು ಈ ಕಾರ್ಯಕ್ರಮವಾಗಿದೆ .
ಇದರ ಜೊತೆಗೆ ಕಂದಾಯ ಇಲಾಖೆಯ ಹಲವು ಯೋಜನೆ ಗಳನ್ನು ರೈತರ ಮನೆ ಬಾಗಿಲಿಗೆ ತಲುಪಿಸುವ ವಿನೂತನ ಕಾರ್ಯಕ್ರಮವನ್ನು ಸರಕಾರ ಜಾರಿ ಮಾಡಿದೆ. ತಾಲೂಕಿನ ಐದು ಕಡೆಗಳಲ್ಲಿ ಕಾರ್ಯಕ್ರಮ ಮಾಡಲಾಗಿತ್ತು, ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಸಮನ್ವಯತೆ ಯಿಂದ ಅನೇಕ ಸಮಸ್ಯೆಗಳು ಬಗೆಹರಿಸಲು ಸಹಾಯ ವಾಗಿದೆ ಎಂದು ಅವರು ಹೇಳಿದರು.

ಗ್ರಾ.ಪಂ.ಅಧ್ಯಕ್ಷ ಪ್ರಕಾಶ್ ಅಳ್ವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಮಮತಾ, ತಾಲೂಕು ಸಹಾಯಕ ನಿರ್ದೇಶಕ ಹರೀಶ್, ಗ್ರೇಡ್ 2 ತಹಶೀಲ್ದಾರ್ ಕವಿತಾ, ಗ್ರಾ.ಪಂ.ಸದಸ್ಯರಾದ ಉಮೇಶ್ ಪರಿಮೊಗರು, ವಿಜಯಪುರುಷೋತ್ತಮ ಪೂಜಾರಿ, ಚಂದ್ರಹಾಸ ಕಾಗುಡ್ಡೆ, ರಘವೀರ್ ಆಚಾರ್ಯ ಗರ್ಗಲ್, ಚೈತ್ರಾ ನವೀನ್ ಪೂಜಾ ರಿ, ಗೀತಾ ಗಣೇಶ್, ಉಪತಹಶೀಲ್ದಾರ್ ಗಳಾದ ನರೇಂದ್ರ ನಾಥ್ ಭಟ್, ನವೀನ್ ಬೆಂಜನಪದವು, ಪಾಣೆಮಂಗಳೂರು ಕಂದಾಯ ನಿರೀಕ್ಷಕ ವಿಜಯ್ ಆರ್, ಗ್ರಾಮ ಕರಣೀಕ ನಾಗರಾಜ್ ಹಾಗೂ ವಿವಿಧ ಇಲಾಖಾ ಅಧಿಕಾರಿ ಗಳು ಮತ್ತು ಕಂದಾಯ ಇಲಾಖಾ ಸಿಬ್ಬಂದಿ ಗಳು ಹಾಜರಿದ್ದರು.
ಗ್ರಾ.ಪಂ.ಪಿ.ಡಿ.ಒ
ಶಿವಲಾಲ್ ಚೌಹಾನ್ ಸ್ವಾಗತಿಸಿ ದರು.

More articles

Latest article