Saturday, April 6, 2024

ನಿವೇಶನದ ಗೊಂದಲಕ್ಕೆ ಕಾಂಗ್ರೇಸ್ ಸರಕಾರ ಕಾರಣ: ವಸತಿ ಸಚಿವ ಸೋಮಣ್ಣ ಆರೋಪ

ಬಂಟ್ವಾಳ: ರಾಜ್ಯದಲ್ಲಿ ಯಾವುದೇ ಸಮಯದಲ್ಲಿ ಚುನಾವಣೆ ನಡೆದರೂ ನಾವು ಎದುರಿಸಲು ಸಿದ್ದರಿದ್ದು, ಮೋದಿಯವರ ಹಾಗೂ ಬೊಮ್ಮಾಯಿ ಅವರ ಜನಪರ ಯೋಜನೆಯನ್ನು ಜನರ ಮುಂದಿಟ್ಟುಕೊಂಡು ರಾಜ್ಯದಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬರುವುದು ನಮ್ಮ ಮೊದಲ ಆದ್ಯತೆಯಾಗಿದ್ದು, ಅ‌ನಿಟ್ಟಿನಲ್ಲಿ ಯೋಜನೆ ರೂಪಿಸಲಾಗಿದೆ ಎಂದು ವಸತಿ ಸಚಿವ ಸೊಮಣ್ಣ ಅವರು ಹೇಳಿದರು .
‌ ಅವರು ಬಡಾಜೆ ರವಿಶಂಕರ್ ಶೆಟ್ಟಿ ಅವರ ಮನೆಯಲ್ಲಿ ‌ಅವರ ತಂದೆಗೆ 100 ವರ್ಷ ತುಂಬಿದ ಸಂತೋಷ ಕೂಟದ ಕಾರ್ಯಕ್ರಮ ದಲ್ಲಿ ಪಾಲ್ಗೊಂಡು ವಾಪಾಸು ಹೋಗುವ ವೇಳೆ ಪ್ರವಾಸಿ ಮಂದಿರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದರು.
ಪಂಚರಾಜ್ಯಗಳಲ್ಲಿ ಜನ ಯಾವ ತೀರ್ಮಾನ ಮಾಡಿ ಮತ ನೀಡಿ ಬಿಜೆಪಿ ಯನ್ನು ಗೆಲ್ಲಿಸಿದ್ದಾರಾ ಅದೇ ಮಾದರಿಯ ಲ್ಲಿ ದೇಶಕ್ಕೋಸ್ಕರ ನರೇಂದ್ರ ಮೋದಿಯವರ ಚಿಂತನೆಯ ನ್ನು ಪರಿಚಯಿಸುವುದೇ ನಮ್ಮ ಕೆಲಸ ಎಂದು ಅವರು ಹೇಳಿದರು.
ಗ್ರಾಮೀಣ ಭಾಗದಲ್ಲಿ ಹಿಂದಿನ ಸರಕಾರ ಮಾಡಿದ ಗೊಂದಲ ಗೂಡಿನಿಂದ 18 ಲಕ್ಷ ಮನೆಗಳು 6ಲಕ್ಷದ 60 ಸಾವಿರ ಸೈಟುಗಳು ಕೇಂದ್ರ ಸರಕಾರಕ್ಕೆ ಮಾಹಿತಿ ಕೊಡದೆ ತಿರಸ್ಕರಿಸಿದ್ದಾರೆ.
ಅ ಬಳಿಕ ಪ್ರಧಾನ ಮಂತ್ರಿಗಳ ಸೂಚನೆಯಂತೆ ಮುಖ್ಯಮಂತ್ರಿ ಗಳು 5 ಲಕ್ಷ ಮನೆಗಳು 6612 ಕೋಟಿ ರೂ ವೆಚ್ಚದಲ್ಲಿ 4. ಲಕ್ಷ ಮನೆ ಗ್ರಾಮೀಣ ಭಾಗಕ್ಕೆ ಹಾಗೂ 1 ಲಕ್ಷ ನಗರ ಪ್ರದೇಶಕ್ಕೆ ಮನೆ ನೀಡುತ್ತಿದ್ದೇವೆ.
ಬಂಟ್ವಾಳ ತಾಲೂಕಿಗೆ ಅಂದಾಜು 2500 ಮನೆಗಳಿಗೆ ಅಧಿವೇಶನ ಮುಗಿದ ಕೂಡಲಣೆ ಎಪ್ರಿಲ್ ತಿಂಗಳಿನಲ್ಲಿ ಕಾರ್ಯದೇಶ ಮಾಡುತ್ತೇವೆ.
2023 ರ ಚುನಾವಣೆ ಮೊದಲು ಎಲ್ಲಾ ಮನೆಗಳ ಆದೇಶವನ್ನು ಸಂಪೂರ್ಣ ಮಾಡುತ್ತೇವೆ ಎಂದ ಅವರು ಈ ಗೊಂದಲಗಳಿಗೆ ಹಿಂದಿನ ಕಾಂಗ್ರೇಸ್ ಸರಕಾರವೇ ಕಾರಣವಾಗಿದ್ದು, ಪ್ರಸ್ತುತ ದಿನಗಳಲ್ಲಿ ಏನೋ ಸಮ್ಮನೆ ಸುಮ್ಮನೆ ಮಾತನಾಡುತ್ತಿದ್ದಾರೆ ಎಂದು ಆರೋಪ ವ್ಯಕ್ತಪಡಿಸಿದರು.
ದ.ಕ.ಜಿಲ್ಲೆ ಸಹಿತ ಕಾರವಾರ, ಉಡುಪಿ ಬೈದೂಂರು ಸೇರಿಸಿಕೊಂಡು ಎಲ್ಲರಿಗೂ ಮನೆ ನೀಡುತ್ತೇವೆ. ಕರಾವಳಿ ಭಾಗದ ಯಾವುದೇ ಶಾಸಕರ ಬಗ್ಗೆ ಏನೋ ಸಣ್ಣ ಚಕಾರವೆತ್ತಲು ಆಗುವುದಿಲ್ಲ, ಎಲ್ಲಾ ಶಾಸಕರು ಪಾರದರ್ಶಕವಾಗಿ ಆಡಳಿತ ಮಾಡುತ್ತಿದ್ದಾರೆ, ಹಾಗಾಗಿ ಕಾರ್ಯದೇಶ ಮಾಡಿ ಮನೆ ನಿವೇಶನ ನೀಡುತ್ತೇವೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು, ಬೈಂದೂರು ಶಾಸಕ ಸುಕುಮಾರ್ ಶೆಟ್ಟಿ, ಪುರಸಭಾ ಸದಸ್ಯ ಎ.ಗೋವಿಂದ ಪ್ರಭು, ಉದ್ಯಮಿ ಉದಯ ಕುಮಾರ್ ರಾವ್, ಉಧ್ಯಮಿ ವಿವೇಕ್ ಶೆಟ್ಟಿ ನಗ್ರಿಗುತ್ತು ಉಪಸ್ಥಿತರಿದ್ದರು.

More from the blog

ದಿನದಿಂದ ದಿನಕ್ಕೆ ಏರುತ್ತಿದೆ ತಾಪಮಾನ : ಕಡಬ, ಅಜೆಕಾರಿನಲ್ಲಿ ದಾಖಲೆಯ ಉಷ್ಣಾಂಶ

ಮಂಗಳೂರು: ಮುಂದಿನ ಎರಡು ದಿನಗಳ ಕಾಲ ಬಿಸಿಲಿನ ಶಾಕ ಮತ್ತಷ್ಟು ಹೆಚ್ಚಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ ಕರಾವಳಿ ಭಾಗದಲ್ಲಿ ತಾಪಮಾನ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿದ್ದು, ಎ. 4ರಿಂದ 5ರ...

ಕಡಬ: ಚೇರು ಪ್ರದೇಶದ ಮನೆಗೆ ಶಂಕಿತರ ಭೇಟಿ : ಊಟ ಮಾಡಿ, ಸಾಮಗ್ರಿ ಪಡೆದು ತೆರಳಿದ ಶಂಕಿತರು

ಸುಬ್ರಹ್ಮಣ್ಯ: ಕಡಬ ಪೊಲೀಸ್‌ ಠಾಣಾ ವ್ಯಾಪ್ತಿಯ ಮನೆಯೊಂದಕ್ಕೆ ಗುರುವಾರ ರಾತ್ರಿ ವೇಳೆ ಶಂಕಿತರ ತಂಡ ಆಗಮಿಸಿ ಊಟ, ಮಾಡಿ ದಿನಸಿ ಸಾಮಾಗ್ರಿಗಳನ್ನು ಪಡೆದು ತೆರಳಿರುವ ವಿಷಯ ಶುಕ್ರವಾರ ಸಂಜೆ ವೇಳೆಗೆ ಬೆಳಕಿಗೆ ಬಂದಿದೆ. ತಾಲೂಕಿನ...

ಮತದಾನ ಜಾಗೃತಿ ಅಂಗವಾಗಿ ಸೆಲ್ಫಿ, ಸಹಿ ಅಭಿಯಾನಕ್ಕೆ ಚಾಲನೆ

ಮತದಾರರರಲ್ಲಿ ಮತದಾನ ಜಾಗೃತಿ ಮೂಡಿಸುವ ಸಲುವಾಗಿ ಬಂಟ್ವಾಳ ತಾಲೂಕು ಪಂಚಾಯತ್, ತಾಲೂಕು ಆಡಳಿತ ಮತ್ತು ತಾಲೂಕು ಸ್ವೀಪ್ ಸಮಿತಿ ವತಿಯಿಂದ ಎ‌.5ರಂದು ಸೆಲ್ಫಿ, ಸಹಿ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ...

ಬಂಟ್ವಾಳ ವಿಧಾನಸಭಾ ಕ್ಷೇತ್ರದ ಪ್ರಮುಖರ ಮನೆಗೆ ಲೋಕಸಭಾ ಅಭ್ಯರ್ಥಿ ಬ್ರಿಜೇಶ್ ಚೌಟ ಭೇಟಿ

ಬಂಟ್ವಾಳ: ರಾಷ್ಟ್ರದ ಹಿತಾಸಕ್ತಿಯ ದೃಷ್ಟಿಯಿಂದ, ವಿಕಸಿತ ಭಾರತದ ಸಂಕಲ್ಪಕ್ಕೆ ಮತ್ತೊಮ್ಮೆ ಮೋದಿಯವರು ಪ್ರಧಾನಿಯಾಗಬೇಕು, ಈ ನಿಟ್ಟಿನಲ್ಲಿ ರಾಜ್ಯದ ಪ್ರತಿಯೊಂದು ಕ್ಷೇತ್ರದಲ್ಲಿ ಬಿಜೆಪಿಯ ಅಭ್ಯರ್ಥಿ ಗೆಲುವು ಸಾಧಿಸಬೇಕಾಗಿದೆ ಎಂದು ಮಂಗಳೂರು ಲೋಕಸಭಾ ಅಭ್ಯರ್ಥಿ ಬ್ರಿಜೇಶ್...