ಬಂಟ್ವಾಳ; ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿಸಿ ಟ್ರಸ್ಟ್ (ರಿ.) ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಪೊಳಲಿ ವಲಯ ಮೇರಮಜಲು, ಮತ್ತು ಕೊಡ್ಮಾಣ್ ಒಕ್ಕೂಟ ವಲಯ ಮಟ್ಟದ ಸಾಧನಾ ಸಮಾವೇಶ ಮತ್ತು ಒಕ್ಕೂಟದ ಪದಗ್ರಹಣ ಸಮಾರಂಭ ಶ್ರೀ ವ್ಯಾಘ್ರೇಶ್ವರಿ ಭಜನಾ ಮಂದಿರ ತೇವುಕಾಡ್ ಇಲ್ಲಿ ನಡೆಯಿತು.
ಸಮಾರಂಭದ ಉದ್ಘಾಟನೆಯನ್ನು ಕಾಂತಪ್ಪ ಶೆಟ್ಟಿ ನೆರವೇರಿಸಿದರು.
ಕಾರ್ಯಕ್ರಮದ ಅಧ್ಯಕ್ಷ ತೆಯನ್ನು ಜಯಶ್ರೀ ಕರ್ಕೇರ ವಹಿಸಿದ್ದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಯ ಜಿಲ್ಲಾ ನಿರ್ದೇಶಕ ರಾದ ಸತೀಶ್ ಶೆಟ್ಟಿ, ಒಕ್ಕೂಟದ ಪದಾಧಿಕಾರಿಗಳಿಗೆ ಜವಬ್ದಾರಿ ಹಸ್ತಾಂತರ ಮಾಡಿದರು.
ಪೊಳಲಿ ವಲಯ ಮೇಲ್ವಿಚಾರಕಿ ಹರಿಣಾಕ್ಷಿ ರೈ, ಪವನ್ ಅಜ್ಜಿಬೆಟ್ಟು, ಹರೀಶ್ ಕುಮಾರ್ ಕಾಂಜಿಲ್ ಕೋಡಿ ಉಪಸ್ಥಿತರಿದ್ದರು.