Tuesday, October 17, 2023

ಮಾ:6 ರಂದು ಸಜೀಪ ಮೂಡದ ಪೆಲತ್ತಕಟ್ಟೆಯಲ್ಲಿ ಶ್ರೀ ಕಟೀಲು ಕ್ಷೇತ್ರ ಮಹಾತ್ಮೆ ಬಯಲಾಟ

Must read

ಶ್ರೀ ದುರ್ಗಾಪರಮೇಶ್ವರೀ ಭಕ್ತವೃಂದ ಸಜೀಪಮಾಗಣೆ

(ಸಜೀಪ ಮೂಡ, ಸಜೀಪ ಮುನ್ನೂರು, ಸಜೀಪ ನಡು, ಸಜೀಪ ಪಡು)
ಇವರ ವತಿಯಿಂದ ಮಾ.
06 ರಂದು ಭಾನುವಾರ ರಾತ್ರಿ ಗಂಟೆ 8.30ರಿಂದ ಸಜೀಪಮೂಡದ ಪೆಲತ್ತಕಟ್ಟೆ ಮೈದಾನದಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ

ದಶಾವತಾರ ಯಕ್ಷಗಾನ ಮಂಡಳಿ ಕಟೀಲು ಇವರು
ಶ್ರೀ ಕಟೀಲು ಕ್ಷೇತ್ರ ಮಹಾತ್ಮ
ಎಂಬ ಋಣ್ಯ ಕಥಾಭಾಗವನ್ನು ಷಷ್ಟಮ ವರ್ಷದ ಸೇವಾ ಬಯಲಾಟವಾಗಿ ಆಡಿತೋರಿಸಲಿರುವರು.
ಅದೇ ದಿನ
ಸಂಜೆ ಗಂಟೆ 5,00ಕ್ಕೆ ಸಜೀಪ ಮುನ್ನೂರು ಯುವಕ ಸಂಘ (ರಿ.) ಕಂದೂರು
ಇಲ್ಲಿಂದ ಪೆಲತ್ತಕಟ್ಟೆಗೆ ನವಜೀವನ ವ್ಯಾಯಾಮ ಶಾಲೆ, ನಾಗನವಳಚ್ಚಿಲ್ ಇವರಿಂದ ತಾಲೀಮ್ ಪ್ರದರ್ಶನ ಹಾಗೂ ಮಾಗಣೆಯ ಸಂಘ ಸಂಸ್ಥೆಗಳಿಂದ ಭಜನೆ, ಚೆಂಡೆ, ಬ್ಯಾಂಡ್ ವಾದನ ಹಾಗೂ ಸುಡುಮದ್ದು ಪ್ರದರ್ಶನಗಳೊಂದಿಗೆ
ಮೇಳದ ದೇವರ ಭವ್ಯ ಮೆರವಣಿಗೆ ನಡೆಯಲಿದೆ.

ಸಂಜೆ ಗಂಟೆ 6.30ರಿಂದ
ಧಾರ್ಮಿಕ ಪ್ರಬೋಧನಾ ಸಭಾ ಕಾರ್ಯಕ್ರಮ ನಡೆಯಲಿದ್ದು,
– ದೀಪೋಜ್ವಲನ ಮತ್ತು ಆಶೀರ್ವಾದವನ್ನು ಒಡಿಯೂರು ಗುರುದೇವದತ್ತ ಸಂಸ್ಥಾನ ದ ಗುರುದೇವಾನಂದ ಸ್ವಾಮೀಜಿ,
ಶ್ರೀಧಾಮ ಮಾಣಿಲದ
ಶ್ರೀ ಶ್ರೀ ಶ್ರೀ ಯೋಗಿ ಕೌಸ್ತುಭ ಮೋಹನದಾಸ ಸ್ವಾಮೀಜಿಯರ
ದಿವ್ಯ ಉಪಸ್ಥಿತಿಯಲ್ಲಿ ನಡೆಯಲಿದೆ.
ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಅನುವಂಶಿಕ ಅರ್ಚಕರಾದ
ಕಮಲಾದೇವಿ ಪ್ರಸಾದ ಅಸ್ರಣ್ಣರು ,ಹಾಗೂ ಕಟೀಲು ಸದಾನಂದ ವೆಂಕಟೇಶ ಅಸ್ರಣ್ಣರು ಉಪಸ್ಥಿತರಿರುವರು.

ರಾತ್ರಿ ಗಂಟೆ 8.30ಕ್ಕೆ
ಚೌಕಿ ಪೂಜೆ, ಪ್ರಸಾದ ವಿತರಣೆ ನಂತರ ಮಹಾ ಅನ್ನಸಂತರ್ಪಣೆ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.

More articles

Latest article