Wednesday, October 18, 2023

ಹೆದ್ದಾರಿ ಕಾಮಗಾರಿ ವೇಳೆ ಪುರಸಭಾ ಇಲಾಖೆಯ ಕುಡಿಯುವ ನೀರಿನ ಪೈಪ್ ಲೈನ್ ಗೆ ಹಾನಿ: ಪುರಸಭಾ ಅಧ್ಯಕ್ಷ ಮಹಮ್ಮದ್ ಶರೀಫ್ ನೇತ್ರತ್ವದಲ್ಲಿ ವಿಶೇಷ ಸಭೆ

Must read

ಬಂಟ್ವಾಳ: ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಅವಧಿಯಲ್ಲಿ ಮೆಲ್ಕಾರ್ ನಲ್ಲಿ ಕುಡಿಯವ ನೀರಿನ ಪೈಪ್ ಲೈನ್ ಹಾನಿಯಾದ ಬಗ್ಗೆ ಹಾಗೂ ಸಮಸ್ಯೆ ಪರಿಹಾರಕ್ಕೆ ಹೆದ್ದಾರಿ ಇಲಾಖೆಯ ಅಧಿಕಾರಿಗಳೊಂದಿಗೆ ಹಾಗೂ ಪುರಸಭೆ ಇಲಾಖೆ ಮತ್ತು ಜನಪ್ರತಿನಿಧಿಗಳ ಜೊತೆ ವಿಶೇಷ ಸಭೆ ಪುರಸಭಾ ಅಧ್ಯಕ್ಷ ಮಹಮ್ಮದ್ ಶರೀಫ್ ಆವರ ಅಧ್ಯಕ್ಷತೆಯಲ್ಲಿ ಗುರುವಾರ ಬೆಳಿಗ್ಗೆ ಪುರಸಭಾ ಇಲಾಖೆಯ ಕಚೇರಿಯಲ್ಲಿ ನಡೆಯಿತು.

ಕಾಮಗಾರಿಯ ವೇಳೆ ಪುರಸಭೆ ಇಲಾಖೆಯಿಂದ ಯಾವ ರೀತಿಯ ಸಹಕಾರ ಬೇಕು ಎಂಬುದರ ಬಗ್ಗೆ ಚರ್ಚೆ ಮಾಡುವ ಉದ್ದೇಶದಿಂದ ಸಭೆ ಕರೆಯಲಾಗಿದೆ ಎಂದು ಅವರು ಹೇಳಿದರು.

ಮೆಲ್ಕಾರ್ ಭಾಗದಲ್ಲಿ ಕಾಮಗಾರಿಯ ವೇಳೆ ಪೈಪ್ ಲೈನ್ ಗೆ ಹಾನಿಯಾದರೆ ಎಲ್ಲವನ್ನು ಹೆದ್ದಾರಿ ಇಲಾಖೆಯ ವತಿಯಿಂದ ಆಗಬೇಕು ಎಂದು ಪುರಸಭಾ ಅಧ್ಯಕ್ಷ ಮಹಮ್ಮದ್ ಶರೀಫ್ ಇಂಜಿನಿಯರ್ ಹಾಗೂ ಅಧಿಕಾರಿಗಳ ಗಮನಕ್ಕೆ ತಂದರು.
ಮೆಲ್ಕಾರ್ ಭಾಗದ ಜನರ ಕುಡಿಯುವ ನೀರಿನ ಬದಲಿ ಪರ್ಯಾಯ ವ್ಯವಸ್ಥೆ ಮಾಡಿಕೊಡುವಂತೆ ಅಧ್ಯಕ್ಷ ರು ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಚರ್ಚೆಯಾದ ವಿಚಾರಗಳನ್ನು ಮೇಲಾಧಿಕಾರಿಗಳಿಗೆ ವರದಿ ಒಪ್ಪಿಸುವ ಕಾರ್ಯ ಮಾಡಿದರೆ ಸಾಲದು , ಅಗತ್ಯವಾಗಿ ಅಲ್ಲಿನ ಸಮಸ್ಯೆ ಗಳಿಗೆ ಪರಿಹಾರ ಮಾಡುವ ಕೆಲಸ ಮಾಡಿ, ಇಲ್ಲದಿದ್ದರೆ ನಾನೇ ಮುಂಚೂಣಿ ಯಲ್ಲಿ ನಿಂತು ಜನಪ್ರತಿನಿಧಿಗಳು ಹಾಗೂ ಅಲ್ಲಿನ ಸಾರ್ವಜನಿಕರ ಜೊತೆ ಗುತ್ತಿಗೆದಾರರ ವಿರುದ್ಧ ಪ್ರತಿಭಟನೆ ನಡೆಸಿ , ಕಾಮಗಾರಿ ನಿಲ್ಲಿಸಲು ಒತ್ತಾಯ ಮಾಡುವುದಾಗಿ ಅವರು ಎಚ್ಚರಿಸಿದರು.
ಕಾಮಗಾರಿಯ ವೇಳೆ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಸಂಸದ ಹಾಗೂ ಶಾಸಕರಿಗೂ ಮಾಹಿತಿ ನೀಡಿದ್ದೇವೆ.
ಸ್ಥಳೀಯ ಇಲಾಖೆಯನ್ನು ವಿಶ್ವಾಸ ಕ್ಕೆ ತೆಗೆದುಕೊಂಡು ಕಾಮಗಾರಿ ನಡೆಸಬೇಕು ಎಂದು ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಹೆದ್ದಾರಿ ಕಾಮಗಾರಿ ಆರಂಭವಾಗುವ ಮುನ್ನವೆ
ಮೂರು ಎಸ್ಟೆಮೇಟ್ ಗಳನ್ನುಇಲಾಖೆಗೆ ಕೊಟ್ಟಿದ್ದೇನೆ, ಅಬಳಿಕ ಹಲವಾರು ಗುತ್ತಿಗೆದಾರರು ಬದಲಾಗಿ ಪ್ರಸ್ತುತ ಕೆ.ಎನ್.ಆರ್.ಸಿ.ಕಂಪೆನಿ ಗುತ್ತಿಗೆ ವಹಿಸಿದೆ, ಕಂಪೆನಿ ಈ ಕೆಲಸ ಮಾಡಬೇಕು ಹೊರತು ಒಳಚರಂಡಿ ಇಲಾಖೆಗೆ ಅದು ಅನ್ವಯಿಸುವುದಿಲ್ಲ , ಆದರೆ ಸಾರ್ವಜನಿಕರಿಗೆ ಗೆ ತಪ್ಪು ಮಾಹಿತಿ ನೀಡಲಾಗಿದೆ ಇಂಜಿನಿಯರ್ ಶೋಭಾ ಲಕ್ಮೀ ಅವರು ಹೇಳಿದರು.
ನನಗೂ ಬೇಜಾರು ಆಗಿದೆ, ಎಲ್ಲವನ್ನು ನನ್ನ ಮೇಲೆ ಗೂಬೆ ಕೂರಿಸುವ ಕೆಲಸ ಆಗಿದೆ. ಸಾರ್ವಜನಿಕರಿಗೆ ತಪ್ಪು ಮಾಹಿತಿ ನೀಡಲಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಹೆದ್ದಾರಿ ಇಲಾಖೆಯಿಂದ ಕಾಮಗಾರಿ ನಡೆಯುವ ವೇಳೆ ಆಗುವ ಎಲ್ಲಾ ಸಮಸ್ಯೆ ಗಳ ಪರಿಹಾರವನ್ನು ಹೆದ್ದಾರಿ ಇಲಾಖೆಯೆ ಮಾಡಬೇಕು ಹೊರತು ನಾವು ಅಲ್ಲ ಎಂದು ಅವರು ಈ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.
ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಪುರಸಭೆ ಇಲಾಖೆ ಹಾಗೂ ಅಧಿಕಾರಿಗಳ ಸಂಪೂರ್ಣ ಸಹಕಾರ ಇದೆ, ಆದರೆ ಕಾಮಗಾರಿಯ ವೇಳೆ ಪುರಸಭೆಗೆ ಯಾವುದೇ ಮಾಹಿತಿ ನೀಡದೆ ಪುರಸಭೆಯ ನೀರಿನ ಪೈಪ್ ಗಳಿಗೆ ಹಾನಿಯಾಗುವಂತೆ ಮಾಡಿದ್ದಲ್ಲದೆ, ಸಾರ್ವಜನಿಕ ರ ಕುಡಿಯುವ ನೀರಿಗೆ ತೊಂದರೆ ನೀಡಿದ್ದು ಸರಿಯಾ? ಪುರಸಭಾ ಇಲಾಖೆಗೆ ಸೇರಿದ ಹಳೆಯ ಪೈಪ್ ಲೈನ್ ಗಳನ್ನು ವರ್ಗಾವಣೆ ಮಾಡಿ ಹೊಸ ಪೈಪ್ ಲೈನ್ ಅಳವಡಿಸಿಕೊಡಿ ಎಂದು ಪುರಸಭಾ ಸದಸ್ಯ ಮಹಮ್ಮದ್ ಸಿದ್ದೀಕ್ ಇಂಜಿನಿಯರ್ ಗೆ ತಿಳಿಸಿದರು.
ಅದಕ್ಕೆ ಸ್ಪಂದಿಸಿದ ಇಂಜಿನಿಯರ್ ಅದಷ್ಟು ಶೀಘ್ರವಾಗಿ ಪೈಪ್ ಲೈನ್ ನ ಕೆಲಸ ಗುತ್ತಿಗೆದಾರರ ಮೂಲಕ ಮಾಡಿಕೊಡಲಾಗುವುದು ಎಂದು ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಕನ್ಸ್ ಲ್ಟೆಂಟ್ ಇಂಜಿನಿಯರ್
ಲಿಖಿತ್ ಭರವಸೆ ನೀಡಿದರು.
ಉಪಾಧ್ಯಕ್ಷೆ ಜೆಸಿಂತಾ ಡಿ.ಸೋಜ, ಸದಸ್ಯೆ ಗಾಯತ್ರಿ ಪ್ರಕಾಶ್, ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ,ಇಂಜಿನಿಯರ್ ಡೊಮೆನಿ ಡಿಮೆಲ್ಲೊ, ಸಿಬ್ಬಂದಿ ಮೀನಾಕ್ಷಿ ಉಪಸ್ಥಿತರಿದ್ದರು.

More articles

Latest article