Friday, April 5, 2024

ಪುಣಚ: ಪರಿಯಾಲ್ತಡ್ಕ ಮುಹ್ ಯಿದ್ದೀನ್ ನವೀಕೃತ ಮಸೀದಿ ಉದ್ಘಾಟನೆ

 

ವಿಟ್ಲ: ನಮ್ಮ ಊರಿನಲ್ಲಿ ಒಂದು ಸುಂದರ ಮಸೀದಿಯ ನವೀಕೃತ ಮಸೀದಿ ನಿರ್ಮಾಣ ಅಭಿಮಾನವಾಗಿದೆ. ದೇವರ ದಯೆಯಿಂದ, ನಮ್ಮ ನಿಸ್ವಾರ್ಥ ಸೇವೆಯಿಂದ ಸುಂದರ ಮಸೀದಿ ನಿರ್ಮಾಣಕ್ಕೆ ಸಾಧ್ಯವಾಗಿದೆ ಎಂದು ಪರಿಯಾಲ್ತಡ್ಕ ಮುಹ್ ಯಿದ್ದೀನ್ ಜುಮ್ಮಾ ಮಸೀದಿ ಖತೀಬು ಹಸೈನಾರ್ ಫೈಝಿ ಹೇಳಿದರು.

ಅವರು ಶುಕ್ರವಾರ ಪುಣಚ ಪರಿಯಾಲ್ತಡ್ಕ ಮುಹ್ ಯಿದ್ದೀನ್ ಜುಮಾ ಮಸೀದಿಯ ನವೀಕೃತ ಮಸೀದಿಯ ಉದ್ಘಾಟನಾ ಸಮಾರಂಭದ ಸಭಾ ಕಾರ್ಯಕ್ರಮದಲ್ಲಿ ದುವಾ ನೆರವೇರಿಸಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಮಸೀದಿಯ ಅಧ್ಯಕ್ಷ ಎಂ.ಎಸ್ ಮಹಮ್ಮದ್ ನಮ್ಮ ಬದುಕಿನ ದಿನಗಳಲ್ಲಿ ಉತ್ತಮ ಕೆಲಸವನ್ನು ಮಾಡಿದಾಗ ದೇವರ ಆಶೀರ್ವಾದ ಲಭಿಸುತ್ತದೆ. ನಮ್ಮ ಊಹೆಗೂ ನಿಲುಕದ ಕೆಲಸ ಈ ಮಸೀದಿಯಲ್ಲಿ ಆಗಿದೆ. ಧಾರ್ಮಿಕ ಬೋಧನೆ ನೀಡುವ ಮೂಲಕ ನಮ್ಮನ್ನು ತಿದ್ದಿ ತೀಡುವ ಕೆಲಸ ಮಸೀದಿಗಳಿಂದ ಆಗುತ್ತಿದೆ ಎಂದರು.

ಮನೆಲ ಚರ್ಚ್ ನ ಧರ್ಮಗುರುಗಳಾದ  ಪಾವ್ಲ್ ಪ್ರಕಾಶ್ ರವರು ಮಾತನಾಡಿ ಮನುಷ್ಯನ ಜೀವನದಲ್ಲಿ ಮನಸ್ಸು, ಮನೆ, ದೇವಾಲಯ ಪ್ರಮುಖವಾದುದು. ಏಕತೆಯಲ್ಲಿ ಜೀವನ ನಡೆಸಿದರೆ ಆಪತ್ತುಬಾರದು. ಒಟ್ಟಾಗಿ ಪ್ರೀತಿ, ಸಹನೆಯಿಂದ ಜೀವನ ಮಾಡುವ. ಎಲ್ಲರಿಗೂ ಒಳಿತಾಗಲಿ ಎಂದರು

ನ್ಯಾಯವಾದಿ ಕುಂಬ್ರ ದುರ್ಗಾಪ್ರಸಾದ್ ರೈ ಅವರು ಮಾತನಾಡಿ ನಿಜ ಅರ್ಥದ ಸೌಹಾರ್ದತೆಯ ಬಗ್ಗೆ ನಾವೆಲ್ಲರೂ ಅರ್ಥ ಮಾಡಿಕೊಳ್ಳುವ ಕಾಲ ಸನ್ನಿಹಿತವಾಗಿದೆ. ನಮ್ಮ ಹಿರಿಯರ ಕಾಲದಲ್ಲಿ ಬದುಕುತ್ತಿದ್ದ ದಿನಗಳ ಬಗ್ಗೆ ಸಿಂಹಾವಲೋಕನ ಮಾಡಬೇಕಾಗಿದೆ. ಉತ್ಯಮ ವಿಚಾರಗಳೊಂದಿಗೆ ಬದುಕಿದಾಗ ಉತ್ಯಮ ವ್ಯಕ್ತಿಯಾಗಿ ಬಾಳಬಹುದು ಎಂದರು.

ಪಿಎಫ್ ಐ ರಾಜ್ಯ ಕಾರ್ಯದರ್ಶಿ ಎ.ಕೆ ಅಶ್ರಪ್ ಇದೊಂದು ಭಾವೈಕ್ಯತೆಯ ಕೊಂಡಿಯಾಗಿದೆ. ಮಸೀದಿ ಎಂದರೆ ಸೃಷ್ಟಿಕರ್ತನನ್ನು ಪ್ರಾರ್ಥಿಸುವ ಕೇಂದ್ರ ವಾಗಿದೆ‌.‌ ಇದೀಗ ಪ್ರತಿಯೊಂದು ವಿಚಾರ ವಿವಾದವಾಗಿ ಬದಲಾಗುತ್ತಿದೆ. ಸೌಹಾರ್ದತೆಯಿಂದ ಬದುಕುವ ಈ ದೇಶದಲ್ಲಿ ಸೌಹಾರ್ದತೆಗೆ ಕೊಳ್ಳಿಇಡುವ ಕೆಲಸವಾಗುತ್ತಿದೆ. ಧರ್ಮ ಜಾತಿಯ ಮಧ್ಯೆ ಕಂದಕವನ್ನು ತೋಡಿ ಜನರನ್ನು ಎತ್ತಿಕಟ್ಟಿ ರಾಜಕೀಯ ಶಕ್ತಿಯನ್ನು‌ ನಾವು ಅರ್ಥ ಮಾಡಿಕೊಳ್ಳಬೇಕು. ಸಮುದಾಯದ ಮದರಸಗಳಲ್ಲಿ ಸೌಹಾರ್ದತೆ,ಸಹೋದರತೆಯನ್ನು ಬೋಧಿಸುತ್ತಿದೆ. ಮುಸ್ಲೀಮರು ಧಾರ್ಮಿಕ ಚೌಕಟ್ಟಿನಲ್ಲಿ ಬದುಕುವವರು. ಒಂದು ಕೈಯ್ಯಲ್ಲಿ ಕುರಾನ್ ಮತ್ತೊಂದು ಕೈಯ್ಯಲ್ಲಿ ಸಂವಿಧಾನವನ್ನು ಎತ್ತಿಹಿಡಿಯುವ ಕೆಲಸವಾಗಬೇಕಾಗಿದೆ. ನ್ಯಾಯಕ್ಕಾಗಿ ಧ್ವನಿ ಎತ್ತುವ ಕಾಲದಲ್ಲಿ ನಾವಿದ್ದೇವೆ ಎಂದರು.
ಎಸ್ ಎಸ್ ಎಫ್ ಇಹ್ ಸಾನ್ ರಾಜ್ಯ ಕಾರ್ಯದರ್ಶಿ ಸಿರಾಜುದ್ದೀನ್ ಸಖಾಫಿ ಕನ್ಯಾನರವರು ಮಾತನಾಡಿ ಮಸೀದಿ ಮದರಸಗಳ ಬಗ್ಗೆ ಅಪಪ್ರಚಾರ ನಡೆಸುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ಮಸೀದಿಗಳು ಕೋಮುಭಾವನೆ ಸೃಷ್ಟಿಸುವ ಕೇಂದ್ರಗಳಲ್ಲ. ಇಸ್ಲಾಂ ಎಂದೂ ಸಹ ಹಿಂಸೆಯನ್ನು ಪ್ರಚೋದಿಸುವುದಿಲ್ಲ. ಭಾರತ ದೇಶದ ಪರಂಪರೆಯನ್ನು ಒಡೆಯಲು ಯಾರಿಂದಲೂ ಸಾಧ್ಯವಿಲ್ಲ.
ಎಸ್ ಕೆ ಎಸ್ ಎಸ್ ಎಫ್ ರಾಜ್ಯಾಧ್ಯಕ್ಷ ಅನೀಸ್ ಕೌಸರಿರವರು ಮಾತನಾಡಿ  ವ್ಯಾಪಾರ ಧರ್ಮದಲ್ಲಿ ಮಸ್ಲೀಂರನ್ನು ಜಗತ್ತಿನಾಧ್ಯಂತ ಒಪ್ಪಲಾಗಿದೆ. ಮಾನವೀಯತೆಯ ವಿಚಾರದಲ್ಲಿ ಎಲ್ಲಾ ಧರ್ಮಗಳು ಒಂದೇ ಆದರ್ಶವನ್ನು ಪ್ರತಿಪಾದಿಸಿದೆ. ಭಾರತ ವಿಶ್ವ ಗುರು ಆಗಬೇಕಾದರೆ ವೈವಿಧ್ಯತೆ ನೆಲೆನಿಲ್ಲಬೇಕು ಎಂದರು.

ಬಂಟ್ವಾಳ ಸಂಯುಕ್ತ ಜಮಾಅತ್ ಅಧ್ಯಕ್ಷ ಹನೀಫ್ ಹಾಜಿ ಗೋಳ್ತಮಜಲು ಮಾತನಾಡಿದರು.
ಮಾಜಿ ಸಚಿವ ಬಿ. ರಮಾನಾಥ ರೈ,   ಪರಿಯಲ್ತಡ್ಕ ಸದರ್ ಮುಅಲ್ಲಿಂ ಅಬೂಬಕ್ಕರ್ ಸಿದ್ದೀಕ್ ರಝ್ವಿ, ಪರಿಯಲ್ತಡ್ಕ ಮುಅಲ್ಲಿಂ ಶರೀಫ್ ಸ ಅದಿ, ಅಜ್ಜಿನಡ್ಕ  ಮುಅಲ್ಲಿಂ ಉಮರುಲ್ ಫಾರುಕ್ ಹನೀಫಿ, ನೀರ್ಕಜೆ ಮುಅಲ್ಲಿಂ ನಝೀರ್ ಸ ಅದಿ, ಬಲ್ನಾಡು ರಹ್ಮಾನಿಯ ಜುಮಾ ಮಸೀದಿಯ ಖತೀಬರಾದ ರಶೀದ್ ದಾರಿಮಿ ಮೊದಲಾದವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಪರಿಯಾಲ್ತಡ್ಕ ಮುಹ್ ಯಿದ್ದೀನ್ ಜುಮಾ ಮಸೀದಿಯ ಗೌರವಾಧ್ಯಕ್ಷ ಯು.ಟಿ.ಮೂಸಕುಂಞ, ಮಸೀದಿಯ ಕಟ್ಟಡದ ಇಂಜಿನಿಯರ್ ವಿಟ್ಲದ ಅಮೇಝ್ ಕನ್ಸ್ ಸ್ಟ್ರಕ್ಷನ್ ನ ಮಾಲಕ ಮಹಮ್ಮದ್ ರಫೀಕ್ ರವರನ್ನು ಹಾಗೂ ಕಾಮಗಾರಿಗೆ ಸಹಕರಿಸಿದ ಮಾಡಿಕೊಟ್ಟಂತಹ ಕಾರ್ಮಿಕರನ್ನು ಗುರುತಿಸಲಾಯಿತು. ಪರಿಯಾಲ್ತಡ್ಕ ಮುಹ್ ಯಿದ್ದೀನ್ ಜುಮಾ ಮಸೀದಿಯ  ಅಧ್ಯಕ್ಷ ಎಂ.ಎಸ್.ಮಹಮ್ಮದ್ ಸ್ವಾಗತಿಸಿದರು. ಸಮಿತಿ ಕಾರ್ಯದರ್ಶಿ ಶಾಫಿ ಮಾಳಿಗೆ ವಂದಿಸಿದರು. ನೌಫಲ್ ಕುಡ್ತಮುಗೇರು ಕಾರ್ಯಕ್ರಮ ನಿರೂಪಿಸಿದರು.

ಮಸೀದಿ ಉದ್ಘಾಟನೆ:

ಮಾ.೨೫ರಂದು ಮಧ್ಯಾಹ್ನ ಕೆ.ಎಸ್ ಅಲೀ ತಂಙಳ್ ಕುಂಬೋಳ್ ಮಸೀದಿಯನ್ನು ಉದ್ಘಾಟಿಸಿದರು.
ಉಡುಪಿ ಸಂಯುಕ್ತ ಖಾಝಿ ಝೈನುಲ್ ಉಲಮಾ ಹಾಜಿ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ಆಶೀರ್ವಚನ ನೀಡಿದರು. ಇಬ್ರಾಹಿಂ ಪೂಕುಂಞ ತಂಙಳ್ ಉದ್ಯಾವರ ದುವಾ ದುವಾಃ ನೆರವೇರಿಸಿದರು. ಸೈಯದ್ ಮಹಮ್ಮದ್ ಶಾಫಿ ತಂಞಳ್ ಪಾನೂರ್,  ಮಹಮೂದುಲ್ ಫೈಝಿ ವಾಲೆಮುಂಡೋವು, ಪುತ್ತೂರು ಸಂಯುಕ್ತ ಜಮಾತ್ ನ ಅಧ್ಯಕ್ಷರಾದ ಕೆ.ಪಿ. ಮಹಮ್ಮದ್ ಮೊದಲಾದವರು ಉಪಸ್ಥಿತರಿದ್ದರು.
…………..

More from the blog

ಸೌಜನ್ಯ ಹೋರಾಟ ಸಮಿತಿಯಿಂದ ನೋಟ ಅಭಿಯಾನ

ಮಂಗಳೂರು: ರಾಜಕೀಯ ಪಕ್ಷಗಳು ಮತ್ತು ನ್ಯಾಯಾಂಗ ವ್ಯವಸ್ಥೆಯ ಗಮನ ಸೆಳೆಯುವ ಉದ್ದೇಶದಿಂದ ಸೌಜನ್ಯ ಪರ ಹೋರಾಟ ಸಮಿತಿ ವತಿಯಿಂದ ಮುಂಬರುವ‌ ಲೋಕಸಭಾ ಚುನಾವಣೆಯಲ್ಲಿ ನೋಟಕ್ಕೆ ಮತ ಚಲಾಯಿಸಲು ಜನ ಸಾಮಾನ್ಯರನ್ನು ಪ್ರೇರೇಪಿಸಲು ನೋಟ...

ಕಲ್ಲಡ್ಕ ಶ್ರೀರಾಮ ಭಜನಾ ಮಂದಿರಕ್ಕೆ ಲೋಕಸಭಾ ಬಿಜೆಪಿ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ ಭೇಟಿ

ಬಂಟ್ವಾಳ ತಾಲೂಕಿನ ಶಕ್ತಿಕೇಂದ್ರವಾದ ಕಲ್ಲಡ್ಕ ಶ್ರೀರಾಮ ಭಜನಾ ಮಂದಿರಕ್ಕೆ ಲೋಕಸಭಾ ಬಿಜೆಪಿ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ ಆಗಮಿಸಿ ಪ್ರಾರ್ಥನೆ ಸಲ್ಲಿಸಿ ಪ್ರಸಾದ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಕಲ್ಲಡ್ಕ ಡಾ| ಪ್ರಭಾಕರ್ ಭಟ್ ಬಿಜೆಪಿ...

ಬೆಳ್ತಂಗಡಿ: ಆನ್ ಲೈನ್ ಮೂಲಕ ಸಾಲ ನೀಡುವುದಾಗಿ ನಂಬಿಸಿ ವಂಚನೆ : ದೂರು ದಾಖಲು

ಬೆಳ್ತಂಗಡಿ: ಮಹಿಳೆಯೊಬ್ಬರಿಗೆ ಫೇಸ್‌ಬುಕ್‌ ಆಪ್‌ ಮೂಲಕ ಸಾಲ ನೀಡುವುದಾಗಿ ಅಪರಿಚಿತರರು ನಂಬಿಸಿ ವಂಚನೆ ಮಾಡಿದ ಘಟನೆ ಬೆಳ್ತಂಗಡಿ ತಾಲೂಕಿನ ತೆಂಕಕಾರಂದೂರು ಗ್ರಾಮದಲ್ಲಿ ನಡೆದಿದೆ. ವಂಚನೆಗೊಳಗಾದ ಮಹಿಳೆ ನೆಬಿಸಾ ಅವರು ಈ ಬಗ್ಗೆ ವೇಣೂರು ಪೋಲಿಸ್‌...

ಕುಕ್ಕಾಜೆ ಜಂಕ್ಷನ್ ನ ಬ್ಲೀಸ್ ಫುಲ್ ಆರ್ಕೆಡ್ ನಲ್ಲಿ ನೂತನ ಶುದ್ಧ ಸಸ್ಯಹಾರಿ ಫ್ಯಾಮಿಲಿ ರೆಸ್ಟೋರೆಂಟ್ “ಹೋಟೆಲ್ ಅನ್ನಪೂರ್ಣ” ಶುಭಾರಂಭ

ಬಂಟ್ವಾಳ ತಾಲೂಕಿನ ಕುಕ್ಕಾಜೆ ಜಂಕ್ಷನ್ ನ ಬ್ಲೀಸ್ ಫುಲ್ ಆರ್ಕೆಡ್ ನಲ್ಲಿ ಅರುಣ್ ಕುಮಾರ್, ಮಹೇಶ್ ಕುಮಾರ್, ಜನಾರ್ಧನ್ ಪೊಸೊಳಿಗೆ ಮಾಲಕತ್ವದ ನೂತನ ಶುದ್ಧ ಸಸ್ಯಹಾರಿ ಫ್ಯಾಮಿಲಿ ರೆಸ್ಟೋರೆಂಟ್. "ಹೋಟೆಲ್ ಅನ್ನಪೂರ್ಣ" ಶುಭಾರಂಭಗೊಂಡಿತು. ಶ್ರೀ...