ಅನಾರೋಗ್ಯದಿಂದ ಬಳಲುತ್ತಿದ್ದ ಪೋಲೀಸ್ ಸಿಬ್ಬಂದಿ ಯೋರ್ವ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ವಿಟ್ಲದಲ್ಲಿ ಇಂದು ನಡೆದಿದೆ.
ಎಣ್ಮಕಜೆ ಗ್ರಾಮದ ಸಾರಡ್ಕ ನಿವಾಸಿ ಗಣೇಶ್ ನಾಯ್ಕ್ (45) ಅವರು ಮೃತಪಟ್ಟ ಪೋಲೀಸ್ ಸಿಬ್ಬಂದಿ.
ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಇವರನ್ನು ವಿಟ್ಲ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇಂದು ಬೆಳಿಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಆತ ಮೃತಪಟ್ಟಿದ್ದಾನೆ.
ಮೃತ ಪೋಲೀಸ್ ಗಣೇಶ್ ನಾಯ್ಕ್ ಅವರು ಸುರತ್ಕಲ್ , ಬೆಳ್ತಂಗಡಿ, ಹಾಗೂ ವಿಟ್ಲ ದಲ್ಲಿ ಕೆಲಸ ಮಾಡಿದ್ದರು, ಇತ್ತೀಚೆಗೆ ಅವರು ಪುತ್ತೂರು ಸಂಪ್ಯ ಗ್ರಾಮಾಂತರ ಪೋಲೀಸ್ ಠಾಣೆಗೆ ವರ್ಗಾವಣೆ ಗೊಂಡಿದ್ದರು.
ಮೃತರ ಪತ್ನಿ ರೈಲ್ವೆ ಪೋಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಒರ್ವ ಮಗ ಸಹಿತ ಅಪಾರ ಬಂದುಬಳಗವನ್ನು ಅಗಲಿದ್ದಾರೆ.