ಬಂಟ್ವಾಳ ತಾಲೂಕಿನ ಕೊಳ್ನಾಡು ಗ್ರಾಮ ಪಂಚಾಯತ್ ಸಹಕಾರದೊಂದಿಗೆ ಅಲ್ ಕಾರ್ಗೋಲಾಜಿಸ್ಟಿಕ್ (ರಿ)ಮಂಗಳೂರು ಪ್ರಜ್ಞಾ ಸಲಹಾಕೇಂದ್ರ ಕಂಕನಾಡಿ ಮಂಗಳೂರು ಕೊಳ್ನಾಡು ಟೋಪ್&ಟೋಪ್ ಚಾರಿಟೇಬಲ್ ಟ್ರಸ್ಟ್(ರಿ)ಕುಡ್ತಮುಗೆರು,ಗ್ರಾಮೀಣ ಆರೋಗ್ಯ ರಕ್ಷಣೆ ಮತ್ತು ಅಭಿವೃದ್ಧಿ ಕೇಂದ್ರ ಯೆನೆಪೋಯ ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯ ದೇರಳಕಟ್ಟೆ ಇದರ ಸಹಯೋಗದೊಂದಿಗೆ ಉಚಿತ ವೈದ್ಯಕೀಯ ತಪಾಸಣಾ ಶಿಬಿರವು ಕೊಳ್ನಾಡು ಗ್ರಾಮ ಪಂಚಾಯತ್ ಕಟ್ಟಡವಾದ ಸೌಹಾರ್ದ ಭವನ ಸಾಲೆತ್ತೂರಿನಲ್ಲಿ ನಡೆಯಿತು. ಶಿಬಿರವನ್ನು ಕೊಳ್ನಾಡು ಗ್ರಾಮ ಪಂಚಾಯತ್ ಮಾಜಿ ಅದ್ಯಕ್ಷರು ಹಾಲಿ ಉಪಾಧ್ಯಕ್ಷರಾದ ಕುಳಾಲು ಸುಭಾಶ್ಚಂದ್ರ ಶೆಟ್ಟಿ ಉದ್ಘಾಟಿಸಿ ಮಾತಾಡಿ ಮನುಷ್ಯನಿಗೆ ಆರೋಗ್ಯವಂತ ಜೀವನ ಈ ಕಾಲಘಟ್ಟದಲ್ಲಿ ಬಹುಮುಖ್ಯವಾಗಿದೆ.ದೇಶದ ಗ್ರಾಮದ ಪ್ರತಿಯೊಬ್ಬ ನಾಗರೀಕರು ಸ್ವಚ್ಚತೆಯನ್ನು ಕಾಪಾಡಿ ಆರೋಗ್ಯವಂತ ಸಮಾಜ ನಿರ್ಮಿಸಲು ಪ್ರಯತ್ನಿಸಬೇಕು ಮತ್ತು ಟೋಪ್&ಟೋಪ್ ಹಾಗೂ ಇತರ ಸಂಘಟನೆಗಳು ಒಂದಾಗಿ ಬಡವರಿಗಾಗಿ ನಡೆಸಿದ ತಪಾಸಣೆ ಶಿಬಿರದಂತಹ ಪುಣ್ಯಕಾರ್ಯ ನಡೆಸಿ ಸಾರ್ವಜನಿಕರ ಸೇವೆಯಲ್ಲಿ ತೊಡಗಿಸಿಕೊಂಡಿರುವುದು ಶ್ಲಾಘನೀಯ ಎಂದರು.ಶಿಬಿರದಲ್ಲಿ ಸಾಮಾನ್ಯ ತಪಾಸಾಣೆಯಿಂದ ಹಿಡಿದು ಕಿವಿಮೂಗು, ಗಂಟಲು,ಸ್ತೀ ರೋಗ,ಚರ್ಮರೋಗ,ಕಣ್ಣಿನರೋಗ,ಮಕ್ಕಳ ರೋಗ,ಮದುಮೇಹ,ಎಲುಬುರೋಗ ವಿಶೇಷ ತಜ್ಞರು ಭಾಗವಹಿಸಿ ಸಲಹೆ ಸೂಚನೆಗಳನ್ನು ನೀಡಿದರು. ಶಿಬಿರವು ಬೆಳಿಗ್ಗೆ 9:30 ರಿಂದ 2 ಗಂಟೆಯ ತನಕ ಯಶಸ್ವಿಯಾಗಿ ನಡೆಯಿತು.250 ಕ್ಕಿಂತ ಹೆಚ್ಚು ಜನರು ಇದರ ಸದುಪಯೋಗ ಪಡೆದುಕೊಂಡರು.

ಈ ಕಾರ್ಯಕ್ರಮದಲ್ಲಿ ಪ್ರಜ್ಞಾ ಸಲಹಾಕೇಂದ್ರದ ಶರತ್,ಟೋಪ್&ಟೋಪ್ ಚಾರಿಟೇಬಲ್ ಟ್ರಸ್ಟ್ ಅದ್ಯಕ್ಷ ನೌಫಲ್ ಕೆ.ಬಿ.ಎಸ್, ಕೊಳ್ನಾಡು ಗ್ರಾಮ ಪಂಚಾಯತ್ ಸದಸ್ಯರಾದ ಅಶ್ರಪ್ ಸಾಲೆತ್ತೂರು, ಜಯಂತಿ ಎಸ್ ಪೂಜಾರಿ,ಸಿ.ಎಚ್ ಅಬ್ದುಲ್ ರಜಾಕ್ ಸೆರ್ಕಳ,ಹಮೀದ್ ಸುರಿಬೈಲ್, ಗ್ರಾಮ ಪಂಚಾಯತ್ ಕಾರ್ಯದರ್ಶಿ ಆಯೀಷಾ ಬಾನು ಆಶಕ್ತಿಯಿಂದ ಭಾಗವಹಿಸಿ ಶಿಬಿರ ಯಶಸ್ವಿಯಾಗಲು ಸಹಕರಿಸಿದರು. ನೌಪಲ್ ಕೆ.ಬಿ.ಸಿ ಸ್ವಾಗತಿಸಿ ಧನ್ಯವಾದ ತಿಳಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here