ಬಂಟ್ವಾಳ: ಮೂಡಪಡುಕೋಡಿ ಗ್ರಾಮದ ಪಂಜೋಡಿ ನಿವಾಸಿ ಬಾಲಕನೋರ್ವ ಖಾಯಿಲೆ ಉಲ್ಬಣಿಸಿ ಮೃತಪಟ್ಟ ಘಟನೆ ನಡೆದಿದೆ.
ಪಂಜೋಡಿ ನಿವಾಸಿ ನಳಿನಾಕ್ಷಿ ಶೆಟ್ಟಿ ಅವರ ಪುತ್ರ ಧ್ವನಿತ್(೬). ಬಾಲಕ ಕಳೆದ ಮೂರು ವರ್ಷಗಳಿಂದ ಖಾಯಿಲೆಯಿಂದ ಬಳಲುತ್ತಿದ್ದು, ಮಾ. ೨೦ರಂದು ಕೆಮ್ಮು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಬಿ.ಸಿ.ರೋಡಿನ ವೈದ್ಯರೊಬ್ಬರ ಬಳಿ ಕರೆದುಕೊಂಡು ಹೋದಾಗ ಖಾಯಿಲೆ ಉಲ್ಬಣಿಸಿದೆ. ಬಳಿಕ ಮಂಗಳೂರು ಆಸ್ಪತ್ರೆಗೆ ಕರೆದುಕೊಂಡು ಹೋದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.