ಇತ್ತೀಚೆಗೆ ಬಿರುಗಾಳಿಯಿಂದ ಹಾನಿಗೀಡಾದ ಬಡಗಕಜೆಕಾರ್,ತೆಂಕಕಜೆಕಾರ್,ಕಾವಳಮೂಡೂರು,ಉಳಿ,ಪಿಲಾತಬೆಟ್ಟು,ಇರ್ವತ್ತೂರು,ಸಂಗಬೆಟ್ಟು,ರಾಯಿ ಹಾಗೂ ಬಂಟ್ವಾಳ ಮತ್ತು ಪಾಣೆಮಂಗಳೂರು ಹೋಬಳಿಗಳ ಗ್ರಾಮಗಳ 110 ಜನ ಸಂತೃಸ್ತರಿಗೆ ಪ್ರಾಕೃತಿಕ ವಿಕೋಪದ ಪರಿಹಾರ ನಿಧಿಯ ರೂ.5,93,466 ಮೊತ್ತದ ಚೆಕ್‌ನ್ನು ಶಾಸಕರ ಕಚೇರಿಯಲ್ಲಿ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ವಿತರಿಸಿದರು. ಈ ಸಂಧರ್ಭದಲ್ಲಿ ಸಂಗಬೆಟ್ಟು ಅಧ್ಯಕ್ಷರಾದ ಸತೀಶ್ ಪೂಜಾರಿ, ರಾಯಿ ಪಂ. ಉಪಾಧ್ಯಕ್ಷ ರಶ್ಮಿತ್ ಶೆಟ್ಟಿ ರಾಯಿ, ಪಿಲಾತಬೆಟ್ಟು ಅಧ್ಯಕ್ಷರಾದ ಹರ್ಷಿಣಿ ಪುಷ್ಪಾನಂದ, ಉಳಿ ಪಂ.ಅಧ್ಯಕ್ಷರಾದ ಸುರೇಶ್ ಮೈರ, ಕಾವಳಮೂಡೂರು ಪಂ.ಉಪಾಧ್ಯಕ್ಷರಾದ ಅಜಿತ್ ಶೆಟ್ಟಿ, ಇರ್ವತ್ತೂರು ಪಂ.ಸದಸ್ಯ ಶುಭಕರ, ಪಂ.ಸದಸ್ಯರಾದ ಶೇಷಗಿರಿ ಪೂಜಾರಿ, ಬಡಗಕಜೆಕಾರು ಪಂ.ಸದಸ್ಯರಾದ ಸತೀಶ್, ಕಂದಾಯ ವೃತ್ತನಿರೀಕ್ಷಕರು ಸಂತೋಷ್, ವಿಜಯ್, ಗ್ರಾಮಕರಣೀಕರುಗಳಾದ ವಂದನಾ, ನಿಶ್ಮಿತಾ, ಚೆನ್ನಬಸವ, ಆಶಾ, ಸ್ವಾತಿ, ಪ್ರವೀಣ್ ಉಪಶ್ಥಿತರಿದ್ದರು

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here