ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಳಾಖೆ, ಬಂಟ್ವಾಳ , ಗ್ರಾಮ ಪಂಚಾಯತ್ ಅಮ್ಟಾಡಿ ಇವರ ಸಂಯುಕ್ತ ಆಶ್ರಯದಲ್ಲಿ ಮಹಿಳಾ ಗ್ರಾಮ ಸಭೆ ಹಾಗೂ ಪೋಷಣಾ ಅಭಿಯಾನ ಯೋಜನೆಯಂತೆ ಪೋಷಣಾ ಪಕ್ವಾಡ ಕಾರ್ಯಕ್ರಮದಡಿ ರಕ್ತಹೀನತೆ ತಡೆಗಟ್ಟುವ ಬಗ್ಗೆ ಕಿಶೋರಿಯರಿಗೆ, ಹಾಲುಡಿಸುವ ತಾಯಂದಿರಿಗೆ, ಗರ್ಭಿಣಿಯರಿಗೆ ಮಾಹಿತಿ ಕಾರ್ಯಕ್ರಮ ಅಮ್ಟಾಡಿ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮೋಹಿನಿಯವರು ವಹಿಸಿ, ಮಹಿಳಾಪರ ಾಡಳಿತದ ಬಗ್ಗೆ ಭರವಸೆ ನೀಡಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಶಿಶು ಅಭಿವೃದ್ಧಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಗಾಯತ್ರಿ ಕಂಬಳಿ ರಕ್ತಹೀನತೆ ತಡೆಗಟ್ಟುವ ಬಗ್ಗೆ, ಸ್ಥಳೀಯವಾಗಿ ಸಿಗುವ ಪೌಷ್ಟಿಕಾಂಶಯುಕ್ತ ಆಹಾರ, ಸೊಪ್ಪು ತರಕಾರಿಗಳು, ಮಹಿಳಾ ಸಬಲೀಕರಣ, ಸ್ವ ಉದ್ಯೋಗ ಮಹಿಳಾಪರ ಕಾನೂನುಗಳ ಬಗ್ಗೆ ಮಾಹಿತಿ ನೀಡಿದರು. ಇನ್ನೋರ್ವ ಸಂಪನ್ಮೂಲ ವ್ಯಕ್ತಿ ಸಾಂತ್ವಾನದ ಸಮಾಜ ಕಾರ್ಯಕರ್ತರಾದ ಪ್ರಶಾಂತ್ ರವರು ಸಾಂತ್ವಾನ, ಸಖಿ ಒನ್ ಸ್ಟಾಪ್ ಸೆಂಟರ್ ಬಗ್ಗೆ ಮಾಹಿತಿ ನೀಡಿದರು.
ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಸುನಿಲ್ ಕುಮಾರ್ ರವರು ಗ್ರಾಮ ಸಭೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸಿ ಮಾಹಿತಿ ಪಡೆಯಲು ಕರೆ ನೀಡಿದರು.
ಪಂಚಾಯತ್ ಅಭಿವೃಧ್ಧಿ ಅಧಿಕಾರಿ ರವಿಕುಮಾರ್ ಸ್ವಾಗತಿಸಿ, ಕಾರ್ಯದರ್ಶಿ ಲಕ್ಷ್ಮೀನಾರಾಯಣ ವಂದಿಸಿದರು. ಕಾರ್ಯಕ್ರಮವನ್ನು ಮೇಲ್ವೀಚಾರಕಿ ಗುಣವತಿ ನಿರೂಪಿಸಿದರು.