ಬಂಟ್ವಾಳ: ದ್ವಿಚಕ್ರವಾಹನವೊಂದಕ್ಕೆ ಖಾಗಿ ಬಸ್ ಡಿಕ್ಕಿಯಾದ ಪರಿಣಾಮ ಪೋಲಿಸ್ ಸಿಬ್ಬಂದಿ ಗಂಭೀರ ವಾಗಿ ಗಾಯಗೊಂಡು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಾದ ಘಟನೆ ವಿಟ್ಲ ಪೋಲಿಸ್ ಠಾಣಾ ವ್ಯಾಪ್ತಿಯ ಕೋಡಾಜೆ ಎಂಬಲ್ಲಿ ಇಂದು ಬೆಳಿಗ್ಗೆ ನಡೆದಿದೆ.
ಅನಂತಾಡಿ ನಿವಾಸಿ ಧರ್ಣಪ್ಪ ಗೌಡ ಅವರು ಗಾಯಗೊಂಡ ಪೋಲೀಸ್ ಸಿಬ್ಬಂದಿ.
ಧರ್ಣಪ್ಪ ಗೌಡ ಅವರು ಮಗಳ ಜೊತೆ ಬೈಕಿನಲ್ಲಿ ಬರುತ್ತಿದ್ದ ವೇಳೆ ಖಾಸಗಿ ಬಸ್ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಧರ್ಣಪ್ಪ ಗೌಡ ಅವರು ಮಗಳಿಗೆ ಡ್ರಾಪ್ ನೀಡಿ ಬಳಿಕ ಉಪ್ಪಿನಂಗಡಿ ಪೋಲಿಸ್ ಠಾಣೆಗೆ ಕರ್ತವ್ಯ ಕ್ಕೆ ತೆರಳುವ ವೇಳೆ ಬಸ್ ಅಪಘಾತ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಘಟನೆಯಲ್ಲಿ ಧರ್ಣಪ್ಪ ಗೌಡ ಅವರ ಕಾಲಿಗೆ ಗಂಭೀರ ಗಾಯವಾಗಿದ್ದು, ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡುತ್ತಿದ್ದಾರೆ.
ಪಲ್ಗುಣಿ ಬಸ್ ಚಾಲಕನ ಅಜಾಗರೂಕತೆಯ ಚಾಲನೆ ಅಪಘಾತ ಕ್ಕೆ ಕಾರಣವಾಗಿದ್ದು, ಸಾರ್ವಜನಿಕ ರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಇತ್ತೀಚಿಗೆ ಖಾಸಗಿ ಬಸ್ ಚಾಲಕರು ರಸ್ತೆ ಮಧ್ಯೆಯೇ ನಿಲ್ಲಿಸಿ ಜನ ಹತ್ತಿಸುವುದು ಇಳಿಸುವುದು, ಮೊಬೈಲ್ ಬಳಕೆ ಮಾಡಿಕೊಂಡು ಚಾಲನೆ ಮಾಡುವುದು, ಟೈಮ್ ಪಿಕಪ್ ಗಾಗಿ ಅತೀ ವೇಗದ ಚಾಲನೆ, ಅನಾವಶ್ಯಕ ಓವರ್ ಟೇಕ್ ಈ ರೀತಿಯಲ್ಲಿ ಅಜಾಗರೂಕತೆಯಿಂದ ಚಾಲನೆ ಮಾಡುತ್ತಿದ್ದು ಪ್ರಯಾಣಿಕರ ಜೀವದ ಮೇಲೆ ಆಟ ಆಡುತ್ತಿದ್ದಾರೆ ಎಂಬ ದೂರುಗಳು ಕೇಳಿ ಬರುತ್ತಿದೆ.
ಇದೆಲ್ಲವನ್ನು ಗಮನಿಸಿರುವ ಪೋಲೀಸ್ ಇಲಾಖೆ ಹಾಗೂ ಆರ್.ಟಿ.ಒ.ಇಲಾಖೆ ಇವರ ಮೇಲೆ ಯಾವುದೆ ಕಾನೂನು ಕ್ರಮಕೈಗೊಳ್ಳದೆ ಅವರ ಜೊತೆಗೆ ಕಾಣಿಸಿಕೊಳ್ಳುವ ಅಧಿಕಾರಗಳ ವಿರುದ್ದ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಘಟನಾ ಸ್ಥಳಕ್ಕೆ ವಿಟ್ಲ ಪೋಲೀಸರು ಬೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.