ಮಾನಸಿಕ ಅಸ್ವಸ್ಥತೆಯೊರ್ವಳು ನಾಪತ್ತೆಯಾದ ಘಟನೆ ಫೆ18 ರಂದು ನಡೆದ ಬಗ್ಗೆ ಬಂಟ್ವಾಳ ನಗರ ಪೋಲೀಸ್ ಠಾಣೆಯ ಲ್ಲಿ ದೂರು ದಾಖಲಾಗಿದೆ.
ಅಮ್ಟಾಡಿ ಗ್ರಾಮದ ಅಜೆಕಲ ನಿವಾಸಿ ನಿವಾಸಿ ಧರ್ಣಪ್ಪ ಪೂಜಾರಿ ಅವರ ಪುತ್ರಿ ಕವಿತಾ (34) ನಾಪತ್ತೆಯಾದ ಯುವತಿ.
ಇವಳು ಮಾನಸಿಕ ಅಸ್ವಸ್ಥತೆಯಾಗಿದ್ದು ಮಂಗಳೂರು ಖಾಸಗಿ ಆಸ್ಪತ್ರೆಯಿಂದ ಚಿಕಿತ್ಸೆ ಪಡೆಯುತ್ತಿದ್ದಳು
ಎಂದಿನಂತೆ ಮನೆಯಲ್ಲಿ ದ್ದವಳು ಫೆ.18 ರ ಮಧ್ಯಾಹ್ನ ಮನೆಯಿಂದ ಯಾರುವಿಲ್ಲದೆ ವೇಳೆ ಹೊರಗೆ ಹೋದವಳು ಮತ್ತೆ ವಾಪಾಸು ಮನೆಗೆ ಬಾರದೆ ಕಾಣೆಯಾಗಿದ್ದಾಳೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಇವಳು ಕನ್ನಡ ತುಳು ಭಾಷೆ ಮಾತನಾಡುತ್ತಿದ್ದು ಇವಳ ಗುರುತು ಪತ್ತೆಯಾದಲ್ಲಿ ಬಂಟ್ವಾಳ ನಗರ ಪೋಲೀಸ್ ಠಾಣೆಯ ನ್ನು ಸಂಪರ್ಕ ಮಾಡುವಂತೆ ನಗರ ಠಾಣೆಯ ಎಸ್.ಐ ಅವಿನಾಶ್ ತಿಳಿಸಿದ್ದಾರೆ.