ಟ್ವಾಳ : ಆಜಾದಿಕ ಅಮೃತ್ ಮಹೋತ್ಸವ, ಟಿಬಿ ಸೋಲಿಸಿ ದೇಶ ಗೆಲ್ಲಿಸಿ ಹಾಗೂ ಕ್ಷಯ ಮುಕ್ತ ಕರ್ನಾಟಕ, ಕ್ಷಯ ಮುಕ್ತ ಗ್ರಾಮ ಪಂಚಾಯತ್ ಕುರಿತು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಆರೋಗ್ಯ ಮಾಹಿತಿ ಕಾರ್ಯಕ್ರಮ ಬಿಸಿರೋಡು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಜರಗಿತು.
ತಾಲ್ಲೂಕು ಆರೋಗ್ಯ ಅಧಿಕಾರಿ ಡಾ. ಜಯಪ್ರಕಾಶ್ ಇವರು ಗಿಡಕ್ಕೆ ನೀರು ಹಾಕುವುದರ ಮೂಲಕ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು 2025ರ ವೇಳೆಗೆ ಭಾರತವನ್ನು ಕ್ಷಯ ಮುಕ್ತ ಗೊಳಿಸುವ ಗುರಿ ನಮ್ಮ ಮುಂದೆ ಇದ್ದು, ಆ ನಿಟ್ಟಿನಲ್ಲಿ ನಾವು ಜಾಗೃತಿಗೊಳ್ಳಬೇಕಿದೆ, ಅದಕ್ಕೂ ಮೊದಲು ಪ್ರತಿ ಗ್ರಾಮ ಪಂಚಾಯತ್ ನ್ನು ಕ್ಷಯ ಮುಕ್ತ ಗೊಳಿಸುವ ಕಾರ್ಯವನ್ನು ನಾವು ಮಾಡಬೇಕಿದೆ. ಈ ಕಾರ್ಯವು ಕೇವಲ ಆರೋಗ್ಯ ಇಲಾಖೆಯಿಂದ ಮಾತ್ರ ಸಾಧ್ಯವಿಲ್ಲ. ಇದಕ್ಕೆ ಸಮುದಾಯದ ಸಹಕಾರ ಮತ್ತು ಸಹಭಾಗಿತ್ವ ಅತೀ ಮುಖ್ಯ ಎಂದರು.
ಸಮಾಜದಲ್ಲಿ ಕ್ಷಯವನ್ನು ಬೇಗ ಪತ್ತೆ ಮಾಡಿ, ಚಿಕಿತ್ಸೆ ಕೊಡುವುದರ ಮುಖಾಂತರ ಇತರರಿಗೆ ಹರಡುವುದನ್ನು ತಡೆಗಟ್ಟಬಹುದು. ಕ್ಷಯ ಒಂದು ಸಾಮಾಜಿಕ ಕಳಂಕಿತವಾಗಿದ್ದು ಅದನ್ನು ಹೋಗಲಾಡಿಸಬೇಕಾಗಿದೆ. ಹೀಗೆ ಕ್ಷಯದ ಬಗ್ಗೆ ಸಮಗ್ರ ಮಾಹಿತಿಯನ್ನು ನೀಡಿದರು.
ತಾಲ್ಲೂಕು ಪಂಚಾಯತ್ ನ ಕಾರ್ಯ ನಿರ್ವಾಹಕ ಅಧಿಕಾರಿ ರಾಜಣ್ಣ ಹಾಗೂ ಆರೋಗ್ಯ ಇಲಾಖೆ ಮತ್ತು ಇತರ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಇಲಾಖಾ ಸಿಬ್ಬಂದಿ ಕುಸುಮ ಸ್ವಾಗತಿಸಿದರು.
ಏನ್. ಟಿ. ಇ. ಪಿ ಕಾರ್ಯಕ್ರಮದ ಮೇಲ್ವಿಚಾರಕ ಡೇವಿಡ್ ಇವರ ಧನ್ಯವಾದ ನೀಡಿದರು