ಮಂಗಳೂರು ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಹಾಗು ಜಿಲ್ಲಾ ಘಟಕಗಳಿಗೆ ಫೆ.27ರಂದು ಚುನಾವಣೆ ನಡೆಯಲಿದೆ. ಫೆ.11ರಂದು ನಾಮಪತ್ರ ಸಲ್ಲಿಕೆ ಆರಂಭವಾಗಿದೆ. ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ನಾಮಪತ್ರ ಸಲ್ಲಿಕೆ ಆರಂಭಗೊಂಡಿದ್ದು ಪ್ರಥಮ ದಿನ ಪ್ರಮುಖರು ನಾಮಪತ್ರ ಸಲ್ಲಿಸಿದರು. ಸಹಾಯಕ ಚುನಾವಣಾಧಿಕಾರಿಗಳಾದ ವಾರ್ತಾ ಮತ್ತು ಪ್ರಚಾರ ಇಲಾಖೆಯ ಸಹಾಯಕ ನಿರ್ದೇಶಕಿ ಸೌಮ್ಯ ಅವರಿಗೆ ನಾಮ ಪತ್ರ ಸಲ್ಲಿಸಿದರು.
ದ.ಕ ಜಿಲ್ಲಾ ಅಧ್ಯಕ್ಣ ಸ್ಥಾನಕ್ಕೆ ಶ್ರೀನಿವಾಸ ನಾಯಕ್ ಇಂದಾಜೆ,
ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಸ್ಥಾನಕ್ಕೆ ಜಗನ್ನಾಥ ಶೆಟ್ಟಿ ಬಾಳ.
ಒಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಇಬ್ರಾಹಿಂ ಅಡ್ಕಸ್ಥಳ, ಜಿತೇಂದ್ರ ಕುಂದೇಶ್ವರ,
ಮೂರು ಉಪಾಧ್ಯಕ್ಷ ಸ್ಥಾನಕ್ಕೆ ಹರೀಶ್ ಮಾಂಬಾಡಿ, ಆರ್.ಸಿ.ಭಟ್, ರಾಜೇಶ್ ಪೂಜಾರಿ, ಆತ್ಮಭೂಷಣ್ ಭಟ್.
ಮೂರು ಕಾರ್ಯದರ್ಶಿ ಸ್ಥಾನಕ್ಕೆ ಗಂಗಾಧರ ಕಲ್ಲಪಳ್ಳಿ, ವಿಜಯ್ ಕೋಟ್ಯಾನ್ ಪಡು, ಹರೀಶ್ ಮೋಟುಕಾನ, ಸಿದ್ದಿಕ್ ನೀರಾಜೆ.
ಒಂದು ಕೋಶಾಧಿಕಾರಿ ಸ್ಥಾನಕ್ಕೆ ಪುಷ್ಪರಾಜ್ ಬಿ.ಎನ್.
ಹದಿನೈದು ಜಿಲ್ಲಾ ಕಾರ್ಯಕಾರಿ ಸಮಿತಿಗೆ ಲೋಕೇಶ್ ಪೆರ್ಲಂಪಾಡಿ, ಸತ್ಯವತಿ, ಹಿಲರಿ ಕ್ರಾಸ್ತಾ,ಮೋಹನ್ ಕುತ್ತಾರ್, ಸತೀಶ್ ಇರಾ, ರಾಜೇಶ್ ಶೆಟ್ಟಿ, ರಾಜೇಶ್ ದಡ್ಡಂಗಡಿ, ಭರತ್‌ರಾಜ್, ಅಶೋಕ್ ಶೆಟ್ಟಿ ನಾಮಪತ್ರ ಸಲ್ಲಿಸಿದರು.
ಫೆ.14 ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ.