Wednesday, October 18, 2023

ಹಿಜಾಬ್ ಪ್ರಕರಣ NIA ತನಿಖೆಗೆ ಒತ್ತಾಯಿಸಿ ವಿಶ್ವಹಿಂದೂ ಪರಿಷತ್ ಬಜರಂಗದಳ ಒತ್ತಾಯ

Must read

ಹಿಜಾಬ್ ಪ್ರಕರಣವನ್ನು NIA ತನಿಖೆಗೆ ಆಗ್ರಹಿಸಿ ಬಂಟ್ವಾಳ ತಾಲೂಕು ತಹಸೀಲ್ದಾರ್ ಮೂಲಕ ಮುಖ್ಯ ಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ಹಿಜಾಬ್ ಒಂದು ಪ್ರಕರಣ ಮಾತ್ರವಲ್ಲ ಇದೊಂದು ಜೆಹಾದಿನ ಷಡ್ಯಂತ್ರ, ಮುಸಲ್ಮಾನ ವಿದ್ಯಾರ್ಥಿಗಳ ಮೂಲಕ ಶಾಲಾ ಕಾಲೇಜುಗಳನ್ನು ಉಪಯೋಗಿಸಿ ಪ್ರತ್ಯೇಕತಾ ವಾದವನ್ನು ಬಿಂಬಿಸುವ ಪ್ರಯತ್ನ ನಡೆಸುತ್ತಿದ್ದಾರೆ. ಈ ಪ್ರಕರಣದ ಹಿಂದ PFI – SDPI ಮೂಲಭೂತವಾದಿ ಮುಸ್ಲಿಂ ಸಂಘಟನೆಗಳ ಕೈವಾಡವಿದ್ದು, ಅಲ್ಲದೆ ಇದರ ಹಿಂದೆ ಪಾಕಿಸ್ತಾನ ತಾಲಿಬಾನಿನಂತಹ ಇಸ್ಲಾಂ ಮೂಲಭೂತವಾದಿಗಳು ಬೆಂಬಲಕೊಡುತ್ತಿರುವುದು ಆತಂಕಕಾರಿಯಾಗಿದೆ. ಈ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಘನತೆಯನ್ನು ಕುಗ್ಗಿಸುವಂತಹ ಕೆಲಸವಾಗುತ್ತಿದೆ. ನ್ಯಾಯಾಲಯದ ತೀರ್ಪನ್ನು ಪಾಲಿಸದೆ ವಿದ್ಯಾರ್ಥಿಗಳು ಹಿಜಾಬ್ ಧರಿಸಿ ಕಾಲೇಜಿಗೆ ಬರುತ್ತಿರುವುದು ಇವರ ಜಿಹಾದಿ ಮಾನಸಿಕತೆಯನ್ನು ತೋರಿಸುತ್ತಿದೆ. ಈ ಹಿನ್ನಲೆಯಲ್ಲಿ ಈ ಪ್ರಕರಣದ ಹಿಂದೆ ದೇಶ ವಿಭಜನೆಯ ಸಂಚು ಇರುವ ಸಂಶಯ ವ್ಯಕ್ತವಾಗುತ್ತಿದ್ದು ಉಡುಪಿಯ ಕಾಲೇಜಿನಲ್ಲಿ ಹಿಜಾಬ್ ಪ್ರಕರಣವನ್ನು ಪ್ರಾರಂಭಿಸಿದ 6 ವಿದ್ಯಾರ್ಥಿನಿಯರನ್ನು ಮತ್ತು ಅವರಿಗೆ ಬೆಂಬಲವಾಗಿನಿಂತು ಈ ಸಂಚನ್ನು ರೂಪಿಸಿದವರ ವಿರುದ್ಧ NIA (ರಾಷ್ಟ್ರೀಯತನಿಖಾದಳ) ಮುಖಾಂತರ ತನಿಖೆ ನಡೆಸಲು ಕ್ರಮ ಕೈಗೊಳ್ಳಬೇಕೆಂದು ವಿಶ್ವಹಿಂದೂಪರಿಷತ್ ಬಜರಂಗದಳ ಒತ್ತಾಯಿಸಿ ದ್ದಾರೆ.
ಈ ಸಂದರ್ಭದಲ್ಲಿ
ಬಜರಂಗದಳ ಜಿಲ್ಲಾ ಸಂಚಾಲಕ್ ಭರತ್ ಕುಮ್ದೇಲು, ಸಹ ಸಂಚಾಲಕ್ ಗುರುರಾಜ್ ಬಂಟ್ವಾಳ,ಬಂಟ್ವಾಳ ಪ್ರಖಂಡ ವಿಶ್ವ ಹಿಂದೂ ಪರಿಷದ್ ಉಪಾಧ್ಯಕ್ಷ ಸುರೇಶ್ ಬೆಂಜನಪದವವು,ಬಜರಂಗದಳ ಸಂಚಾಲಕ್ ಶಿವು ತುಂಬೆ, ಕಾರ್ಯದರ್ಶಿ ದೀಪಕ್ ಬಂಟ್ವಾಳ, ವಿದ್ಯಾರ್ಥಿ ಪ್ರಮುಖ್ ಪ್ರತೀಕ್ ಎರ್ಮಾಳ ಹಾಗೂ ರಾಜೇಶ್ ಬಂಟ್ವಾಳ ಉಪಸ್ಥಿತರಿದ್ದರು..

More articles

Latest article