ಬಂಟ್ವಾಳ: ಮಾನಸಿಕ ಅಸ್ವಸ್ಥತೆಯಿಂದ ತಿರುಗಾಡುತ್ತಿದ್ದ ಮಹಿಳೆಯೋರ್ವಳನ್ನು ಶಿಶು ಅಭಿವೃದ್ಧಿ ಇಲಾಖಾ ಅಧಿಕಾರಗಳ ತಂಡ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದ ಚಿಕಿತ್ಸೆ ನೀಡುವ ಸಕಲ ವ್ಯವಸ್ಥೆ ಯನ್ನು‌ಮಾಡಿದ ಬಗ್ಗೆ ವರದಿಯಾಗಿದೆ.
ಬಂಟ್ವಾಳ ತಾಲೂಕಿನ ಕಳ್ಳಿಗೆ ಗ್ರಾಮ ಪಂಚಾಯತ್ ವಠಾರದಲ್ಲಿ ಯಶವಂತಿ ಎಂಬ ಹೆಸರಿನ ಮಹಿಳೆಯೋರ್ವಳು ಮಾನಸಿಕ ಅಸ್ವಸ್ಥತೆಯಿಂದ ತಿರುಗಾಡುತ್ತಿರುವ ಬಗ್ಗೆ ಕಳ್ಳಿಗೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅವರು ಬಂಟ್ವಾಳ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಗಾಯತ್ರಿ ಕಂಬಳಿ ಅವರ ಗಮನ ಕ್ಕೆ ತಂದಾಗ ಅವರು ಸಂರಕ್ಷಣಾಧಿಕಾರಿ ಭಾರತಿ , ತಾಲೂಕು ಆರೋಗ್ಯಾಧಿಕಾರಿ ಜಯಪ್ರಕಾಶ್ ಇವರ ಸಹಕಾರದಿಂದ ಅಂಬ್ಯುಲೆನ್ಸ್ ಮೂಲಕ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡಿದ್ದಾರೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here