ದ.ಕ.ಜಿಪಂ.ಹಿರಿಯ ಪ್ರಾಥಮಿಕ ಶಾಲೆ ಬರಿಮಾರು ಇಲ್ಲಿ ದ.ಕ.ಜಿಲ್ಲಾಪಂಚಾಯತ್, ಹಾಗೂ ಕನ್ನಡ ಮತ್ತು ಸಂಸ್ಖೃತಿ ಇಲಾಖೆ ಇವರ ಸಹಯೋಗದೊಂದಿಗೆ ನೂತನವಾಗಿ ನಿರ್ಮಾಣ ಗೊಂಡ ರಂಗಮಂದಿರ ದ ಉದ್ಘಾಟನೆ ಯನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ನೆರವೇರಿಸಿದರು.
ಬಳಿಕ ಮಾತನಾಡಿದ ಅವರು ಬರಿಮಾರು ಗ್ರಾಮದ ಪ್ರತಿಯೊಂದು ಸಮಸ್ಯೆ ಗಳನ್ನು ಹಂತಹಂತವಾಗಿ ಪರಿಹಾರಮಾಡುತ್ತೇನೆ ಎಂದು ಭರವಸೆ ನೀಡಿದರು.
ವೇದಿಕೆಯಲ್ಲಿ ಬರಿಮಾರು ಗ್ರಾಮ ಪಂಚಾಯತ್ ಅಧ್ಯಕ್ಷೆ ಶಶಿಕಲಾ,
ಉಪಾಧ್ಯಕ್ಷ ಸದಾಶಿವ , ಗ್ರಾ.ಪಂ.ಸದಸ್ಯ ರುಗಳಾದ ಶೃತಿ, ಜಗದೀಶ್, ಪುಷ್ಪಲತಾ, ವನಿತಾ, ಜಿ.ಎಸ್.ಡಿ.ಎಂ.ಸಿ.ಅಧ್ಯಕ್ಷ ಧನಂಜಯ , ಮತ್ತಿತರರು ಉಪಸ್ಥಿತರಿದ್ದರು.
ಮುಖ್ಯ ಶಿಕ್ಷಕಿ ಕಲ್ಯಾಣಿ ಸ್ವಾಗತಿಸಿ, ನಯನಾ ಕುಮಾರಿ ವಂದಿಸಿದರು.
ಶಿಕ್ಷಕಿ ಗಾಯತ್ರಿ ಕಾರ್ಯಕ್ರಮ ನಿರೂಪಿಸಿದರು.