.ಬಂಟ್ವಾಳ: ಬಿದ್ದು ಸಿಕ್ಕಿದ ಚಿನ್ನದ ಬ್ರೇಸ್ ಲೈಟ್ ನ್ನು ವಾರಿಸುದಾರರಿಗೆ ಮುಟ್ಟಿಸಿ ಪ್ರಾಮಾಣಿಕತೆ ಮೆರೆದ ಬ್ಯಾಂಕ್ ಮ್ಯಾನೇಜರ್ ಗೆ ಮಹಿಳೆಯೋರ್ವಳು ಧನ್ಯವಾದ ನೀಡಿದ ಘಟನೆ ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ನಡೆದಿದೆ.
ಬಿ.ಸಿ.ರೋಡಿನ ಬಸ್ಸು ನಿಲ್ದಾಣದ ಸಮೀಪ ಸರ್ವೀಸ್ ರಸ್ತೆಯಲ್ಲಿ ಬಸ್ ನಿಂದ ಇಳಿಯುವ ವೇಳೆ ವ್ಯಕ್ತಿಯೊಬ್ಬರಿಗೆ ಸಿಕ್ಕಿದ್ದ ಚಿನ್ನದ ಬ್ರಾಸ್ ಲೈಟ್ ನ್ನು ಅವರು ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಎಸ್.ಐ.ಅವಿನಾಶ್ ಅವರ ಕೈ ಗೆ ತಂದೊಪ್ಪಿಸಿದ್ದರು
ಅ ಬಳಿಕ ಕಳೆದುಕೊಂಡ ಚಿನ್ನದ ಬಗ್ಗೆ ಸಾಮಾಜಿಕ ಜಾಲತಾಣ ಹಾಗೂ ಪತ್ರಿಕೆ ಯಲ್ಲಿ ವರದಿ ಬಿತ್ತರಿಸಲಾಗಿತ್ತು.
ವರದಿ ಯ ಫಲವಾಗಿ ಫೆ. ೨೦ರಂದು ಚಿನ್ನ ಕಳೆದುಕೊಂಡ ವಾರಿಸುದಾರರು ಠಾಣೆಗೆ ಬಂದು ಸರಿಯಾದ ದಾಖಲೆ ಗಳನ್ನು ನೀಡಿ ಚಿನ್ನ ವನ್ನು ಪಡೆದು ಕೃತಜ್ಞತೆ ಅರ್ಪಿಸಿದರು.
ಬಂಟ್ವಾಳ ಸಿಎ ಬ್ಯಾಂಕಿನ ನಾವೂರು ಶಾಖೆಯ ಸಿಬಂದಿ ಹರೀಶ್ ಕುಲಾಲ್ ಕಾಮಾಜೆ ಅವರು ಫೆ. ೧೯ರಂದು ಸಂಜೆ ಕೆಲಸ ಮುಗಿಸಿ ಬರುವ ವೇಳೆ ಚಿನ್ನ ಬಿದ್ದು ಸಿಕ್ಕಿದ್ದು, ಅದನ್ನು ಠಾಣೆಗೆ ತಂದೊಪ್ಪಿಸಿದ್ದರು. ಮರುದಿನ ಠಾಣೆಯಲ್ಲಿ ನಗರ ಠಾಣಾ ಪಿಎಸ್ಐ ಅವಿನಾಶ್ ಅವರ ಸಮ್ಮುಖದಲ್ಲಿ ಚಿನ್ನ ಕಳೆದುಕೊಂಡಿದ್ದ ಫರಂಗಿಪೇಟೆ ನಿವಾಸಿ ಸೈನಾಜ್ ಅವರಿಗೆ ಹಸ್ತಾಂತರಿಸಲಾಯಿತು.
ಪ್ರಸ್ತುತದ ದಿನಗಳಲ್ಲಿ ಅಲ್ಲೊಂದು ಇಲ್ಲೊಂದು ಇಂತಹ ಪ್ರಾಮಾಣಿಕತೆಯ ಸಮಾಜಮುಖಿ ಕಾರ್ಯಗಳು ನಡೆಯುತ್ತಿದ್ದು ಇತರರಿಗೆ ಮಾದರಿ ಯಾಗಿದೆ.