ಲೋಕೋಪಯೋಗಿ ಇಲಾಖೆಯ ಮೂಲಕ ಕಡೂರು-ಕಾಂಞಂಗಾಡ್ ರಾಜ್ಯ ಹೆದ್ದಾರಿಯ ಎರ್ಮೆಮಜಲಿನಿಂದ ಒಕ್ಕೆತ್ತೂರುವರೆಗಿನ ರಸ್ತೆಯು ೮.೬೫ ಕೋ.ರೂ. ಅನುದಾನದಲ್ಲಿ ದ್ವಿಪಥ ರಸ್ತೆಯನ್ನಾಗಿ ಅಭಿವೃದ್ಧಿಗೊಳ್ಳಲಿದ್ದು, ಶೀಘ್ರ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಹೇಳಿದರು.
ಅವರು ವೀರಕಂಭ ಗ್ರಾಮದ ಎರ್ಮೆಮಜಲಿನಲ್ಲಿ ಹೆದ್ದಾರಿ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು. ಗುತ್ತಿಗೆದಾರರು ಶೀಘ್ರದಲ್ಲಿ ಕಾಮಗಾರಿ ಮುಗಿಸುವ ವಿಶ್ವಾಸವಿದ್ದು, ಈ ಭಾಗದ ನಾಗರಿಕರಿಗೂ ಅನುಕೂಲವಾಗಲಿದೆ ಎಂದರು.
ಬಂಟ್ವಾಳ ಲೋಕೋಪಯೋಗಿ ಇಲಾಖೆಯ ಎಇಇ ಷಣ್ಮುಗಂ, ಸಹಾಯಕ ಎಂಜಿನಿಯರ್ ಪ್ರೀತಂ, ತಾ.ಪಂ.ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಮಾಧವ ಮಾವೆ, ಬಂಟ್ವಾಳ ಬಿಜೆಪಿ ಪ್ರಧಾನ ಕಾರ್ಯದರ್ಶಿ ರವೀಶ್ ಶೆಟ್ಟಿ ಕರ್ಕಳ, ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಸೀಮಾ ಮಾಧವ, ವೀರಕಂಭ ಗ್ರಾ.ಪಂ.ಅಧ್ಯಕ್ಷ ದಿನೇಶ್, ನೇರಳಕಟ್ಟೆ ಸಿಎ ಬ್ಯಾಂಕ್ ಅಧ್ಯಕ್ಷ ಪುಷ್ಮರಾಜ್ ಚೌಟ, ಅನಂತಾಡಿ ಗ್ರಾ.ಪಂ.ಮಾಜಿ ಅಧ್ಯಕ್ಷ ಸನತ್‌ಕುಮಾರ್ ರೈ, ಪ್ರಮುಖರಾದ ಸಂದೀಪ್ ಶೆಟ್ಟಿ ಅರೆಬೆಟ್ಟು, ಅಭಿಷೇಕ್ ರೈ ವಿಟ್ಲಪಡ್ನೂರು, ಮೀನಾಕ್ಷಿ, ಜಯಂತಿ, ಚಂದ್ರಶೇಖರ್ ಬಾಯಿಲ, ಜಯಪ್ರಸಾದ್, ಜಯರಾಮ್ ಬೊಳಂತೂರು, ದೇವಿಪ್ರಸಾದ್, ಅರವಿಂದ ರೈ, ಪದ್ಮನಾಭ, ವೀರಪ್ಪ ಮೂಲ್ಯ, ಜಾರಪ್ಪ ಮೂಲ್ಯ, ಸದಾಶಿವ, ರಮೇಶ್ ಮೈರ, ಈಶ್ವರ ಭಟ್, ಗುತ್ತಿಗೆದಾರರಾದ ಅಬ್ದುಲ್ ಖಾದರ್, ಅಬ್ದುಲ್ ನಾಸೀರ್ ಕೆ.ಕೆ. ಉಪಸ್ಥಿತರಿದ್ದರು