


ಬಂಟ್ವಾಳ: ಬಂಟ್ವಾಳ ಅಗ್ನಿಶಾಮಕ ದಳದ ವತಿಯಿಂದ ಶುಕ್ರವಾರ ನಲ್ಕೆಮಾರ್ ಸರಿಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಗ್ನಿ ಅವಘಡದ ಬಗ್ಗೆ ಪ್ರಾತ್ಯಕ್ಷಿಕೆ ಕಾರ್ಯಗಾರ ನಡೆಯಿತು. ಸಂಯುಕ್ತ ಠಾಣಾಧಿಕಾರಿ ಅನಂತ ಜೆ ಅಂಬಿಗ ಮಾತನಾಡಿ ಬೆಂಕಿಯ ವಿಧಗಳು, ಬೆಂಕಿ ಒಂದು ಶಕ್ತಿ ಎಲ್ಲ ಕಡೆಯಲ್ಲೂ ಇದೆ. ಪ್ಲಾಸ್ಮಾದ ಒಂದು ರೂಪ. ಇದೊಂದು ಉತ್ತಮ ಸೇವಕ ಕೆಟ್ಟ ಯಜಮಾನ ಎಂದು ಹೇಳಿದರು. ಬೆಂಕಿಯ ಅವಘಡ ಎರೆಡು ರೀತಿಯಲ್ಲಿ ಸಂಭವಿಸುತ್ತವೆ. ಒಂದು ನೈಸರ್ಗಿಕ ಇನ್ನೊಂದು ಮಾನವರ ಅಜಾಗರೂಕತೆ. ಬೆಂಕಿಯನ್ನು ಆರಿಸುವ ವಿಧಾನಗಳು, ಕಚೇರಿಗಳಲ್ಲಿ ಹಾಗೂ ಮನೆಗಳಲ್ಲಿ ವಿದ್ಯುತ್ ಅವಘಡ ಹಾಗೂ ಗ್ಯಾಸ್ ಸೋರುವಿಕೆಯಿಂದ ಮುಂಜಾಗ್ರತಾ ಕ್ರಮಗಳು ಹಾಗೂ ಸಂಭವಿಸಿದರೆ ತೆಗೆದುಕೊಳ್ಳಬೇಕಾದ ಎಚ್ಚರಿಕೆ ಬಗ್ಗೆ ಮಾಹಿತಿ ತಿಳಿಸಿದರು.
ನಂತರ ಶಾಲಾ ಮೈದಾನದಲ್ಲಿ ಬಂಟ್ವಾಳ ಪ್ರಮುಖ ಅಗ್ನಿ ಶಾಮ ಮೀರ್ ಮಹಮ್ಮದ್ ಗೌಸ್, ಅಗ್ನಿಶಾಮಕ ಚಾಲಕ ರಾಜೇಶ್, ಅಗ್ನಿಶಾಮಕ ಪ್ರಸಾದ್ ಮತ್ತು ದರ್ಣಪ್ಪರವರು ಬೆಂಕಿ ನಿರ್ಮಿಸಿ ಬೆಂಕಿ ಸಂಭವಿಸಿದರೆ ಹಾರಿಸುವ ಬಗೆಯನ್ನು ಪ್ರಾತ್ಯಕ್ಷಿಕೆ ಮೂಲಕ ತೋರಿಸಿದರು. ಶಾಲಾಬಿವೃದ್ಧಿ ಸಮಿತಿ ಅಧ್ಯಕ್ಷ ವಿಜಯ ಕುಮಾರ್ ಹಾಗೂ ಶಾಲಾ ಸಿಬ್ಬಂದಿಗಳು ಉಪಸ್ಥಿತರಿದ್ದರು.


