ಹಿಂದೂ ಜಾಗರಣ ವೇದಿಕೆ ಬಂಟ್ವಾಳ ತಾಲೂಕು ಶ್ರೀ ಕಾರಿಂಜೇಶ್ವರ ಕ್ಷೇತ್ರ ಸಂರಕ್ಷಣಾ ಸಮಿತಿ ಹೋರಾಟದ 3ನೇ ಹಂತದ ರುದ್ರ ಗಿರಿಯ ರಣಕಹಳೆಯ ಝೇಂಕಾರ ಗ್ರಾಮಗ್ರಾಮಗಳ ಮನೆ ಮನೆಗಳಿಗೆ, “ಮನೆ ಸಂಪರ್ಕ ಜನ ಜಾಗರಣ ಅಭಿಯಾನ”ದ ಪ್ರಯುಕ್ತ ಶ್ರೀ ಕ್ಷೇತ್ರ ಕಾರಿಂಜೇಶ್ವರನ ಸನ್ನಿಧಾನದಲ್ಲಿ ಕಾರ್ಯಕ್ರಮದ ಯಶಸ್ಸಿಗಾಗಿ ಭಗವಂತನಲ್ಲಿ ಪ್ರಾರ್ಥಿಸಲಾಯಿತು. ಈ ಸಂದರ್ಭದಲ್ಲಿ ಬಂಟ್ವಾಳ ಹಿಂದೂ ಜಾಗರಣ ವೇದಿಕೆ ಅಧ್ಯಕ್ಷ ತಿರುಲೇಶ್ ಬೆಳ್ಳೂರು, ಪ್ರಧಾನ ಕಾರ್ಯದರ್ಶಿ ಯೋಗೀಶ್ ತುಂಬೆ, ಸಂಪರ್ಕ ಪ್ರಮುಖ್ ರವಿ ಕೆಂಪುಗುಡ್ಡೆ, ಹಿಂದೂ ಜಾಗರಣ ವೇದಿಕೆ ಬಂಟ್ವಾಳ ನಗರದ ಅಧ್ಯಕ್ಷರು ಚಿದಾನಂದ ಕುಜ್ಲುಬೆಟ್ಟು ಹಾಗೂ ಶ್ರೀಕಾಂತ್ ಕಾಯರಡ್ಕ,ನಮಿತ್ ವಗ್ಗ, ಪ್ರಸಾದ್ ವಗ್ಗ, ಶರತ್ ವಗ್ಗ ಮತ್ತು ಜಾಗರಣ ಸದಸ್ಯರು ಉಪಸ್ಥಿತರಿದ್ದರು. ನಂತರ ವಗ್ಗ ಪರಿಸರದಲ್ಲಿ ಕೆಲವು ಮನೆಗಳಿಗೆ ತೆರಳಿ ಸಹಿ ಸಂಗ್ರಹಿಸಲಾಯಿತು. ನಾಳೆಯಿಂದ ಬಂಟ್ವಾಳ ತಾಲೂಕಿನ ಎಲ್ಲಾ 84 ಗ್ರಾಮಗಳಲ್ಲಿ ಎಲ್ಲಾ ಹಿಂದೂ ಮನೆಗಳ ಸಹಿ ಸಂಗ್ರಹವನ್ನು ಕಾರ್ಯಕರ್ತರು ಮಾಡಲಿದ್ದಾರೆ.