ಬಂಟ್ವಾಳ: ಈ ಭಾಗದ ಅಭಿವೃದ್ದಿಯ ಜೊತೆಗೆ ಮುಂದಿನ ವರ್ಷ ದಶಮಾನೋತ್ಸವ ಕಂಬಳವನ್ನು ಅದ್ದೂರಿಯಾಗಿ ನಡೆಸಲು ಎಲ್ಲಾ ರೀತಿ ಸಹಕಾರ ನೀಡುವುದಾಗಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಭರವಸೆ ನೀಡಿದ್ದಾರೆ.
ಅ ಶನಿವಾರ ರಾತ್ರಿ ಬಂಟ್ವಾಳ ತಾ. ಉಳಿ ಗ್ರಾಮದ ಕಕ್ಯಪದವಿನ ಮೈರ ಬರ್ಕೆಜಾಲುನಲ್ಲಿ ಶ್ರೀ ರಾಮಾಂಜನೇಯ ಗೆಳೆಯರ ಬಳಗದ ವತಿಯಿಂದ ನಡೆದ 9 ನೇ ವರ್ಷದ ” ಸತ್ಯ-ಧರ್ಮ ಜೋಡುಕರೆ ಬಯಲು” ಕಂಬಳದ ಸಮಾರೋಪದ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಗ್ರಾಮೀಣ ಭಾಗವಾದ ಉಳಿಗ್ರಾಮದಲ್ಲಿ 9 ವರ್ಷಗಳಿಂದ ಕಂಬಳ ಆಯೋಜಿಸುತ್ತಿರುವ ಗೆಳೆಯರ ಬಳಗದ ಯುವಕರ ಶ್ರಮ ಅಭಿನಂದನೀಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ, ಮಾಜಿ ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯ ಅಧಿಕಾರಿ ಜಗನಾಥ ಬಂಗೇರ ನಿರ್ಮಲ್, ಉಳಿ ಪಂಚಾಯತ್ ನಿವೃತ್ತ ಅಭಿವೃದ್ಧಿ ಅಧಿಕಾರಿ ಶ್ರೀಧರ ಅವರನ್ನು ಸಮ್ಮಾನಿಸಲಾಯಿತು.
ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರು ಮಾತನಾಡಿ,ಬಂಟ್ವಾಳ ಕ್ಷೇತ್ರದ ಗ್ರಾಮೀಣ ಭಾಗದಲ್ಲಿ ಅಭಿವೃದ್ದಿಯ ಜೊತೆಗೆ ಭಾರತೀಯ ಸಂಸ್ಕೃತಿ ಉಳಿಸುವ ಕೆಲಸ ಶಾಸಕ ರಾಜೇಶ್ ನಾಯಕ್ ಅವರ ನೇತೃತ್ವದಲ್ಲಿ ನಡೆಯುತ್ತಿರುವುದು ಪ್ರಶಂಶನೀಯವಾಗಿದೆ ಎಂದರು. ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಎಂ., ಜಯಂತ ಕೋಟ್ಯಾನ್ ಬೆಳ್ತಂಗಡಿ, ಜಿ.ಪಂ.ಮಾಜಿ ಸದಸ್ಯ ಎಂ.ತುಂಗಪ್ಪ ಬಂಗೇರ, ಬಂಟ್ವಾಳ ಬಿಜೆಪಿ ಕ್ಷೇತ್ರಾಧ್ಯಕ್ಷ ದೇವಪ್ಪ ಪೂಜಾರಿ ಬಾಳಿಕೆ, ಬೂಡಾ ಅಧ್ಯಕ್ಷ ದೇವದಾಸ ಶೆಟ್ಟಿ, ಸಮಿತಿ ಮಾಜಿ ಅಧ್ಯಕ್ಷ ಹರೀಶ್ಚಂದ್ರ ಪೂಜಾರಿ ಕನಪಾಡಿಬೆಟ್ಟು,ಕಂಬಳ ಸಮಿತಿ ಅಧ್ಯಕ್ಷ ರೋಹಿತ್ ಹೆಗ್ಡೆ, ಉಳಿ ಗ್ರಾ.ಪಂ. ಅಧ್ಯಕ್ಷ ಸುರೇಶ್ ಮೈರ, ಉಪಾಧ್ಯಕ್ಷ ಚಿದಾನಂದ ರೈ , ಭರತ್ ಶೆಟ್ಟಿ ಬೆಂಗಳೂರು, ಪ್ರಮುಖರಾದ ಸುಧಾಕರ ಶೆಟ್ಟಿ ಶಂಕರಬೆಟ್ಟು, ಕಂಬಳ ಸಮಿತಿ ಅಧ್ಯಕ್ಷ ಕುಸುಮಾಧರ ಉರ್ಕಿ,ಗೆಳೆಯರ ಬಳಗದ ಅಧ್ಯಕ್ಷ ಮಹೇಂದ್ರ ಕಾಯರ್‌ಗುರಿ, ಪ್ರಮುಖರಾದ ತುಷಾರ್ ಆರ್.ಭಂಡಾರಿ, ಲತೀಶ್ ಕುಕ್ಕಾಜೆ ,ಧನಂಜಯ ಶೆಟ್ಟಿ ನಾಡಬೆಟ್ಟು, ಶಾಂತಪ್ಪ ಪೂಜಾರಿ ಹಟದಡ್ಕ, ಉಮೇಶ್ ಪೂಜಾರಿ, ಪ್ರಭಾಕರ ಪ್ರಭು,ಪುರುಷೋತ್ತಮ ಸಾಲಿಯಾನ್ ಶಂಭೂರು,ಯಶೋಧರ ಕರ್ಬೆಟ್ಡು,ಮಾಧವ ಮಾವೆ,ಸುದರ್ಶನ್ ಬಜ, ರಘು ಸಪಲ್ಯ, ಬೊಳ್ಳುಕಲ್ಲು ನಾರಾಯಣ ಪೂಜಾರಿ,ಸರಪಾಡಿ ಅಶೋಕ್ ಶೆಟ್ಟಿ, ಪುರುಷೋತ್ತಮ ಪೂಜಾರಿ ಪಲ್ಕೆ, ರಂಜಿತ್ ಮೈರ ಮತ್ತಿತರರು ಭಾಗವಹಿಸಿದ್ದರು.
ತೀರ್ಪುಗಾರರರಾಗಿ ಮತ್ತು ಉದ್ಘೋಷಕರಾಗಿ ದ.ಕ.ಜಿಲ್ಲಾ ಕಂಬಳ ಸಮಿತಿ ವಕ್ತಾರರಾದ ಗುಣಪಾಲ ಕಡಂಬ,ರಾಜೀವ ಶೆಟ್ಟಿ ಎಡ್ತೂರು. ಸುಧಾಕರ ಶೆಟ್ಟಿ ಮೊಗೆರೋಡಿ,ನಿರಂಜನ ರೈ, ಸೀತಾರಾಮ ಶೆಟ್ಟಿ, ಸತೀಶ್ ಹೊಸ್ಮಾರು,ಚಿದಾನಂದ ರೈ, ವಲೇರಿಯನ್ ಡೇಸಾ,ಸುದೀಶ್ ಕುಮಾರ್, ಜನಾರ್ದನ ನಾಯ್ಕ, ಪ್ರಕಾಶ್ ಕರ್ಲ, ಸಂದೀಪ್ ಹೆಗ್ಡೆ , ಮಹಾವೀರ ಜೈನ್, ಪ್ರಖ್ಯಾತ್ ಭಂಡಾರಿ ಮತ್ತಿತರರು ಸಹಕರಿಸಿದ್ದರು.
ಶಿವಾನಂದ ಮೈರ ಸ್ವಾಗತಿಸಿದರು. ಪ್ರಶಾಂತ ಮೈರ ಕಾರ್ಯಕ್ರಮ ನಿರೂಪಿಸಿದರು.