ಚಂದ್ರಮನ ಹಾಳ್ಬೆಳದಿಂಗಳಿಗಿಂತ
ಚೆಂದ ಮೊಗದ ಕಾಂತಿಯು /
ನೋಡುತಾ ಮೈ ಮರೆಯಬೇಕೇನುವ
ಹುಚ್ಚು ಮನದ ಆಸೆಯು //
ಕಾಮನ ಬಿಲ್ಲಿನಂತೆ ಕಣ್ಣ ಹುಬ್ಬುಗಳು
ಯಾವ ಕಲೆಗಾರನ ಕಲ್ಪನೆಯ ಚೆಲುವು /
 ನುಡಿಸಿದಂತೆ ಸಪ್ತ ಸ್ವರಗಳು
ನಿನ್ನ ಚಂದನೆ ನಗುವು //
ಬಾಗಿ ಬಳುಕುವ ನಾಗವೇಣಿ
ಕವಿಯ ಕಲ್ಪನೆ ಕಣ್ಮಣಿ/
ಮನವು ಸೋತು ಸ್ನೇಹ ಬಯಸಿದೆ
ಒಲವ ಚೆಲುವಿನ ಅರಗಿಣಿ //
ಮತ್ತೆ ಮತ್ತೆ ಶರಣು ನಾನು
ನಿನ್ನ ಚಂದದ ಚೆಲುವಿಗೆ /
ಪ್ರೇಮದಿಂದ ಸಾಗಿ ಬರುವೆಯಾ
ನನ್ನ ಭಾವ ಯಾನಕೆ //
*ಭಾವಯಾನಿ*(ಪ್ರಮೀಳಾ ರಾಜ್ )

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here