ಬಂಟ್ವಾಳ : ಬಿಜೆಪಿ ಯುವಮೋರ್ಚಾ ಆಮ್ಟಾಡಿ ಮಹಾಶಕ್ತಿಕೇಂದ್ರದ ಬೂತ್ ಸಂಚಾಲಕ್ ಸಹಸಂಚಲಕ್ ಸಭೆಯು ಬಡಕಬೈಲ್ ಬಳಿಯ ಸಭಾಭವನದಲ್ಲಿ ನೆರವೇರಿತು.
ಸಭೆಯು ಮಹಾಶಕ್ತಿಕೇಂದ್ರ ಯುವಮೋರ್ಚಾ ಅಧ್ಯಕ್ಷರಾದ ಸಚಿನ್ ಮಣಿಕಂಠಪುರ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಬಿಜೆಪಿ ಜಿಲ್ಲಾ ಯುವಮೋರ್ಚಾ ಸದಸ್ಯರಾದ ಲೋಕೇಶ್ ಪಲ್ಲಿಪ್ಪಾಡಿ ಸ್ವಾಗತಿಸಿದರು. ಕ್ಷೇತ್ರ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಅಶ್ವಥ್ ರಾವ್ ಪ್ರಾಸ್ತಾವಿಕ ನುಡಿಯನ್ನು ಆಡಿದರು.ನಂತರ ನೂತನ ಸಂಚಾಲಕ ಸಹಸಂಚಲಕರನ್ನ ಉದ್ದೇಶಿಸಿ ಬಿಜೆಪಿಯ ಸಂಘಟನಾತ್ಮಕ ವಿಚಾರಗಳ ಕುರಿತಾಗಿ ಬಿಜೆಪಿ ಬಂಟ್ವಾಳ ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಡೊಂಬಯ ಅರಳರವರು ಸವಿಸ್ತಾರವಾಗಿ ತಿಳಿಸಿದರು.ನಂತರ ಮಾತನಾಡಿದ ಜಿಲ್ಲಾ ಕಾರ್ಯಕರಣಿ ಸದಸ್ಯರಾದ ಕಿಶೋರ್ ಪಲ್ಲಿಪ್ಪಾಡಿಯವರು ಕಾರ್ಯಕರ್ತರ ಮುಂದಿರುವ ಸವಾಲುಗಳನ್ನು ಹಾಗೂ ಕಾರ್ಯಪ್ರವೃತ್ತರಾಗುವ ರೀತಿಯನ್ನು ತಿಳಿ ಹೇಳಿದರು. ಯುವಮೋರ್ಚಾ ಬಂಟ್ವಾಳ ಉಪಾಧ್ಯಕ್ಷರಾದ ಕಾರ್ತಿಕ್ ಬಲ್ಲಾಳ್ ವಾಂದನಾರ್ಪಣೆಗೈದರು.
ಕಾರ್ಯಕ್ರಮದಲ್ಲಿ ಯುವಮೋರ್ಚಾ ಬಂಟ್ವಾಳದ ಅಧ್ಯಕ್ಷರಾದ ಪ್ರದೀಪ್ ಅಜ್ಜಿಬೆಟ್ಟು,ಉಪಾಧ್ಯಕ್ಷರುಗಳಾದ ಹೇಮಂತ್ ಮಾಣಿ,ಪ್ರಮೋದ್ ನೂಜಿಪ್ಪಾಡಿ,ಮಾಜಿ ತಾಲೂಕ್ ಪಂಚಾಯತ್ ಸದಸ್ಯ ಯಶವಂತ್ ಪೊಳಲಿ, ಮಂಡಲ ಯುವಮೋರ್ಚಾ ಸದಸ್ಯರಾದ ಯತಿನ್ ಶೆಟ್ಟಿ, ಮಹಾಶಕ್ತಿಕೇಂದ್ರ ಯುವಮೋರ್ಚಾ ಪ್ರಮುಖರಾದ ಸಿತೇಶ್ ಅಂಚನ್, ಸಂದೇಶ್ ಕೂರಿಯಾಳ,ಪಂಚಾಯತ್ ಸದಸ್ಯರಾದ ಲೋಕೇಶ್ ಭರಣಿ ಹಾಗೂ ಇತರ ಪಧಾದಿಕಾರಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದು ಯಶಸ್ವಿಗೊಳಿಸಿದರು.