ಬಂಟ್ವಾಳ: ಶ್ರೀ ಭಗವತಿ ದೇವಸ್ಥಾನ ವಿಟ್ಲ ಇಲ್ಲಿ ಶ್ರೀ ಧರ್ಮಶಾಸ್ತ್ರ ಭಕ್ತವೃಂದ ಇದರ 41ನೇ ವಾರ್ಷಿಕೋತ್ಸವ ಮತ್ತು ಶ್ರೀ ಅಯ್ಯಪ್ಪ ಸ್ವಾಮಿ ಇರುಮುಡಿ ಕಟ್ಟುವ ಕಾರ್ಯಕ್ರಮವು ಡಿ.9ರಂದು ನಾಳೆ ಬೆಳಿಗ್ಗೆ ಎಂಟಕ್ಕೆ ಸರಿಯಾಗಿ ಶ್ರೀ ಮೋನಪ್ಪ ಗುರುಸ್ವಾಮಿ ನೇತೃತ್ವದಲ್ಲಿ ನಡೆಯಲಿದೆ. ಮಧ್ಯಾಹ್ನ ಅನ್ನಸಂತರ್ಪಣೆ ಹಾಗೂ ಸಾಯಂಕಾಲ 5ರಿಂದ ಶ್ರೀ ಕೋದಂಡರಾಮ ಕೃಪಾ ಪೋಷಿತ ಯಕ್ಷಗಾನ ಮಂಡಳಿ ಶ್ರೀ ಹನುಮಗಿರಿ ಮೇಳದವರಿಂದ ಶ್ರೀ ಭಗವತಿ ದೇವಸ್ಥಾನದ ರಂಗಮಂಟಪದಲ್ಲಿ “ಭಸ್ಮಾಸುರ ಮೋಹಿನಿ ಶಬರಿಮಲೆ ಅಯ್ಯಪ್ಪ” ಎಂಬ ಪೌರಾಣಿಕಯಕ್ಷಗಾನ ಪ್ರದರ್ಶನಗೊಳ್ಳಲಿದೆ.