Tuesday, October 24, 2023

ಬಿಜೆಪಿ ಅಧಿಕಾರದಲ್ಲಿ ಮುಂದುವರಿದರೆ ದೇಶ ಇನ್ನಷ್ಟು ಅಪಾಯಕಾರಿ ಸನ್ನಿವೇಶ ಎದುರಿಸಬೇಕಾಗುತ್ತದೆ: ಕೇರಳ ಕಲ್ಪಟ್ಟಿ ಶಾಸಕ ಟಿ.ಸಿದ್ದೀಕ್

Must read

ಬಂಟ್ವಾಳ: ಕಾಂಗ್ರೇಸ್ ಗೆ ಭದ್ರ ಬುನಾದಿ ಇರುವ ಬಂಟ್ವಾಳ ಕ್ಷೇತ್ರದಲ್ಲಿ ಸೈದ್ದಾಂತಿಕ ನೆಲೆ ಕಟ್ಟಿನಲ್ಲಿ ಪಕ್ಷವನ್ನು ಕಟ್ಟಿ ಬಲಪಡಿಸಲು ನಾವು ಒಂದಾಗಬೇಕು ಎಂದು ಮಾಜಿ‌ ಸಚಿವ ಬಿ.ರಮಾನಾಥ ರೈ ಅವರು ಹೇಳಿದರು.

ಅವರು ಪಾಣೆಮಂಗಳೂರು ಸಾಗರ್ ಆಡಿಟೋರಿಯಂ ನಲ್ಲಿ ನಡೆದ ಪಾಣೆಮಂಗಳೂರು ಮತ್ತು ಬಂಟ್ವಾಳ ಬ್ಲಾಕ್ ಕಾಂಗ್ರೇಸ್ ಸಮಿತಿ ವತಿಯಿಂದ ಅಲ್ಪಸಂಖ್ಯಾತ ರ ಸಮಾವೇಶ ಹಾಗೂ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ರುಗಳ ಮತ್ತು ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ತೆಂಗಿನ ಗಿಡಕ್ಕೆ ನೀರೆರುಯುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಜನರನ್ನು ಬಲಿಷ್ಠರಾಗಿ ಮಾಡಿದರೆ ದೇಶ ಬಲಿಷ್ಠ ವಾಗುತ್ತದೆ ಈ ಕಾರ್ಯ ಕಾಂಗ್ರೇಸ್ ಪಕ್ಷದಿಂದ ಮಾತ್ರ ಸಾಧ್ಯ ಎಂದು ಅವರು.

ಎಲ್ಲಾ ಜಾತಿ, ಧರ್ಮ, ಸಂಸ್ಕೃತಿಯನ್ನು ಜೊತೆಯಾಗಿ ಪ್ರೀತಿ ಯಿಂದ ಕೊಂಡುಹೋಗುವುದೇ ಸಬ್ ಕಾ ಸಾಥ್ ಸಭ್ ಕಾ ವಿಕಾಸ್ ಎಂದು ಅವರು ಹೇಳಿದರು.

ಎಲ್ಲಾ ಸಮುದಾಯದ ವರು ಸೇರಿ ಒಂದಾದರೆ ಮಾತ್ರ ಬಲಿಷ್ಠ ಭಾರತದ ನಿರ್ಮಾಣ ಸಾಧ್ಯ ಎಂದರು.

ದೇಶದ ಸಾಮರಸ್ಯಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ, ಕರ್ತವ್ಯ ಪ್ರತಿಯೊಬ್ಬ ವ್ಯಕ್ತಿಗೂ ಇದೆ ಎಂದು ಅವರು ಹೇಳಿದರು.

ಕಾಂಗ್ರೇಸ್ ಮುಕ್ತ ದೇಶವನ್ನಾಗಿ ಮಾಡಲು ಯಾರಿಂದಲೂ ಸಾಧ್ಯವಿಲ್ಲ ಎಂಬ ಮಾತನ್ನು ಒತ್ತಿ ಹೇಳಿದರು.

ಕಾರ್ಯಕರ್ತರ ಜೊತೆ ಸದಾ ಇದ್ದೇನೆ. ಕಾಂಗ್ರೇಸ್ ಪಕ್ಷ ಬಲಿಷ್ಠ ಪಡಿಸಲು ಕಾರ್ಯಕರ್ತರು ಜಾತ್ಯಾತೀತ ಸಿದ್ದಾಂತ ಮೈಗೂಡಿಸಿಕೊಂಡು ರಾಜ್ಯದಲ್ಲಿ ಕಾಂಗ್ರೇಸ್ ನ್ನು ಮತ್ತೊಮ್ಮೆ ಅಧಿಕಾರ ಕ್ಕೆ ತರುವ ಕೆಲಸ ಮಾಡಬೇಕಾಗಿದೆ ಎಂದು ಅವರು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆ.ಕೆ.ಶಾಹುಲ್ ಹಮೀದ್ ವಹಿಸಿದ್ದರು.

ಕಾಂಗ್ರೆಸ್ ಪಕ್ಷ ದೇಶದ ಸರ್ವಸ್ವವಾಗಿದ್ದು ದೇಶದಲ್ಲಿ ಸಂವಿಧಾನ, ಜಾತ್ಯತೀತ ಸಿದ್ಧಾಂತ ಇನ್ನೂ ಬಲಿಷ್ಠವಾಗಿದ್ದರೆ ಅದು ಈ ದೇಶಕ್ಕೆ ಕಾಂಗ್ರೆಸ್ ನೀಡಿದ ಮಹಾ ಕೊಡುಗೆಯಾಗಿದೆ ಎಂದು ಕೇರಳ ಕಲ್ಪೆಟ್ಟ ಶಾಸಕ, ಕೆಪಿಸಿಸಿ ಕಾರ್ಯಧ್ಯಕ್ಷ ಅಡ್ವಕೇಟ್ ಟಿ.ಸಿದ್ದೀಕ್ ಹೇಳಿದರು.

ದೇಶಕ್ಕೆ ಕಾಂಗ್ರೆಸ್ ಏನು ಮಾಡಿದೆ ಎಂದು ಪ್ರಶ್ನಿಸುವವರಿಗೆ ನಾವು ಉತ್ತರಿಸುವ ಅಗತ್ಯವಿಲ್ಲ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿರುವುದೇ ಕಾಂಗ್ರೆಸ್. ಮಹಾತ್ಮಾ ಗಾಂಧಿ, ನೆಹರೂ, ಇಂದಿರಾ ಗಾಂಧಿ, ರಾಜೀವ್ ಗಾಂಧಿ ಮೊದಲಾದ ಮಹಾನ್ ನಾಯಕರ ಸಮೂಹ, ಪ್ರಮುಖ ಅಣೆಕಟ್ಟುಗಳು, ಅಣುಸ್ಥಾವರಗಳು, ಕೃಷಿಕ್ರಾಂತಿ, ನರೇಗಾ, ಆಹಾರ ಭದ್ರತೆ, ವಿಮಾನ ನಿಲ್ದಾಣ, ಬಂದರುಗಳು, ರಾಷ್ಟ್ರೀಕರಣ, ಆರ್.ಟಿ.ಐ., ಆರ್.ಟಿ.ಇ. ಹೀಗೆ ಸಾಲು ಸಾಲು ಜನಪರ ಕಾಯ್ದೆಗಳು, ಸಂಸ್ಥೆಗಳನ್ನು ಕಾಂಗ್ರೆಸ್ ಈ ದೇಶಕ್ಕೆ ಕೊಟ್ಟಿದೆ. ಇವುಗಳನ್ನೆಲ್ಲ ಉಪಯೋಗಿಸಿ ಇಂದು ಅಧಿಕಾರ ನಡೆಸುತ್ತಿರುವ ಬಿಜೆಪಿಯವರು, ಕಾಂಗ್ರೆಸ್ ಏನು ಕೊಟ್ಟಿದೆ ಎಂದು ಪ್ರಶ್ನಿಸುತ್ತಿರುವುದೇ ಬಿಜೆಪಿಯ ಸಾಧನೆ ಎಂದು ಅವರು ವ್ಯಂಗ್ಯವಾಡಿದರು.

ಸರ್ವ ಜಾತಿ, ಧರ್ಮ, ಭಾಷೆ, ಪ್ರಾಂತ್ಯಗಳನ್ನು ಒಂದುಗೂಡಿಸಿ ಕಾಂಗ್ರೆಸ್ ನಿರ್ಮಿಸಿದ ಬಲಿಷ್ಠ ಸೌಹಾರ್ದ ಭಾರತವನ್ನು ಧರ್ಮದ ಹೆಸರಿನಲ್ಲಿ ಮನುಷ್ಯ ಮನುಷ್ಯರ ನಡುವೆ ಹಗೆತನ, ದ್ವೇಷ, ಕಂದಕವನ್ನು ಸೃಷ್ಟಿಸಿ ದೇಶವನ್ನು ವಿಭಜಿಸುವ ಪ್ರಯತ್ನವನ್ನು ಬಿಜೆಪಿ ಮಾಡುತ್ತಿದೆ. ಸಂವಿಧಾನದ ಆಶಯಗಳನ್ನು ಬುಡಮೇಲು ಮಾಡಿ ದೇಶವನ್ನು ನರಕವನ್ನಾಗಿ ಮಾಡಲು ಹೊರಟಿದೆ. ಬಿಜೆಪಿ ಅಧಿಕಾರದಲ್ಲಿ ಮುಂದುವರಿದರೆ ದೇಶ ಇನ್ನಷ್ಟು ಅಪಾಯಕಾರಿ ಸನ್ನಿವೇಶವನ್ನು ಎದುರಿಸಬೇಕಾಗಿದೆ. ಹಾಗಾಗಿ ಬಿಜೆಪಿಯಿಂದ ದೇಶವನ್ನು ರಕ್ಷಿಸಬೇಕಾಗಿದೆ ಎಂದು ಅವರು ಹೇಳಿದರು.

ಕೋಮುವಾದ ದೇಶಕ್ಕೆ ಮಾರಕವಾಗಿದೆ. ಆರೆಸ್ಸೆಸ್, ಬಿಜೆಪಿ, ಎಸ್.ಡಿ.ಪಿ.ಐ. ಸಮಾನ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಆರೆಸ್ಸೆಸ್, ಎಸ್.ಡಿ.ಪಿ.ಐ. ಶಾಂತಿ, ಸೌಹಾರ್ದ, ಸಹೋದರತೆಯಿಂದ ಬಾಳುವ ಜನರ ನಡುವೆ ಕ್ರೂರತೆಯನ್ನು ತರುತ್ತಿದೆ. ವಿಭಜಿಸುವ ಕೆಲಸ ಅವರಿಂದ ನಡೆಯುತ್ತಿದ್ದರೆ, ಒಂದುಗೂಡಿಸುವ ಕೆಲಸ ಕಾಂಗ್ರೆಸ್ ನಿಂದ ಆಗಬೇಕು. ಅದಕ್ಕಾಗಿ ಆರೆಸ್ಸೆಸ್, ಎಸ್.ಡಿ.ಪಿ.ಐ. ಅನ್ನು ಬಲಹೀನಗೊಳಿಸಲು ದೇಶದಲ್ಲಿ ಕಾಂಗ್ರೆಸ್ ಬಲಿಷ್ಠವಾಗಬೇಕು ಎಂದರು.

ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಮಾತನಾಡಿ, ಜಾತ್ಯಾತೀತ ಮನೋಭಾವ ದೊಂದಿಗೆ ಮತವಿಭಜನೆಯಾಗದಂತೆ ನೋಡಿಕೊಂಡು ಮುಂದಿನ ಚುನಾವಣೆಯನ್ನು ಗೆಲ್ಲುವುದು ನಮ್ಮ ಗುರಿಯಾಗಬೇಕು.

ಬಿಜೆಪಿ ಸಂಪೂರ್ಣ ವಿಫಲತೆಯನ್ನು ಕಾಣುತ್ತಿದ್ದು, ಬಿಜೆಪಿಯ ಜನವಿರೋಧಿ ಸರಕಾರದ ಆಡಳಿತ ದಿಂದ ಇತ್ತೀಚಿಗೆ ನಡೆದ ಚುನಾವಣೆಯಲ್ಲಿ ಸೋಲು ಆಗಿದೆ ಎಂದು ಅವರು ಹೇಳಿದರು.

ಪಂಜಾಬ್ ನಲ್ಲಿ ನಡೆದ ಘಟನೆಗೆ ಕೇಂದ್ರ ಸರಕಾರದ ಭದ್ರತಾ ಪಡೆಯ ವೈಫಲ್ಯವೇ ಹೊರತು ಪಂಜಾಬ್ ಸರಕಾರದ ವೈಫಲ್ಯವಲ್ಲ ಎಂದು ಹರೀಶ್ ಕುಮಾರ್ ಗೇಲಿ ಮಾಡಿದರು.

ಕಾಂಗ್ರೇಸ್ ಪಕ್ಷದ ಪಾದಯಾತ್ರೆ ನಿಲ್ಲಿಸುವ ಉದ್ದೇಶದಿಂದ ಲಾಕ್ ಡೌನ್ ಘೋಷಣೆ ಬಿಜೆಪಿ ಸರಕಾರ ಮಾಡಿದ ಎಂದು ಅವರು ಆರೋಪ ವ್ಯಕ್ತಪಡಿಸಿದರು.

ಪಕ್ಷದ ಪ್ರಮುಖರಾದ ಐವನ್ ಡಿ.ಸೋಜ, ಪಿ.ಬಿ.ಮೋಹನ್, ಬಿ.ಎ.ಬಾವ,  ಎಂ.ಎಸ್.ಮಹಮ್ಮದ್, ಚಂದ್ರಪ್ರಕಾಶ್ ಶೆಟ್ಟಿ, ಪಿಯೂಸ್ ಎಲ್ ರೊಡ್ರಿಗಸ್, ಬಿ.ಎಚ್ ಖಾದರ್, ಮಹಮ್ಮದ್ ನಂದರಬೆಟ್ಟು, ಸುದರ್ಶನ ಜೈನ್, ಮಹಮ್ಮದ್ ಶರೀಫ್, ಜೆಸಿಂತ ಡಿ.ಸೋಜ, ಪದ್ಮಶೇಖರ್ ಜೈನ್,ರಾಷ್ಟ್ರೀಯ ವಕ್ತಾರೆ ಸುರೆಯಿಯಾಅಂಜುಮಾನ್, ಜಾಸ್ಮಿನ್ ಡಿ.ಸೋಜ,ಅಬ್ದುಲ್ ಹಮೀದ್, ಅಲ್ಬರ್ಟ್ ಮಿನೇಜಸ್, ಮೆರಿಲ್ ರೇಗೋ, ಹನೀಫ್ ಹಾಜಿ, ಅಬ್ಬಾಸ್ ಆಲಿ, ಇದಿನಬ್ಬ, ಬೇಬಿಕುಂದರ್, ಸುದೀಪ್ ಶೆಟ್ಟಿ ಮಾಣಿ,

ನವಾಜ್ ಬಡಕಬೈಲು, ಸುರೇಶ್ ಜೋರಾ, ಮಹಮ್ಮದ್ ಸಂಗಬೆಟ್ಟು, ಇಸ್ಮಾಯಿಲ್ ಸಿದ್ದೀಕ್ , ಅರ್ಶದ್ ಸರವು, ಕೆ ಮಹಮ್ಮದ್ ಶರೀಫ್, ರಿಯಾಜ್ ಬಂಟ್ವಾಳ ಮತ್ತಿತರರು ಉಪಸ್ಥಿತರಿದ್ದರು.

*ಪಾಣೆಮಂಗಳೂರು ಬ್ಲಾಕ್ ಕಾಂಗ್ರೇಸ್ ಅಲ್ಪಸಂಖ್ಯಾತ ಘಟಕದ ನಿಯೋಜಿತ ಅಧ್ಯಕ್ಷ ಅರ್ಶದ್ ಸರವು ಹಾಗೂ ಬಂಟ್ವಾಳ ಬ್ಲಾಕ್ ಕಾಂಗ್ರೇಸ್ ಅಲ್ಪಸಂಖ್ಯಾತ ಘಟಕದ ನಿಯೋಜಿತ ಅಧ್ಯಕ್ಷ ಕೆ.ಮಹಮ್ಮದ್ ಶರೀಫ್ ಅವರ ಪದಗ್ರಹಣ ಕಾರ್ಯಕ್ರಮ ನಡೆಯಿತು.

ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಎಂ.ಎಸ್. ಮಹಮ್ಮದ್ ಸ್ವಾಗತಿಸಿದರು.

ಹಮೀದ್ ಗೋಳ್ತಮಜಲು, ನೌಫಾಲ್ ಕುಡ್ತಮೊಗೆರು ಅವರು ಕಾರ್ಯಕ್ರಮ ನಿರೂಪಿಸಿದರು.

More articles

Latest article