ಬಂಟ್ವಾಳ: ಪುಂಜಾಲಕಟ್ಟೆ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್‌ನ ವತಿಯಿಂದ ಪುಂಜಾಲಕಟ್ಟೆ ಬಂಗ್ಲೆ ಮೈದಾನದ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪುನೀತ್ ರಾಜ್‌ಕುಮಾರ್ ಯುವರತ್ನ ಪ್ರಶಸ್ತಿ ಪ್ರೊ ಕಬಡ್ಡಿ ಉತ್ಸವದಲ್ಲಿ ಸಾಧಕರಿಗೆ ಅಪ್ಪು ಯುವರತ್ನ ಪುರಸ್ಕಾರ ಮತ್ತು ಸ್ವಸ್ತಿಕ್ ಸಂಭ್ರಮ ಪುರಸ್ಕಾರ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಶನಿವಾರ ನಡೆಯಿತು.
ದಿನೇಶ್ ಅಮೀನ್(ಸಹಕಾರಿಕ್ಷೇತ್ರ), ಮಹಮ್ಮದ್ ರಫೀಕ್‌ಗುರುವಾಯನಕೆರೆ(ಕ್ರೀಡೆ)ಅವರಿಗೆ ಅಪ್ಪು ಯುವ ರತ್ನ ಪುರಸ್ಕಾರ ಹಾಗೂ ಸುಧಾಕರ ಸಾಲ್ಯಾನ್ ಬಿ.ಸಿ.ರೋಡ್ (ಸಮಾಜಸೇವೆ), ಜಾಕೋಬ್ ಮೋರಾಸ್(ನಾಟಿ ವೈದ್ಯ), ರಮಾನಂದ ನೂಜಿಪ್ಪಾಡಿ(ಶಿಕ್ಷಣ), ಕ್ಷಿತಿ ಕೆ.ರೈ,(ಕಲೆ) ಯಕ್ಷಚಿಗುರು ಕಲಾ ತಂಡ ಅಜಿಲಮೊಗರು(ಸಂಘಟನೆ).ಶಾಂತಾರಾಮ ಹೆಗ್ಡೆ(ಕ್ರೀಡೆ) ಅವರಿಗೆ ಸ್ವಸ್ತಿಕ್ ಸಂಭ್ರಮ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಈ ಸಂದರ್ಭದಲ್ಲಿ ಪಿಲಾತಬೆಟ್ಟು ಗ್ರಾ. ಪಂ. ಅಧ್ಯಕ್ಷೆ ಹರ್ಷಿಣಿ ಪುಷ್ಪಾನಂದ, ಪುಂಜಾಲಕಟ್ಟೆ ಶ್ರೀ ಮುರುಘೇಂದ್ರ ಮಿತ್ರ ಮಂಡಳಿ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ , ಶ್ರೀ ಮುರುಘೇಂದ್ರ ವನಿತಾ ಸಮಾಜ ಅಧ್ಯಕ್ಷೆ ಆಶಾ ದಿನಕರ ಶೆಟ್ಟಿ, ಪಿಲಾತಬೆಟ್ಟು ವ್ಯ.ಸೇ.ಸ.ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮಂಜಪ್ಪ ಮೂಲ್ಯ, ಕ್ಲಬ್ ಸ್ಥಾಪಕಾಧ್ಯಕ್ಷ, ಜಿ.ಪಂ.ಮಾಜಿ ಸದಸ್ಯ ಎಂ.ತುಂಗಪ್ಪ ಬಂಗೇರ, ಶಮೀರ್ ಕತಾರ್, ಕ್ಲಬ್ ಅಧ್ಯಕ್ಷ ಪ್ರಶಾಂತ್ ಪುಂಜಾಲಕಟ್ಟೆ, ಗೌರವಾಧ್ಯಕ್ಷ ಅಬ್ದುಲ್ಲ ಪಿ., ಪದಾಽಕಾರಿಗಳಾದ ಪ್ರಭಾಕರ ಪಿ.ಎಂ., ಜಯರಾಜ್ ಅತ್ತಾಜೆ , ಅಬ್ದುಲ್ ಹಮೀದ್ ಮಲ್ಪೆ, ಫ್ರಾನ್ಸಿಸ್ ವಿ.ವಿ., ಮಾಧವ ಬಂಗೇರ, ರಂಜಿತ್ ಎಚ್.ಡಿ.ಮತ್ತಿತರರು ಉಪಸ್ಥಿತರಿದ್ದರು.,
ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭ ಹಾರೈಸಿದರು.