ಮಂಗಳೂರು: ಗ್ರಾಮಪಂಚಾಯತ್ ನ ಪಿ.ಡಿ.ಓ ಲಂಚ ಸ್ವೀಕರಿಸುತ್ತಿದ್ದ ವೇಳೆ ಎಸಿಬಿ ಯ ತಂಡಕ್ಕೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಘಟನೆಯೊಂದು ಮಾಲಾಡಿ ಗ್ರಾಮಪಂಚಾಯತ್ ನಲ್ಲಿ ಇಂದು ನಡೆದಿದೆ.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ರವಿ, ಪಂಚಾಯತ್ ವ್ಯಾಪ್ತಿಯಲ್ಲಿ ವಾಸ್ತವ್ಯವಿರುವಂತಹ ವ್ಯಕ್ತಿಯೋರ್ವರಿಂದ ಪಂಚಾಯತ್ ಆಸ್ತಿ ದಾಖಲೆ ಇ ಸ್ವತ್ತು 9 ಮತ್ತು 11 ಎ ನಮೂನೆಯನ್ನು ಮಾಡಲು 15,000 ರೂ. ಲಂಚವನ್ನು ಸ್ವೀಕರಿಸುತ್ತಿದ್ದ. ಸ್ವೀಕರಿಸುತ್ತಿರುವ ವೇಳೆಗೆ ಧಿಡೀರ್ ಆಗಿ ದಕ್ಷಿಣ ಕನ್ನಡ ಭ್ರಷ್ಟಾಚಾರ ನಿಗ್ರಹ ದಳವು ಆರೋಪಿಯನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದೆ.
ಇನ್ಸ್ಪೆಕ್ಟರ್ ಶ್ಯಾಮ್ ಸುಂದರ್ ನೇತೃತ್ವದಲ್ಲಿ ಈ ದಾಳಿಯು ನಡೆದಿದೆ. ಪಿ.ಡಿ.ಒ ರವಿಯನ್ನು ವಶಕ್ಕೆ ಪಡೆದು ವಿಚಾರಣೆಯನ್ನು ನಡೆಸುತ್ತಿದ್ದಾರೆ.