ಬಂಟ್ವಾಳ: ಪೇಜಾವರ ಶ್ರೀ ಶ್ರೀ ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳವರ ದಿವ್ಯ ಹಸ್ತದಿಂದ ಉದ್ಘಾಟಿಸಲ್ಪಟ್ಟ ಬಂಟ್ವಾಳ ತಾಲೂಕು ಕಾವಳಪಡೂರು ಗ್ರಾಮದ ಯಕ್ಷಕೂಟ ಮಧ್ವ(ರಿ.) ಇದರ ದ್ವಿತೀಯ ವಾರ್ಷಿಕೋತ್ಸವ ಮಧ್ವದಲ್ಲಿ ನಡೆಯಿತು.
ಶ್ರೀ ಕಾರಿಂಜೇಶ್ವರ ದೇವಸ್ಥಾನದ ಗ್ರಾಮಣಿ, ಜ್ಯೋತಿಷ ವಿದ್ವಾನ್ ಶ್ರೀಪತಿ ಮುಚ್ಚಿನ್ನಾಯ ಕಾರಿಂಜ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳವರ ತತ್ವ, ಮಾತು ಲೋಕಕ್ಕೆ ಮಾದರಿಯಾಗಿದ್ದು, ಮಧ್ವದಲ್ಲಿ ಅವರಿಂದ ಉದ್ಘಾಟಿಸಲ್ಪಟ್ಟ ಯಕ್ಷಗಾನ ಸಂಘದಿಂದ ಯಕ್ಷಗಾನದ ಉನ್ನತಿಯಾಗಲಿ ಎಂದು ಹೇಳಿದರು.
ಪಿಲಾತಬೆಟ್ಟು ವ್ಯ.ಸೇ.ಸಂಘದ ಅಧ್ಯಕ್ಷ ಕೆ.ಲಕ್ಷ್ಮೀ ನಾರಾಯಣ ಉಡುಪ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ,ಪೌರಾಣಿಕ ಪ್ರಜ್ಞೆ ಮೂಡಿಸುವ, ಸಮಾಜಮುಖಿ ಚಿಂತನೆ ನೀಡುವ ಯಕ್ಷಗಾನಕ್ಕೆ ನಿರಂತರ ಪ್ರೋತ್ಸಾಹ ನೀಡುವ ಮಧ್ವ ಯಕ್ಷ ಕೂಟದ ಕಾರ್ಯ ಅಭಿನಂದನೀಯ ಎಂದರು.
ಪ್ರಗತಿಪರ ಕೃಷಿಕ ಸಂಜೀವ ಶೆಟ್ಟಿ ಮೊಗೆರೋಡಿ, ಸುಧೀರ್ ಪಡಿವಾಳ್ ಮಾಲಾಡಿಗುತ್ತು, ಶ್ರೀಪತಿ ಮುಚ್ಚಿನ್ನಾಯ ಅವರ ಪತ್ನಿ ಪದ್ಮಾವತಿ ಅಮ್ಮ, ಯಕ್ಷವಾಸ್ಯಮ್ ಕಾರಿಂಜ ಇದರ ಸಂಚಾಲಕಿ ಸಾಯಿ ಸುಮಾ ನಾವಡ ಕಾರಿಂಜ,ಯಕ್ಷಕೂಟ ಮಧ್ವ ಇದರ ಪ್ರ.ಕಾರ್ಯದರ್ಶಿ ಗಣನಾಥ ಶೆಟ್ಟಿ , ಸಂಘದ ಕಾರ್ಯಕಾರಿ ಸದಸ್ಯರಾದ ಸಂಜೀವ ಶೆಟ್ಟಿ ಪಂಜಿಕಲ್ಲು,ಭವಾನಿ ಶ್ರೀಧರ ಪೂಜಾರಿ,ಗೋಪಾಲಕೃಷ್ಣ ಬಂಗೇರ, ನಾರಾಯಣ ಶೆಟ್ಟಿ, ರಾಜ್ ಪ್ರಸಾದ್ ಆರಿಗ, ಬೇಬಿ ಕುಂದರ್, ರಮೇಶ್ ನಾಯ್ಕ, ಭಾನುಮತಿ ಶೆಟ್ಟಿ,ಸುಜಾತಾ ಬಿ.ಶೆಟ್ಟಿ, ಪ್ರಮುಖರಾದ ತಿಮ್ಮಪ್ಪ ಶೆಟ್ಟಿ ಪಾತಿಲ, ಸಂಜೀವ ಕುಲಾಲ್, ಪ್ರಭಾಕರ ಅಮೀನ್ ಮತ್ತಿತರರು ಉಪಸ್ಥಿತರಿದ್ದರು.
ಯಕ್ಷ ಕೂಟ ಅಧ್ಯಕ್ಷ ಭಾಸ್ಕರ ಶೆಟ್ಟಿ ಸ್ವಾಗತಿಸಿ, ಪ್ರಸ್ತಾವಿಸಿದರು. ಶಿವಪ್ಪ ಗೌಡ ನಿನ್ನಿಕಲ್ಲು ವಂದಿಸಿದರು.ಉಪಾಧ್ಯಕ್ಷ ರತ್ನದೇವ್ ಪುಂಜಾಲಕಟ್ಟೆ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಶರಸೇತು ಬಂಧನ, ಯಾಗ ಸಂಕಲ್ಪ ಯಕ್ಷಗಾನ ತಾಳಮದ್ದಳೆ ನಡೆಯಿತು.