ವಕೀಲರಸಂಘ (ರಿ ) ಬಂಟ್ವಾಳದ ಇದರ ವತಿಯಿಂದ ಡಿ.10 ರಂದು ವಿಮಾನ ದುರಂತದಲ್ಲಿ ಹುತಾತ್ಮರಾದ
ಸೇನೆಯ ಆಗ್ರ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಮತ್ತು ಇತರ ಸೇನಾ ಯೋಧರಿಗೆ ವಕೀಲರ ಸಂಘದಲ್ಲಿ ಪುಷ್ಪ ನಮನ ಸಲ್ಲಿಸಿ ಗೌರವವನ್ನು ಸಲ್ಲಿಸಲಾಯಿತು.
ಗೌರವ ನಮನ ಕಾರ್ಯಕ್ರಮದ ವೇದಿಕೆಯಲ್ಲಿ ವಕೀಲರ ಸಂಘ (ರಿ ) ಬಂಟ್ವಾಳದ ಅಧ್ಯಕ್ಷರಾದ ಬಿ. ಗಣೇಶಾನಂದ ಸೋಮಯಾಜಿ, ಪ್ರದಾನ ಕಾರ್ಯದರ್ಶಿ ವೀರೇಂದ್ರ ಎಂ ಸಿದ್ದಕಟ್ಟೆ ಉಪಸ್ಥಿತರಿದ್ದರು. ಗೌರವ ನುಡಿ ನಮನ ಮಾತುಗಳನ್ನು ವಕೀಲರಾದ ಶ್ರೀ ಪ್ರಸಾದ್ ಕುಮಾರ್ ರೈ ಅವರು ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಹಿರಿಯ ಕಿರಿಯ ವಕೀಲರು ಭಾಗವಹಿಸಿ ಪುಷ್ಪ ನಮನ ನೆರವೇರಿಸಿದರು. ರವೀಂದ್ರ ಕುಕ್ಕಾಜೆ ಕಾರ್ಯಕ್ರಮ ನಿರೂಪಿಸಿದರು. ಕೋಶಾಧಿಕಾರಿ ಚಂದ್ರಶೇಖರ ಬೈರಿಕಟ್ಟೆ ವಂದಿಸಿದರು.