Tuesday, October 17, 2023

ಯಕ್ಷಾವಾಸ್ಯಂ ಕಾರಿಂಜ ಡಿ.25 (ನಾಳೆ): ಪ್ರಥಮ ವಾರ್ಷಿಕೋತ್ಸವ , ಯಕ್ಷಗಾನ,ಸಂಸ್ಮರಣೆ, ಪ್ರಶಸ್ತಿ ಪ್ರದಾನ

Must read

ಬಂಟ್ವಾಳ:  ಬಂಟ್ವಾಳ ತಾಲೂಕು  ಯಕ್ಷಾವಾಸ್ಯಂ ಕಾರಿಂಜ ಇದರ  ಪ್ರಥಮ ವಾರ್ಷಿಕೋತ್ಸವ ಡಿ.25 ರಂದು ವಗ್ಗ ಕಾಡಬೆಟ್ಟು  ಶ್ರೀ ಶಾರದಾಂಬಾ ಭಜನಾ ಮಂದಿರದಲ್ಲಿ ನಡೆಯಲಿದೆ.
ಬೆಳಗ್ಗೆ 9ಕ್ಕೆ ಮಾಜಿ ಸಚಿವ ರಮಾನಾಥ ರೈ ಕಾರ್ಯಕ್ರಮ ಉದ್ಘಾಟಿಸುವರು. ಕಾರಿಂಜ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷ ಪಿ.ಜಿನರಾಜ ಆರಿಗ ,ಬಿ.ಪದ್ಮಶೇಖರ ಜೈನ್, ಗಣೇಶ್ ನಾವಡ  ಪಡುಬಿದ್ರಿ, ಯಕ್ಷಗಾನ ಕಲಾವಿದ ಮಂಜುನಾಥ ಭಟ್ ಬೆಳ್ಳಾರೆ ಭಾಗವಹಿಸುವರು.
ಬೆಳಗ್ಗೆ ಯಿಂದ ವಿವಿಧ ಕಾರ್ಯಕ್ರಮಗಳು ನಡೆಯಲಿದ್ದು, ಯಕ್ಷಗಾನ ಪೂರ್ವರಂಗ,  ಯಕ್ಷಗಾನ ಅಬ್ಬರತಾಳ,  ದಾಶರಥಿ ದರ್ಶನ ಯಕ್ಷಗಾನ ಪ್ರದರ್ಶನವಿದೆ. ಮಧ್ಯಾಹ್ನ  ಬಳಿಕ  ಹಿರಿಯ ಯಕ್ಷಗಾನ ಕಲಾವಿದ ಮಂಜುನಾಥ ಭಟ್ ಬೆಳ್ಳಾರೆ ಅವರಿಗೆ ಗೌರವಾರ್ಪಣೆ, ಯಕ್ಷಾವಾಸ್ಯಮ್ ಕಾರಿಂಜದ ಹಿಮ್ಮೇಳ-ಮುಮ್ಮೇಳ ಗುರುಗಳಿಗೆ ಗುರುವಂದನೆ,   ಭಕ್ತಿ ಪಾರಮ್ಯ ಯಕ್ಷಗಾನ ತಾಳಮದ್ದಳೆ, ಸಂಜೆ    ಸಭಾ ಕಾರ್ಯಕ್ರಮ ಧಾರ್ಮಿಕ ಮುಖಂಡ ರವೀಶ ತಂತ್ರಿ ಕುಂಟಾರು ಅಧ್ಯಕ್ಷತೆಯಲ್ಲಿ ನಡೆಯಲಿದೆ. ಅಷ್ಟಾವಧಾನಿ ಕಬ್ಬಿನಾಲೆ ಬಾಲಕೃಷ್ಣ ಭಾರಧ್ವಾಜ, ಬಂಟ್ವಾಳ ಶಾಸಕ ರಾಜೇಶ್ ನಾಕ್ ಉಳಿಪಾಡಿಗುತ್ತು, ಮತ್ತಿತರ ಗಣ್ಯರು ಅತಿಥಿಗಳಾಗಿ ಭಾಗವಹಿಸಲಿರುವರು.
ಈ ಸಂದರ್ಭದಲ್ಲಿ ತೆಂಕುತಿಟ್ಟು ಯಕ್ಷಗಾನ ಸಂಯುಕ್ತ ಪ್ರತಿಭೆ ದಿ.ಬೊಟ್ಟಿಕೆರೆ ಪುರುಷೋತ್ತಮ ಪೂಂಜ ಸಂಸ್ಮರಣೆ ಹಾಗೂ ಯಕ್ಷಗಾನ ಕಲಾವಿದ ಸೂರ್ಯನಾರಾಯಣ ಭಟ್‌ಬೆಳ್ಳಾರೆ ಅವರಿಗೆ ಯಕ್ಷಾವಾಸ್ಯಮ್ ಪ್ರಶಸ್ತಿ 2021 ಪ್ರದಾನ ಮಾಡಲಾಗುವುದು.
ಎಸೆಸ್ಸೆಲ್ಸಿಯಲ್ಲಿ ಉತ್ತಮ ಅಂಕ ಗಳಿಸಿದ ಯಕ್ಷವಾಸ್ಯಮ್ ಕಾರಿಂಜದ ವಿದ್ಯಾರ್ಥಿಗಳಿಗೆ ಪುರಸ್ಕಾರ,    ಗಿರಿಜಾ ಕಲ್ಯಾಣ – ಕುಮಾರ ವಿಜಯ ಯಕ್ಷಗಾನ ಪ್ರದರ್ಶನವಿದೆ ಎಂದು ಯಕ್ಷಾವಾಸ್ಯಮ್ ಕಾರಿಂಜ ಇದರ ಸಂಚಾಲಕಿ ಸಾಯಿಸುಮಾ ಎಂ. ನಾವಡ  ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

More articles

Latest article