ಕಲ್ಲಡ್ಕ: ನಾವು ಯಾವತ್ತೂ ಯಂತ್ರದ ಗುಲಾಮರಾಗಬಾರದು, ಬದಲಾಗಿ ನಾವು ಮೆದುಳಿನಲ್ಲಿರುವ ಶಕ್ತಿಯನ್ನು ಬಳಸಿಕೊಂಡು ಯಂತ್ರಕ್ಕೆ ಪೂರಕವಾಗಿ ಕೆಲಸಮಾಡಿಕೊಂಡು ನಮ್ಮನ್ನು ನಾವು ಪುನಶ್ಚೇತನಗೊಳಿಸಿಕೊಳ್ಳಬೇಕು. ಆಗ ಮಾತ್ರಜೀವನದಲ್ಲಿ ಯಶಸ್ಸು ಸಾಧ್ಯ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಇದರ ಅಧ್ಯಕ್ಷ ಡಾ| ಪ್ರಭಾಕರ ಭಟ್ ಕಲ್ಲಡ್ಕ ಹೇಳಿದರು. ಅವರು ಕಲ್ಲಡ್ಕದ ಶ್ರೀರಾಮ ಪದವಿ ಕಾಲೇಜಿನ ಬಿಸಿಎ ಗಣಕ ವಿಜ್ಞಾನ ವಿಭಾಗದ ಪ್ರಯೋಗಾಲಯ ಮತ್ತು ಮಾಹಿತಿ ತಂತ್ರಜ್ಞಾನ ಘಟಕದ ಉದ್ಘಾಟನೆಯ ಸಮಾರಂಭದಲ್ಲಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಇನೋರ್ವ ಅತಿಥಿ ಪುತ್ತೂರು ಸೈಂಟ್ ಫಿಲೋಮಿನಾ ಕಾಲೇಜಿನ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಗಣಕ ವಿಜ್ಞಾನ ವಿಭಾಗ ಮುಖ್ಯಸ್ಥ ಗೋವಿಂದ ಪ್ರಕಾಶ್ ಮಾತನಾಡಿ ಪ್ರಾಮಾಣಿಕತೆಗೆ ಇನ್ನೊಂದು ಹೆಸರೇ ಸಿ ವಿ ರಾಮನ್. ಶ್ರೀರಾಮ ವಿದ್ಯಾಸಂಸ್ಥೆಯು ಭಾರತೀಯ ಸಂಸ್ಕೃತಿ ಪ್ರತೀಕವಾಗಿದೆ. ಜೀವನದಲ್ಲಿ ನಾವು ಪ್ರಾಮಾಣಿಕತೆಯನ್ನು ಬೆಳೆಸಿಕೊಳ್ಳಬೇಕು ಪ್ರತಿನಿತ್ಯ ಹೊಸಹೊಸ ವಿಚಾರಗಳನ್ನು ನಾವು ತಿಳಿದುಕೊಳ್ಳುವ ಮೂಲಕ ನಮ್ಮನ್ನು ನಾವು ನವೀಕರಿಸಿಕೊಳ್ಳುತ್ತಿರಬೇಕು ಎಂದು ಹೇಳಿದರು.
ತಂತ್ರಜ್ಞಾನದ ತಿಳುವಳಿಕೆಯ ಜೊತೆಗೆ ನಾವು ನಮ್ಮಲ್ಲಿಅಡಗಿರುವ ನವರಸ ಕಲೆಗಳನ್ನು ಕೂಡ ಅಭಿವ್ಯಕ್ತಿಗೊಳಿಸಬೇಕು. ಬದುಕುಎಂಬುದು ಸಮುದ್ರದ ನೀರಿನ ಅಲೆಯಂತೆ ಹಾಗೆಯೇಕಂಪ್ಯೂಟರ್‌ನ ಬಳಕೆಯು ತುಂಬಾಕಷ್ಟಕರವಾದುದು ಆದರೆ ಈಗಿನ ಜೀವನ ಶೈಲಿಗೆ ಅನಿವಾರ್ಯ ಎಂದು ಪ್ರಯೋಗಾಲಯವನ್ನು ಉದ್ಘಾಟಿಸಿದ ಪ್ರಗತಿಪರ ಕೃಷಿಕ ಸಿ ವಿ ಗೋಪಾಲಕೃಷ್ಣ ಭಟ್ ಹೇಳಿದರು.
ವೇದಿಕೆಯಲ್ಲಿ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಎಮ್ ಸಿ ಎ ವಿಭಾಗದ ಮುಖ್ಯಸ್ಥೆ ಡಾ| ವಂದನಾ ಸಂಸ್ಥೆಯ ಸಂಚಾಲಕ ವಸಂತ ಮಾಧವ, ಕಾಲೇಜಿನ ಪ್ರಾಂಶುಪಾಲ ಕೃಷ್ಣಪ್ರಸಾದ್‌ಕಾಯರ್‌ಕಟ್ಟೆ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಪ್ರತೀಕ್ಷಾ ಸ್ವಾಗತಿಸಿ, ದೀಕ್ಷಾ ವಂದಿಸಿ, ಸಿಂಚನಾ ಕಾರ್ಯಕ್ರಮ ನಿರೂಪಿಸಿದರು.