ಬಂಟ್ವಾಳ: ರೋಟರಿ ಸಮುದಾಯ ದಳ ಕಡೇಶಿವಾಲಯ, ರೋಟರಿ ಕ್ಲಬ್ ಬಂಟ್ವಾಳ, ಕೆ.ಎಂ.ಸಿ.ಆಸ್ಪತ್ರೆ ಮಂಗಳೂರು ಇವರ ಜಂಟಿ ಆಶ್ರಯದಲ್ಲಿ ರೋಟರಿ ಸಮುದಾಯ ದಳದ ಅಧ್ಯಕ್ಷ ರಾದ ದಿ. ಮೋಹನ್ ಪೆರ್ಲಾಪು ಅವರ ಸ್ಮರಣಾರ್ಥವಾಗಿ ಕಡೇಶಿವಾಲಯ ರೋಟರಿ ಗ್ರಾಮೀಣ ದಳದ ಭವನದಲ್ಲಿ ರಕ್ತದಾನ ಶಿಬಿರ ನಡೆಯಿತು.
ಕಾರ್ಯ ಕ್ರಮದಲ್ಲಿ ಕಡೇಶಿವಾಲಯ ಗ್ರಾ.ಪಂ.ಪಿ.ಡಿ.ಒ ಸುನಿಲ್, ರೋಟರಿ ಸಮುದಾಯ ದಳದ ಸಲಹಾ ಸಮಿತಿ ಚೇರ್ ಮ್ಯಾನ್ ಕೆ.ಕೆ.ಶೆಟ್ಟಿ ಕುರುಂಬ್ಲಾಜೆ, ಕೆ.ಎಂ.ಸಿ.ಆಸ್ಪತ್ರೆಯ ವೈದ್ಯಾಧಿಕಾರಿ ಡಾ! ಸಿಂದೂಜಾ, ಡಾ! ದುರ್ಗಾವತಿ , ಡಾ! ಮನೋಹರ ರೈ, , ಬೇಬಿ ಕುಂದರ್, ವಾಸು ಪ್ರತಾಪನಗರ, ಡಾ! ಪಿ.ಜೆ ಗೋಪಾಲ ಕೃಷ್ಣ ಭಟ್ , ಸಂಜೀವ ಪೂಜಾರಿ, ಯೋಗೀಶ್ ನಾಯ್ಕ್ ಉಪಸ್ಥಿತರಿದ್ದರು.