ಬಂಟ್ವಾಳ: ಲೋರೆಟ್ಟೊ ಮಾತಾ ಚರ್ಚ್ ನಲ್ಲಿ ಕ್ರಿಸ್ಮಸ್ ಸಂಭ್ರಮವನ್ನು ವಿಜ್ರಂಭನೆಯಿಂದ ಆಚರಿಸಲಾಯಿತು. ಸಾಯಂಕಾಲದ ಬಲಿಪುಜೆಯಲ್ಲಿ ನೂರಾರು ಭಕ್ತಾದಿಗಳು ಭಕ್ತಿಯಿಂದ ಯೇಸು ಕ್ರಿಸ್ತರ ಜನನವನ್ನು ಬಲಿಪುಜೆಯೊಂದಿಗೆ ಆಚರಿಸಿದರು. ಪ್ರಧಾನ ಧರ್ಮಗುರುಗಳಾಗಿ ಚರ್ಚ್ ಧರ್ಮಗುರುಗಳಾದ ವಂ.ಫ್ರಾನ್ಸಿಸ್ ಕ್ರಾಸ್ತಾ ,ವಂ. ಸಿಪ್ರಿಯನ್ ,ವಂ. ಜೇಸನ್ ಮೋನಿಸ್ ಅಪಾರ ಸಂಖ್ಯೆಯಲ್ಲಿ ನೆರೆದಿದ್ದ ಭಕ್ತಾದಿಗಳೊಂದಿಗೆ ಬಲಿಪೂಜೆಯನ್ನು ಅರ್ಪಿಸಿದರು.
ಕ್ರಿಸ್ಮಸ್ ಪ್ರಯುಕ್ತ ತಮ್ಮ ಸಂದೇಶದಲ್ಲಿ ಧರ್ಮಗುರುಗಳು ಪ್ರಪಂಚದಾದ್ಯಂತ ಅತಿ ಸಂಭ್ರಮದಿಂದ ಸಂತೋಷದಿಂದ ಎಲ್ಲಾ ಧರ್ಮದವರುಆಚರಿಸುವ ಹಬ್ಬವೆಂದರೆ ದೀಪಾವಳಿ ಮತ್ತು ಕ್ರಿಸ್ಮಸ್ .ಈ ಎರಡು ಹಬ್ಬಗಳು ಭೂಲೋಕದಲ್ಲಿದೇವರು ಆನಾವರಿಸಿದ ದಿವ್ಯ ಬೆಳಕನ್ನು ಬಿಂಬಿಸುತ್ತವೆ.ಅದರಲ್ಲೂ ಕ್ರಿಸ್ಮಸ್ ಹಬ್ಬ ದೇವರ ಅಗಾಧ ಪ್ರೀತಿಯನ್ನು, ದೈವಿಕ ಮನುಷ್ಯತ್ವವನ್ನು ಪ್ರಭು ಯೇಸುಕ್ರಿಸ್ತರ ಜನ್ಮದ ಮೂಲಕ ಇಡೀ ಜಗತ್ತಿಗೆ ಸಾರಿದ ಸಂದೇಶವನ್ನು ತೋರಿಸುತ್ತದೆ. ಕೋವಿಡ್ ಸೋಂಕಿನ ಕಷ್ಟದ ದಿನಗಳಲ್ಲಿ ಜಗತ್ತಿನಾದ್ಯಂತ ಜನರು ಒಬ್ಬರಿಗೊಬ್ಬರು ತೋರಿಸಿದ ಪ್ರೀತಿ ,ವಾತ್ಸಲ್ಯ , ಮನುಷ್ಯತ್ವ ಕ್ರಿಸ್ಮಸ್ ಹಬ್ಬಕ್ಕೆ ದೇವರಿಗೆ ನಾವು ಕೊಟ್ಟ ಉಡುಗೊರೆ.
ಯಾರು ಮನುಷ್ಯತ್ವದ, ಮಮತೆಯ ಕಾರ್ಯಗಳು ಮಾಡುತ್ತಾರೋ ಅವರ ಹೃದಯಗಳಲ್ಲಿ ಯೇಸುಕ್ರಿಸ್ತರು ಪುನಃ ಹುಟ್ಟಿ ಬರುತ್ತಾರೆ.ಅದಕ್ಕೋಸ್ಕರ ಕ್ರಿಸ್ಮಸ್ ಹಂಚಿಕೊಳ್ಳುವ ಹಬ್ಬ. ಪ್ರಸ್ತುತ ನಮ್ಮ ಕಠಿಣ ಜೀವಿತದಲ್ಲಿ ಪರಸ್ಪರ ಪ್ರೀತಿಯನ್ನು ಹಂಚಿಕೊಳ್ತಯನ್ನು ಹಂಚಿಕೊಳ್ಳುವ ದೇವರು ತಮ್ಮ ಏಕೈಕ ಪುತ್ರರಾದ ಯೇಸು ಕ್ರಿಸ್ತರನ್ನು ನಮ್ಮೆಲ್ಲರಲ್ಲಿ ಹಂಚಿಕೊಂಡರು.ಪ್ರೀತಿಯ ಹಾಗೂ ಮನುಷ್ಯತ್ವದ ಸಂಕೇತವಾಗಿ ಗೋದಲಿಯಲ್ಲಿ ಜನಿಸಿದರು.ಮಾನವತೆಯ ಸಂದೇಶ ಸಾರುವ ಪ್ರತಿಯೊಬ್ಬರಿಗೂ ಯಾವಾಗಲೂ ಸ್ವರ್ಗದ ಬಾಗಿಲು ತೆರೆದಿರುತ್ತದೆ ಎಂದು ತೋರಿಸಿದರು.ಆದರೆ ಅಸೂಯೆ ಅನ್ಯಾಯ ದೌರ್ಜನ್ಯ ವೈರತ್ವ ಪ್ರಸರಿಸುವ ಪ್ರತಿಯೊಬ್ಬರಿಗೂ ಸ್ವರ್ಗದ ಬಾಗಿಲು ತೆರೆಯಲು ಹೇಗೆ ಸಾಧ್ಯ? ಈ ಹಬ್ಬ ಪ್ರಪಂಚದಾದ್ಯಂತ ಸುಂದರ ಬೆಸುಗೆಯನ್ನು ಬೆಸೆದುಪ್ರೀತಿ ವಾತ್ಸಲ್ಯ ಮಾನವೀಯತೆ ನಮ್ಮ ನಾಡಿನಲ್ಲಿ ಬೆಳೆಸಲಿ ಎಂದು ಬೇಡುತ್ತಾ ಕ್ರಿಸ್ಮಸ್ ಹಬ್ಬದ ಶುಭಾಶಯಗಳು ತಮ್ಮ ಸಂದೇಶದಲ್ಲಿ ನೀಡಿದರು
ಚರ್ಚ್ ಅವರಣದಲ್ಲಿ ಎಲ್ಇಡಿ ಪರದೆಯನ್ನು ಅಳವಡಿಸಲಾಗಿತ್ತು. ಸಂಬ್ರಮಕ್ಕೆ ಸಹಕರಿಸಿದ ಧಾನಿಗಳಿಗೆ ಗೌರವಪೂರ್ವಕ ವಾಗಿ ಅಲಂಕರಿಸಿದ ಮೇಣದ ಬತ್ತಿಗಳನ್ನು ವಿತರಿಸಲಾಯಿತು.ಇದೇ ಸಂದರ್ಭದಲ್ಲಿ ಏಸುಕ್ರಿಸ್ತರರ ಜನುಮ ದಿನಾಚರಣೆಯ ಪ್ರಮುಖ್ಯತೆ ಯ ಬಗ್ಗೆ ಲೊರೆಟ್ಟೊ ಅಂಗ್ಲ ಮಾಧ್ಯಮ ಶಾಲಾ ಮುಖ್ಯೋಪಾಧ್ಯಾಯರಾದ ವಂ.ಜೇಸನ್ ಮೊನಿಸ್ ಪ್ರವಚನ ನೀಡಿದರು.
ಚರ್ಚ್ ಮುಖ್ಯ ರಸ್ತೆಯನ್ನು ಲೋರೆಟ್ಟೊ ಫ್ರೆಂಡ್ಸ್ (ರಿ) ಇವರ ಪ್ರಯೋಜಕತ್ವ ದಿಂದ ರಂಗು ರಂಗಿನ ವಿದ್ಯುದಿಪಾಲಂಕರದಿಂದ ಕಂಗೊಳಿಸಲಾಗಿತ್ತು. ಬಲಿ ಪೂಜೆಯ ಬಳಿಕ ಐಸಿವೈಮ್ ಸದಸ್ಯರು ಮನರಂಜನ ಕಾರ್ಯಕ್ರಮವನ್ನು ನೀಡಿದರು. ಏಸುಕ್ರಿಸ್ತರ ಜನ್ಮ ದಿನವನ್ನು ಸಾರುವ ಗೋದಲಿಯನ್ನು ಐಸಿವೈಮ್ ಸದಸ್ಯರು ನಿರ್ಮಿಸಿದರು.ಸಂಭ್ರಮದಲ್ಲಿ ಪಾಲ್ಗೊಂಡ ಎಲ್ಲಾ ಭಕ್ತಾದಿಗಳಿಗೆ ಕಾಫಿ ಹಾಗೂ ಕೇಕ್ ವಿತರಿಸಲಾಯಿತು. ಚರ್ಚ್ ಪಾಲನಾ ಮಂಡಳಿಯು ಸಂ. ಧರ್ಮಗುರುಗಳು ಸಹಕರಿಸಿದ ಸರ್ವರರನ್ನು ವಂದಿಸಿದರು.