Friday, April 19, 2024

ಪ್ರಥಮ ಪ್ರಾಶಸ್ತ್ಯ ಮತದಲ್ಲಿ ಬಿಜೆಪಿ ಕಾಂಗ್ರೇಸ್ ಅಭ್ಯರ್ಥಿಗಳು ಗೆಲುವು

ಮಂಗಳೂರು: ದಕ್ಷಿಣ ಕನ್ನಡ ದ್ವಿಸದಸ್ಯ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯಲ್ಲಿ ಕೋಟ ಶ್ರೀನಿವಾಸ ಪೂಜಾರಿ ಮತ್ತು ಮಂಜುನಾಥ್ ಭಂಡಾರಿ ಜಯಗಳಿಸಿದ್ದಾರೆ.

ಒಟ್ಟು 389 ಮತಗಟ್ಟೆಗಳ 6,011 ಮತಗಳ ಪೈಕಿ, ಬಿಜೆಪಿ ಕೋಟ ಶ್ರೀನಿವಾಸ್ ಪೂಜಾರಿ 3672 ಮತಗಳನ್ನು ಪಡೆದಿದ್ದು, ಕಾಂಗ್ರಸ್ ನ ಮಂಜುನಾಥ್ ಭಂಡಾರಿ 2079 ಮತಗಳನ್ನು ಪಡೆದು ಪ್ರಥಮ ಪ್ರಾಶಸ್ತ್ಯದಲ್ಲಿ ಜಯಗಳಿಸಿದ್ದಾರೆ.

ಇನ್ನು ಎಸ್ ಡಿಪಿಯ ಅಭ್ಯರ್ಥಿ ಶಾಫಿ.ಕೆ 204 ಮತಗಳನ್ನು ಪಡೆದಿದ್ದಾರೆ.

6,011 ಮತಗಳ ಪೈಕಿ 5,955 ಸಿಂಧು ಮತಗಳು ಚಲಾವಣೆ ಆಗಿದೆ. 56 ಅಸಿಂಧು ಮತಗಳಾಗಿವೆ.

ಕೋಟ ಶ್ರೀನಿವಾಸ ಪೂಜಾರಿ ಈ ಗೆಲುವಿನಿಂದ ಸತತ ನಾಲ್ಕನೇ ಬಾರಿ ಪರಿಷತ್ ಪ್ರವೇಶ ಮಾಡಿದ್ದಾರೆ.

 

ಚುನಾವಣೆಯಲ್ಲಿ ಗೆದ್ದವರ ಪಟ್ಟಿ ಇಲ್ಲಿದೆ:

ಬಿಜೆಪಿ ಗೆದ್ದ ಕ್ಷೇತ್ರಗಳು

* ಕೊಡಗು-ಸುಜಾ ಕುಶಾಲಪ್ಪ

* ಬೆಂಗಳೂರು- ಗೋಪಿನಾಥ್‌ ರೆಡ್ಡಿ

* ಚಿತ್ರದುರ್ಗ- ಕೆ.ಎಸ್‌. ನವೀನ್‌

* ಉತ್ತರ ಕನ್ನಡ- ಗಣಪತಿ ಉಳ್ವೇಕರ್

* ಬಳ್ಳಾರಿ- ವೈ.ಎಂ.ಸತೀಶ

* ಚಿಕ್ಕಮಗಳೂರು – ಎಂ.ಕೆ.ಪ್ರಾಣೇಶ್

* ಶಿವಮೊಗ್ಗ -ಡಿ.ಎಸ್‌.ಅರುಣ್‌

* ಕಲಬುರ್ಗಿ -ಬಿ.ಜಿ.ಪಾಟೀಲ್‌

* ದಕ್ಷಿಣ ಕನ್ನಡ (ದ್ವಿಸದಸ್ಯ) – ಕೋಟ ಶ್ರೀನಿವಾಸ್‌ ಪೂಜಾರಿ

* ಧಾರವಾಡ (ದ್ವಿಸದಸ್ಯ) -ಪ್ರದೀಪ್‌ ಶೆಟ್ಟರ್‌

* ವಿಜಯಪುರ (ದ್ವಿಸದಸ್ಯ) -ಪಿ.ಎಚ್‌.ಪೂಜಾರ

 

ಕಾಂಗ್ರೆಸ್‌ ಗೆದ್ದ ಕ್ಷೇತ್ರಗಳು

* ಬೀದರ್‌ -ಭೀಮಾರಾಮ್‌ ಪಾಟೀಲ್‌

* ಧಾರವಾಡ -ಸಲ್ಲಿಂ ಅಹಮ್ಮದ್‌

* ಮಂಡ್ಯ -ಗೂಳೀಗೌಡ

* ರಾಯಚೂರು – ಶರಣಗೌಡ ಬಯ್ಯಾಪುರ

* ದಕ್ಷಿಣ ಕನ್ನಡ (ದ್ವಿಸದಸ್ಯ)- ಮಂಜುನಾಥ್‌ ಭಂಡಾರಿ

* ಬೆಳಗಾವಿ (ದ್ವಿಸದಸ್ಯ) -ಚನ್ನರಾಜ ಹಟ್ಟಿಹೊಳಿ

* ವಿಜಯಪುರ (ದ್ವಿಸದಸ್ಯ) -ಸುನೀಲ್‌ಗೌಡ ಪಾಟೀಲ

ಜೆಡಿಎಸ್‌ ಗೆದ್ದ ಕ್ಷೇತ್ರಗಳು

* ಹಾಸನ- ಸೂರಜ್ ರೇವಣ್ಣ

 

ಪಕ್ಷೇತರರು ಗೆದ್ದ ಕ್ಷೇತ್ರಗಳು

* ಬೆಳಗಾವಿ (ದ್ವಿಸದಸ್ಯ) -ಲಖನ್‌ ಜಾರಕಿಹೋಳಿ

ಪಟೇಲ್‌ ಶಿವರಾಂ ಸೋಲಿನ ಏಟು ನೆನಪಿಟ್ಟುಕೊಂಡು ಹಾಸನ ಗೆದ್ದ ಜೆಡಿಎಸ್‌

More from the blog

ಬಿಸಿರೋಡಿನ ವಾಣಿಜ್ಯ ಕಟ್ಟಡದ ಜಗುಲಿಯಲ್ಲಿ ಚೆಲ್ಲಿರುವ ರಕ್ತ : ಹಲವು ಅನುಮಾನ

ಬಂಟ್ವಾಳ: ಬಿಸಿರೋಡಿನ ವಾಣಿಜ್ಯ ಮಳಿಗೆಯ ಮುಂಭಾಗವೊಂದರಲ್ಲಿ ರಕ್ತ ಚೆಲ್ಲಿರುವುದು ಕಂಡು ಬಂದಿದ್ದು, ಅಂಗಡಿ ಮಾಲಕರಲ್ಲಿ ಒಂದಷ್ಟು ಗೊಂದಲ ಉಂಟಾದ ಘಟನೆ ನಡೆದಿದೆ. ಎ.18 ರಂದು ಬೆಳಿಗ್ಗೆ ತಾ.ಪಂ. ನ ವಾಣಿಜ್ಯ ಕಟ್ಟಡವೊಂದರ ಜಗುಲಿಯಲ್ಲಿ ರಕ್ತ...

ಲೋಕಸಭಾ ಚುನಾವಣೆ : ಎ.20 ರಂದು‌ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಬೃಹತ್ ಚುನಾವಣಾ ಪ್ರಚಾರ

ಬಂಟ್ವಾಳ: ಲೋಕಸಭಾ ಚುನಾವಣೆಯ ಪ್ರಚಾರ ಬಿರುಸಿನಿಂದ ನಡೆಯುತ್ತಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಎ.20 ರಂದು‌ ಶನಿವಾರ ಮಧ್ಯಾಹ್ನ 2.30 ಕ್ಕೆ ಗಂಟೆಗೆ ಬಿಸಿರೋಡಿನ ಬ್ರಹ್ಮ ಶ್ರೀನಾರಾಯಣ ಗುರು ಮಂದಿರದಲ್ಲಿ ಬೃಹತ್ ಚುನಾವಣಾ...

ಜೀಪ್ ಬೈಕ್ ಗೆ ಡಿಕ್ಕಿ… ಬೈಕ್ ಸವಾರ ಸಾವು : ಇಬ್ಬರು ಮಕ್ಕಳು ಗಂಭೀರ

ಪುತ್ತೂರು: ಜೀಪೊಂದು ಬೈಕ್ ಗೆ ಡಿಕ್ಕಿ ಯಾಗಿ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಕಣಿಯೂರು- ಮಂಜೇಶ್ವರ ಅಂತರಾಜ್ಯ ರಸ್ತೆಯ ನರಿಮೊಗರು ಗ್ರಾಮದ ಪಾಪೆತ್ತಡ್ಕ ಎಂಬಲ್ಲಿ ನಡೆದಿದೆ. ಪುತ್ತೂರು ತಾಲೂಕಿನ ಬಡಕ್ಕೋಡಿ ಕಡ್ಯ ನಿವಾಸಿ...

ರಾಜ್ಯದಲ್ಲಿ ಮತ್ತೆ ಏರಿದ ತಾಪಮಾನ

ಬೆಂಗಳೂರು: ಕಳೆದೊಂದು ವಾರದಿಂದ ತಗ್ಗಿದ್ದ ತಾಪಮಾನ ಮತ್ತೆ ಏರಿಕೆಯಾಗಿದ್ದು, ಮುಂದಿನ 5 ದಿನಗಳ ಕಾಲ ಕರ್ನಾಟಕದ ಬಹುತೇಕ ಕಡೆಗಳಲ್ಲಿ ಗರಿಷ್ಠ ಉಷ್ಣಾಂಶವು 2ರಿಂದ 3 ಡಿಗ್ರಿ ಏರಿಕೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ...