ಬಂಟ್ವಾಳ : ಬಂಟ್ವಾಳ ನಗರ ಠಾಣಾ ವತಿಯಿಂದ ಸರಕಾರಿ ಪದವಿ ಪೂರ್ವ ಕಾಲೇಜು ಗೂಡಿನಬಳಿ ಬಂಟ್ವಾಳದಲ್ಲಿ ವಿದ್ಯಾರ್ಥಿಗಳಿಗೆ ಕಾನೂನು ಅರಿವು ಕಾರ್ಯಗಾರ ನಡೆಯಿತು. ಬಂಟ್ವಾಳ ನಗರ ಠಾಣಾ ಉಪನಿರೀಕ್ಷಕ ರಾದ ಅವಿನಾಶ್ ಎಚ್ ಗೌಡ ರವರು ಸೈಬರ್ ಅಪರಾಧ, ಮಹಿಳಾ ಸುರಕ್ಷ ತೆ, ಮಾದಕದ್ರವ್ಯ, ಸಾಮಾಜಿಕ ಜಾಲತಾಣಗಳ ಒಳಿತು ಕೆಡುಕು ಗಳ ಬಗ್ಗೆ ಮಾಹಿತಿಯನ್ನು ನೀಡಿದರು.

ಬಂಟ್ವಾಳಸಂಚಾರ ಠಾಣೆಯ ಉಪನಿರೀಕ್ಷಕ ರಾದ ರಾಜೇಶ್ ರವರು ರಸ್ತೆಸುರಕ್ಷತಾ ನಿಯಮದ ಬಗ್ಗೆ ಮಾಹಿತಿಯನ್ನು ನೀಡಿದರು. ಈ ಕಾರ್ಯಗಾರ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜು ಪ್ರಾಂಶುಪಾಲ ರಾದ ಯೂಸುಫ್ ರವರು ವಹಿಸಿದರು. ಶ್ರೀ ಬಾಲಕೃಷ್ಣ ಹಾಗೂ ಇತರೆ ಉಪನ್ಯಾಸಕ ವೃಂದದವರು ಹಾಗೂ ಬಂಟ್ವಾಳ ನಗರ ಠಾಣಾಸಿಬ್ಬಂದಿಗಳಾದ ವನಿತಾ, ನಾಗರಾಜ್, ರಾಘವೇಂದ್ರ, ಮಧು ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಉಪನ್ಯಾಸಕರಾದ ಅಬ್ದುಲ್ ರಜಾಕ್ ನೆರವೇರಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here