Thursday, October 26, 2023

*ಪುಂಜಾಲಕಟ್ಟೆ: ಕೆಸರ್‌ಡ್ ಒಂಜಿ ದಿನ ಆಟೋಟ ಸ್ಪರ್ಧೆ*

Must read

ಬಂಟ್ವಾಳ: ಪುಂಜಾಲಕಟ್ಟೆ ಶ್ರೀ ಮುರುಘೇಂದ್ರ ಮಿತ್ರ ಮಂಡಳಿ, ಶ್ರೀ ಮುರುಘೇಂದ್ರ ವನಿತಾ ಸಮಾಜ ಇವರ ನೇತೃತ್ವದಲ್ಲಿ ಶ್ರೀ ಕ್ಷೇ.ಧ.ಗ್ರಾ.ಯೋಜನೆ ಪಿಲಾತಬೆಟ್ಟು ಮತ್ತು ಕುಕ್ಕಳ ಒಕ್ಕೂಟ ಹಾಗೂ ಶ್ರೀ ಕ್ಷೇತ್ರ ಒಡಿಯೂರು ಗ್ರಾಮ ವಿಕಾಸ ಯೋಜನೆ ಪಿಲಾತಬೆಟ್ಟು ಇವರ ಸಹಭಾಗಿತ್ವದಲ್ಲಿ ಪುಂಜಾಲಕಟ್ಟೆ ಹೆಗ್ಡೆಬೆಟ್ಟು ಗದ್ದೆಯಲ್ಲಿ ಕೆಸರ್‌ಡ್ ಒಂಜಿ ದಿನ ಕಾರ್ಯಕ್ರಮ ರವಿವಾರ ನಡೆಯಿತು.

ಪ್ರಗತಿಪರ ಕೃಷಿಕ ಕಟ್ಟೆಮನೆ ಉದಯಕುಮಾರ್ ಜೈನ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಜಿ.ಪಂ. ನಿಕಟಪೂರ್ವಸದಸ್ಯ ಬಿ.ಪದ್ಮಶೇಖರ ಜೈನ್ ಅಧ್ಯಕ್ಷತೆ ವಹಿಸಿದ್ದರು. ಡಾ.ಗೌತಮ್ ಎಂ.ಕೆ.ಅಜಿಲ ಆಟೋಟ ಸ್ಪರ್ಧೆಗಳಿಗೆ ಚಾಲನೆ ನೀಡಿದರು.

ಪಿಲಾತಬೆಟ್ಟು ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷ ಕೆ.ಲಕ್ಷ್ಮೀ ನಾರಾಯಣ ಉಡುಪ ಮಾತನಾಡಿ, ಆಧುನಿಕತೆಯ ಭರಾಟೆಯಲ್ಲಿ ಗ್ರಾಮೀಣ ಆಟೋಟಗಳು ಮರೆಯಾಗುತ್ತಿವೆ. ಮನರಂಜನೆಯ ಜತೆ ಕೃಷಿ ಕಾರ್ಯದ ಉತ್ತೇಜನ ನೀಡುವ ಕೆಸರು ಗದ್ದೆ ಕ್ರೀಡಾಕೂಟ ಆಯೋಜನೆ ಶ್ಲಾಘನೀಯ ಎಂದು ಹೇಳಿದರು.

ಶ್ರೀ ಕ್ಷೇ.ಧ.ಗ್ರಾ.ಯೋಜನೆ ದ.ಕ.ಜಿಲ್ಲಾ ಯೋಜನಾಽಕಾರಿ ಸತೀಶ್ ಶೆಟ್ಟಿ ಅವರು ಮಾತನಾಡಿ, ಮಕ್ಕಳ ದಿನಾಚರಣೆಯಂದು ಕೃಷಿ ಕಾರ್ಯದ ಮಹತ್ವವನ್ನು ಮುಂದಿನ ಪೀಳಿಗೆಗೆ ತಿಳಿಸುವ ಇಂತಹ ಕಾರ್ಯಕ್ರಮ ಅರ್ಥ ಪೂರ್ಣ ಎಂದು ಹೇಳಿದರು.

ಕಟ್ಟೆಮನೆ ದಿಲೀಪ್ ಕುಮಾರ್ ಜೈನ್, ವಸಂತ ಕುಮಾರ್ ಜೈನ್,ನಯನಾಡು ಉದ್ಯಮಿ ಸಿಲ್ವೆಸ್ಟರ್ ಪಿಂಟೊ, ಮಡಂತ್ಯಾರು ಚರ್ಚ್ ಧರ್ಮಗುರು ರೆ|ಫಾ|ಎಲ್ಯಾಸ್,ಹೈಕೋರ್ಟ್ ನ್ಯಾಯವಾದಿ ಸ್ವರ್ಣಲತಾ ಹೆಗ್ಡೆ, ಶ್ರೀ ಕ್ಷೇತ್ರ ಒಡಿಯೂರು ಗ್ರಾಮ ವಿಕಾಸ ಯೋಜನೆ ನಿರ್ದೇಶಕ ಕಿರಣ್ ಉರ್ವ, ಬಂಟ್ವಾಳ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪ್ರಶಾಂತ್ ಪುಂಜಾಲಕಟ್ಟೆ, ಶ್ರೀ ಕ್ಷೇ.ಧ.ಗ್ರಾ.ಯೋಜನೆ ಬಂಟ್ವಾಳ ಯೋಜನಾಽಕಾರಿ ಜಯಾನಂದ, ಬೆಳ್ತಂಗಡಿ ಯೋಜನಾಽಕಾರಿ ಯಶವಂತ್, ಯಕ್ಷಗಾನ ಕಲಾವಿದ ದಿನೇಶ್ ಶೆಟ್ಟಿ ಕಾವಳಕಟ್ಟೆ, ಶ್ರೀ ಮುರುಘೇಂದ್ರ ಮಿತ್ರ ಮಂಡಳಿ ಗೌರವಾಧ್ಯಕ್ಷ ಮೋಹನ ಸಾಲ್ಯಾನ್, ವನಿತಾ ಸಮಾಜ ಅಧ್ಯಕ್ಷೆ ಆಶಾ ದಿನಕರ್, ಸ್ಥಳದಾನಿ ಗಿರೀಶ್ ಸಾಲ್ಯಾನ್   ಒಕ್ಕೂಟಗಳ ಅಧ್ಯಕ್ಷರು, ಪದಾಽಕಾರಿಗಳು, ಮಿತ್ರ ಮಂಡಳಿ, ವನಿತಾ ಸಮಾಜ, ಗ್ರಾಮ ವಿಕಾಸ ಯೋಜನೆ ಪದಾಽಕಾರಿಗಳು, ಮತ್ತಿತರರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಪ್ರಗತಿಪರ ಕೃಷಿಕ ಮಾರ್ಷಲ್ ಮಿರಾಂದ, ಜಾನಪದ ಕಲಾವಿದ ಕರಿಯ ಮೂಲ್ಯ, ಡಾ| ಗೌತಮ್ ಎಂ.ಕೆ.ಅಜಿಲ ಅವರನ್ನು ಸಮ್ಮಾನಿಸಲಾಯಿತು.

ಸಂಘದ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ ಸ್ವಾಗತಿಸಿ, ಪ್ರಸ್ತಾವಿಸಿದರು. ದಿನಕರ ಶೆಟ್ಟಿ ಸಮ್ಮಾನ ಪತ್ರ ವಾಚಿಸಿದರು. ಪುಷ್ಪಲತಾ ಮೋಹನ್ ವಂದಿಸಿದರು. ರಂಗ ಕಲಾವಿದ ಎಚ್ಕೇ ನಯನಾಡು ಕಾರ್ಯಕ್ರಮ ನಿರೂಪಿಸಿದರು.

More articles

Latest article