ಸೌತ್ ಕೆನರಾ ಫೋಟೊಗ್ರಾಪರ್ಸ್ ಅಸೋಸಿಯೇಷನ್, ದಕ್ಷಿಣ ಕನ್ನಡ ಉಡುಪಿ ಜಿಲ್ಲೆ ಇದರ 2021-23ನೇ ಸಾಲಿನ ನೂತನ ಜಿಲ್ಲಾ ಪದಾಧಿಕಾರಿಗಳ ಆಯ್ಕೆ ನ16 ರಂದು ಮಂಗಳೂರಿನ ಸೆಬಾಸ್ಟಿಯನ್ ಹಾಲ್ ನಲ್ಲಿ ನಡೆಯಿತು.
ನೂತನ ಪದಾಧಿಕಾರಿಗಳ ವಿವರ ಅಧ್ಯಕ್ಷರು ಆನಂದ ಎನ್ ಬಂಟ್ವಾಳ,ಸಲಹಾ ಸಮಿತಿ ಸಂಚಾಲಕರು ನವೀನ್ ಕುಮಾರ್ ಕುದ್ರೋಳಿ ಮಂಗಳೂರು, ಉಪಾಧ್ಯಕ್ಷರು ಪದ್ಮ ಪ್ರಸಾದ್ ಜೈನ್ ಕಾರ್ಕಳ, ಲೋಕೇಶ್ ಸುಬ್ರಹ್ಮಣ್ಯ ಸುಳ್ಯ, ಪ್ರಧಾನ ಕಾರ್ಯದರ್ಶಿ: ನಿತಿನ್ ಬೆಳುವಾಯಿ, ಕೋಶಾಧಿಕಾರಿ ನವೀನ್ ರೈ ಪಂಜಳ ಪುತ್ತೂರು, ಜೊತೆ ಕಾರ್ಯದರ್ಶಿ ವಾಮನ ಪಡುಕೆರೆ, ಅಜಯ್ ಮಂಗಳೂರು, ಸಂಘಟನಾ ಕಾರ್ಯದರ್ಶಿ ಹೆರಿಕ್ ಡಿಸೋಜ ಬ್ರಹ್ಮಾವರ, ಜಯಕರ ಸಾಲ್ಯಾನ್ ಸುರತ್ಕಲ್ , ಕ್ರೀಡಾ ಕಾರ್ಯದರ್ಶಿ ಶ್ರೀನಿವಾಸ ಐತಾಳ ಕಾಪು, ರಾಜೇಶ್ ಉಳ್ಳಾಲ, ಸಾಂಸ್ಕೃತಿಕ ಕಾರ್ಯದರ್ಶಿ ನವೀನ್ ಕುಮಾರ್ ಕಟೀಲು, ಪತ್ರಿಕಾ ಪ್ರತಿನಿಧಿ ಉಮೇಶ್ ಕುಮಾರ್ ಮದ್ದಡ್ಕ ಬೆಳ್ತಂಗಡಿ , ಛಾಯಾ ಕಾರ್ಯದರ್ಶಿ ಅಮೃತ ಬೀಜಾಡಿ ಕುಂದಾಪುರ, ಇವರನ್ನು ಆಯ್ಕೆ ಮಾಡಲಾಯಿತು.