ಬಂಟ್ವಾಳ: ಬಿಸಿರೋಡಿನ ಪೆಟ್ರೋಲ್ ಪಂಪ್ ಗಳಲ್ಲಿ ಅನ್ವಯವಾಗದ ಪೆಟ್ರೋಲ್ ದರ.
ಕೇಂದ್ರ ಹಾಗೂ ರಾಜ್ಯ ಸರಕಾರ ನ.3 ರಂದು ಪೆಟ್ರೋಲ್ ಹಾಗೂ ಡೀಸೆಲ್ ದರ ಕಡಿತ ಮಾಡಿ ಅದೇಶ ನೀಡಿದ್ದರೂ ಬಿಸಿರೋಡಿನ ಪೆಟ್ರೋಲ್ ಪಂಪ್ ಗಳಲ್ಲಿ ಇಂದು ಸಂಜೆಯೂ ರಾಜ್ಯ ಸರಕಾರದ ದರ ಕಡಿತ ಅನ್ವಯ ವಾಗಿಲ್ಲ.
ಮಂಗಳೂರು ಸೇರಿದಂತೆ ಇತರ ಕೆಲವು ಭಾಗಗಳಲ್ಲಿ ಸಂಜೆ 6 ಗಂಟೆಯ ಬಳಿಕವೇ ರಾಜ್ಯ ಸರಕಾರದ 7 ರೂ ಗಳ ದರ ಕಡಿತ ಅನ್ವಯವಾಗಿತ್ತು.
ಅಂದರೆ ಮಂಗಳೂರಿನಲ್ಲಿ ,ಇಂದು ಸಂಜೆ ಲೀಟರ್ ಗೆ 99.76 ರೂ ಧಾರಣೆ ಇತ್ತು.
ಡೀಸೆಲ್ ಗೆ 84.24 ರೂ ಇತ್ತು.
ಆದರೆ ಬಿಸಿರೋಡಿನಲ್ಲಿ ಸಂಜೆ 6. ಗಂಟೆ ಬಳಿಕವೂ ಪೆಟ್ರೋಲ್ ಗೆ 106.92 ಹಾಗೂ ಡಿಸೇಲ್ ಗೆ 91.34 ರೂ ಗೆ ಮಾರಾಟ ವಾಗುತ್ತಿತ್ತು.
ಬಿಸಿರೋಡು ಕರ್ನಾಟಕ ರಾಜ್ಯದಲ್ಲಿ ಇಲ್ಲವೇ ಎಂಬ ಪ್ರಶ್ನೆಯನ್ನು ಸಾರ್ವಜನಿಕರು ಪಂಪ್ ಗಳಲ್ಲಿ ಪ್ರಶ್ನಿಸಿದರು.
*ಪಂಪ್ ಗಳಲ್ಲಿ ಗೊಂದಲ*
ರಾಜ್ಯದಲ್ಲಿ ಪೆಟ್ರೋಲ್ ದರ ಇಳಿಕೆ ಯಾದ ಬಳಿಕ ವೂ ಬಿಸಿರೋಡಿನ ಲ್ಲಿ ದರ ಕಡಿತ ಮಾಡದೇ ಹಗಲು ದರೋಡೆ ಮಾಡುವ ಪಂಪ್ ಗಳ ವಿರುದ್ಧ ಗ್ರಾಹಕರು ಪೆಟ್ರೋಲ್ ಹಾಕುವ ಸಂದರ್ಭದಲ್ಲಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.
ಆದರೆ ರಾಜ್ಯ ಸರಕಾರದ ದರ ಕಡಿತ ಇನ್ನೂ ಕೂಡ ಎಲ್ಲಿಯೂ ಅನ್ನಯವಾಗಿಲ್ಲ ಎಂದು ಇಲ್ಲಿನ ಪೆಟ್ರೋಲ್ ಬಂಕ್ ನವರು ಗ್ರಾಹಕರಿಗೆ ಸುಳ್ಳು ಮಾಹಿತಿ ನೀಡುತ್ತಿದ್ದರು.