ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ) ವಿಟ್ಲ ಇದರ ಕಲ್ಲಡ್ಕ ವಲಯದ ಜನಜಾಗೃತಿ ವೇದಿಕೆಯ ನೂತನ ಅಧ್ಯಕ್ಷರಾಗಿ ಬಟ್ಯಪ್ಪ ಮಾಸ್ಟರ್ ನೆಟ್ಲ, ಉಪಾಧ್ಯಕ್ಷರಾಗಿ ತುಳಸಿ ಕೊಳಕೀರು, ಕಾರ್ಯದರ್ಶಿಯಾಗಿ ಕಲ್ಲಡ್ಕ ವಲಯ ಮೇಲ್ವಿಚಾರಕಿ ಸುಗುಣ ಶೆಟ್ಟಿ, ಜೊತೆ ಕಾರ್ಯದರ್ಶಿಯಾಗಿ ಚಿನ್ನ ಮೈರ, ಕೋಶಾಧಿಕಾರಿಯಾಗಿ ವೀರಪ್ಪ ಮೂಲ್ಯ ವೀರಕಂಬ ಆಯ್ಕೆಯಾದರು.
ಯೋಜನಾಧಿಕಾರಿ ಚನ್ನಪ್ಪಗೌಡ ಯೋಜನೆಯ ಶಿಬಿರಾಧಿಕಾರಿಯಾದ ದಿವಾಕರ ಪೂಜಾರಿ ಯವರ ಸಮ್ಮುಖದಲ್ಲಿ ಕಲ್ಲಡ್ಕ ವಲಯ ಜನಜಾಗೃತಿ ವೇದಿಕೆಯ ಹಾಲಿ ಅಧ್ಯಕ್ಷ ಜಯಂತಿ ನೂತನ ಅಧ್ಯಕ್ಷರಿಗೆ ಅಧಿಕಾರ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಕಲ್ಲಡ್ಕ ವಲಯದ ಎಲ್ಲಾ ಒಕ್ಕೂಟದ ಅಧ್ಯಕ್ಷರುಗಳು, ಸೇವಾ ಪ್ರತಿನಿಧಿಗಳು, ಕಲ್ಲಡ್ಕ ವಲಯದ ಗಣ್ಯರು ಹಾಗೂ ನವಜೀವನ ಸಮಿತಿಯ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.