Tuesday, April 23, 2024

ಎಚ್.ಟಿ. ವಿದ್ಯುತ್ ಲೈನ್ ಬಿದ್ದು ಮನೆಗಳಿಗೆ ಹಾನಿ

ಬಂಟ್ವಾಳ: ಶಂಭೂರು ಗ್ರಾಮದ ಅಡೆಪಿಲದಲ್ಲಿ ಎಚ್.ಟಿ. ವಿದ್ಯುತ್ ಲೈನ್ ವೀಕ್ ಆಗಿ ತುಂಡಾಗಿ ಬಿದ್ದು ಹಲವು ಮನೆಗಳ ವಯರಿಂಗ್ ಹಾಗೂ ವಿದ್ಯುತ್ ಪರಿಕರಗಳು ಸುಟ್ಟು ಭಸ್ಮವಾದ ಘಟನೆ ನಡೆದಿದೆ.

ಎಚ್.ಟಿ.ಲೈನ್ ಎಲ್.ಟಿ.ಲೈನ್ ಮೇಲೆ ಬಿದ್ದು ಏಕಾಏಕಿ ಹೆಚ್ಚಿನ ಪ್ರಮಾಣದ ವಿದ್ಯುತ್ ಪ್ರವಹಿಸಿರುವುದು ಘಟನೆಗೆ ಕಾರಣ ಎನ್ನಲಾಗಿದೆ. ಈ ಹಿಂದೆಯೂ ಇದೇ ಸಮಸ್ಯೆ ಇದ್ದು, ಸಂಬಂಧಪಟ್ಟ ಜೆಇ ಅವರ ಗಮನಕ್ಕೆ ತರಲಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಘಟನೆಯಿಂದ ಸ್ಥಳೀಯ ನಿವಾಸಿಗಳಾದ ವಿನ್ಸೆಂಟ್ ಬ್ಯಾಪ್ಟಿಸ್ಟ್ , ಗಿಲ್ಬರ್ಟ್ ಪಿಂಟೋ, ವಿಲಿಯಂ ಪಿಂಟೋ ಅವರ ಪಂಪುಸೆಟ್ ಗಳು ಸುಟ್ಟು ಹೋಗಿವೆ. ಜೈಸನ್ ಪಿಂಟೋ ಅವರ ಮನೆ ಸೇರಿದಂತೆ ಹಲವು ಮನೆಗಳ ವಿದ್ಯುತ್ ವಯರಿಂಗ್, ಸಲಕರಣೆಗಳು ಸಂಪೂರ್ಣ ಸುಟ್ಟಿವೆ. ವಯರಿಂಗ್ ದುರಸ್ತಿ ಮಾಡಿ ಕೊಡುವುದಾಗಿ ಮೆಸ್ಕಾಂನವರು ಭರವಸೆ ನೀಡಿದ್ದಾರೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

More from the blog

ಬಿಜೆಪಿ ಪಕ್ಷದಿಂದ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಉಚ್ಛಾಟನೆ

ಶಿವಮೊಗ್ಗ: ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರನ್ನು ಬಿಜೆಪಿ ಶಿಸ್ತು ಸಮಿತಿ ಸೋಮವಾರ ಪಕ್ಷದಿಂದ ಉಚ್ಚಾಟನೆ ಮಾಡಿದೆ. ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜು ಅವರು ಸೋಮವಾರ ಈಶ್ವರಪ್ಪ ಅವರನ್ನು ಆರು ವರ್ಷಗಳ ಕಾಲ...

ವಿಟ್ಲ ವಿಘ್ನೇಶ್ವರ ರೂಫಿಂಗ್ಸ್ & ಎಂಜಿನಿಯರಿಂಗ್ ವರ್ಕ್ಸ್, ಕ್ರೈನ್ ಸರ್ವೀಸ್ ಹಾಗೂ ಶ್ರೀ ವಿಘ್ನೇಶ್ವರ ಸ್ಟೀಲ್ಸ್ ಸ್ವಂತ ಕಟ್ಟಡಕ್ಕೆ ಸ್ಥಳಾಂತರ 

ವಿಟ್ಲ: ಕಳೆದ ಹಲವಾರು ವರುಷಗಳಿಂದ ವಿಟ್ಲ - ಪುತ್ತೂರು ರಸ್ತೆಯ ಮೇಗಿನ ಪೇಟೆಯಲ್ಲಿ ವ್ಯವಹಾರ ನಡೆಸುತ್ತಿದ್ದ ಶ್ರೀ ವಿಘ್ನೇಶ್ವರ ರೂಫಿಂಗ್ಸ್ & ಎಂಜಿನಿಯರಿಂಗ್ ವರ್ಕ್ಸ್, ಕ್ರೈನ್ ಸರ್ವೀಸ್ ಹಾಗೂ ಶ್ರೀ ವಿಘ್ನೇಶ್ವರ ಸ್ಟೀಲ್ಸ್...

ಚುನಾವಣೆಯಲ್ಲಿ ಆಧಾರರಹಿತವಾಗಿ ಕಡಿಮೆ ಪ್ರಮಾಣದಲ್ಲಿ ಕುಲಾಲರ ಮತದಾರರ ಸಂಖ್ಯೆ ತೋರಿಸಿರುವುದು ಬೇಸರದ ವಿಚಾರ-ಸದಾಶಿವ ಬಂಗೇರ

ಬಂಟ್ವಾಳ: ದ.ಕ.ಜಿಲ್ಲೆಯಲ್ಲಿ ಕುಲಾಲ ಯಾನೆ ಮೂಲ್ಯ ಸಮುದಾಯ ಗರಿಷ್ಠ ಪ್ರಮಾಣದಲ್ಲಿದ್ದು, ಮೂರನೇ ಅತಿ ಹೆಚ್ಚು ಮತದಾರರಿರುವ ಸಮುದಾಯವಾಗಿದೆ. ಜಿಲ್ಲೆಯ ನಿರ್ಣಾಯಯ ಸ್ಥಾನದಲ್ಲಿರುವ ಕುಲಾಲರ ಮತದಾರರ ಸಂಖ್ಯೆ ಅಂದಾಜು ೧.೮೪ ಲಕ್ಷವಾಗಿದೆ. ಆದರೆ ಚುನಾವಣೆಯ...

ಸರಪಾಡಿಯಲ್ಲಿ ನಡೆದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ

ಬಂಟ್ವಾಳ: ಅಪಪ್ರಚಾರ ನಡೆಸುವವರಿಗೆ ಉತ್ತರ ನೀಡುವ ಅಗತ್ಯವಿಲ್ಲ. ನಮ್ಮ ಕೆಲಸವೇ ಅವರಿಗೆ ಉತ್ತರ ನೀಡಲಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ ಹೇಳಿದರು. ಮಣಿನಾಲ್ಕೂರು ವಲಯ ಕಾಂಗ್ರೆಸ್ ನೇತೃತ್ವದಲ್ಲಿ ಸರಪಾಡಿಯಲ್ಲಿ ನಡೆದ ಕಾಂಗ್ರೆಸ್...