ಪಾಣೆಮಂಗಳೂರು: ಸಲ್-ಸಬೀಲ್ ಸ್ಟೂಡೆಂಟ್ಸ್ ಅಸೋಸಿಯೇಷನ್ ಬೋಗೋಡಿ ವಿದ್ಯಾರ್ಥಿ ಸಂಸ್ಥೆಯ ನೂತನ ಅಧ್ಯಕ್ಷರಾಗಿ ಮುಹಮ್ಮದ್ ರಾಫಿದ್ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಜಾಫರ್ ಬೋಗೋಡಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಇತ್ತೀಚಿಗೆ ನಡೆದ ಸಂಸ್ಥೆಯ 8ನೇ ವಾರ್ಷಿಕ ಮಹಾಸಭೆಯಲ್ಲಿ ಈ ಆಯ್ಕೆ ನಡೆದಿದ್ದು ಉಪಾಧ್ಯಕ್ಷರಾಗಿ ಜಮಾಲ್ ಆಲಡ್ಕ, ಜೊತೆ ಕಾರ್ಯದರ್ಶಿಯಾಗಿ ಸಾದಾತ್ ಉಪ್ಪುಗುಡ್ಡೆ, ಕೋಶಾಧಿಕಾರಿಯಾಗಿ ರಿಲ್ವಾನ್ ಮೆಲ್ಕಾರ್ ಅವರನ್ನು ಆರಿಸಲಾಯಿತು.
ಕಾರ್ಯಕಾರಿ ಸಮಿತಿ ಸದಸ್ಯರಾಗಿ ಮುಝಮ್ಮಿಲ್ ಬೋಗೋಡಿ, ಝಿಯಾದ್ ಬೋಗೋಡಿ, ಶಫಿಯುಳ್ಳ ಬೊಗೋಡಿ, ಹಫೀಝ್ ಗುಡ್ಡೆಅಂಗಡಿ, ರಾಶಿದ್ ಬೋಗೋಡಿ, ಅವರನ್ನು ನೇಮಿಸಲಾಯಿತು. ಸಂಸ್ಥೆಯ ಅಜೀವ ಸದಸ್ಯರಾಗಿ ಉಬೈದ್ ಬೋಗೋಡಿ, ಉಮರ್ ಸಾಬೀತ್, ನಜೀಬ್ ಬೋಗೋಡಿ, ರಿಫಾತ್ ಬೋಗೋಡಿಯವನ್ನು ಆರಿಸಲಾಯಿತು..