Saturday, April 6, 2024

ಶಾಲೆ ಆರಂಭ ತುಂಬಾ ಖುಷಿಯೋ ಖುಷಿ

ಬಂಟ್ವಾಳ : ಇಂದು ಶಾಲೆ ಆರಂಭ ದಿನ. ತುಂಬಾ ತಿಂಗಳುಗಳ ನಂತರ ಶಾಲೆ ಆರಂಭವಾಗಿದೆ. ಈ ಮಧ್ಯದಲ್ಲಿ ಶಾಲೆಯ ನನಗೆ ಹೋಗಲು ಸುಲಭವಾಗುವುದಕ್ಕೆ ನಮ್ಮ ಮನೆಯ ಹತ್ತಿರದ ಶಾಲೆಯಾದ ನಲ್ಕೆಮಾರ್ ಶಾಲೆಗೆ ನಾನು ಈ ದಿನ ಹೋಗುವುದೆಂದು ಕಳೆದ ಕೆಲವು ದಿನಗಳ ಹಿಂದಿನಿಂದ ಕಾಯುತ್ತಾ ಇದ್ದೆ. ಟೀಚರ್ ಕಳುಹಿಸಿದ ಹೋಮ್ ವರ್ಕ್ಸ್‌ನ್ನು ಶನಿವಾರ ರಾತ್ರಿಯೇ ಮಾಡಿ ಮುಗಿಸಿದ್ದೇನೆ. ಆದಿತ್ಯವಾರವೂ ಸ್ವಲ್ಪ ಆರಾಮವಾಗಿಯೇ ಮನೆಯಲ್ಲೇ ಇದ್ದೆ. ಸೋಮವಾರ ಬೆಳಿಗ್ಗೆ ಬೇಗ ಎದ್ದೆ. ನನ್ನ ದಿನಚರಿ ಮುಗಿಸಿದ ನಂತರ ಶಾಲೆಗೆ ತಯಾರಾಗಿದ್ದೆ. ನನಗೆ ಹಿಂದಿನ ವರ್ಷ ಹೊಸದಾಗಿ ಹೊಲಿಸಿಟ್ಟ ನೀಲಿ ಬಿಲಿ ಬಟ್ಟೆಯನ್ನು ಹಾಕಿದೆ. ತಿಂಡಿ ತಿಂದ ಮೇಲೆ ಶಾಲೆಗೆ ತಂದೆ ಬಿಟ್ಟು ಹೋದರು.

ಶಾಲೆಗೆ ಹೋದಾಗ ಶಾಲೆಯ ದ್ವಾರ ಬಳಿ ಒಂದು ರೌಂಡಾಗಿ ಪೈಪ್ ಹಾಕಿದ್ದರು. ಶಾಲೆಯಲ್ಲಿ ಶಾಲೆ ಟೀಚರ್‌ರವರು ನನ್ನ ಕೈಯ ಟೆಂಪರೇಚರ್ ನೋಡಿದರು. ನಂತರ ಶಾಲೆಯ ಕೋಣೆಗೆ ಹೋದಾಗ ಅಲ್ಲಿ ಮೇಷ್ಟ್ರು ಸಿಕ್ಕಿದ್ರು. ನಮಸ್ತೆ ಸಾರ್ ಎಂದೆ. ನಮಸ್ತೆ ಹೇಳಿದರು. ಅವರು ಶಾಲೆಯ ಅಲಂಕಾರ ಮಡಲು ಬಲೂನನ್ನು ಕೊಟ್ಟರು. ಕೆಲವು ಮಕ್ಕಳು ಸೇರಿಕೊಂಡು ಬಲೂನನ್ನು ಊದಿ ದೊಡ್ಡದು ಮಾಡಿದೆವು. ಮತ್ತು ಶಾಲೆಯ ದ್ವಾರದಲ್ಲಿ ಪೈಪ್‌ಗೆ ರೌಂಡಾಗಿ ಕಟ್ಟಿದೆ. ನಂತರ ನನ್ನ ತರಗತಿಯ ದೃಶ್ಯಳ ಪರಿಚಯವಾಯಿತು. ಬೇರೆ ಬೇರೆ ಮಕ್ಕಳು ನನ್ನ ಜೊತೆ ಮಾತಾಡಿದರು. ಆದರೆ ಹೆಸರು ಏನೆಂದು ಕೇಳಲಿಲ್ಲ. ನಂತರ ರೇಖಾ ಟೀಚರ್ ಶಾಲೆಯಲ್ಲಿರುವ ದೊಡ್ಡ ಮಕ್ಕಳಿಗೆ ಬ್ಯಾಂಡ್, ವಾದ್ಯಗಳನ್ನು ಶಾಲೆಯ ದ್ವಾರದ ಬಳಿ ಕೊಂಡೋಗಲು ಹೇಳಿದರು. ನಂತರ ನಾವೆಲ್ಲಾ ಅವರ ಹಿಂದೆ ಸಾಲಗಿ ಹೋದೆವು.

ನಂತರ ಹೊಸದಾಗಿ ಬಂದ ಮಕ್ಕಳಿಗೆ ಹೂ ಮತ್ತು ಬಲೂನು ಕೊಟ್ಟು ಶಾಲೆಯ ಕರೆದುಕೊಂಡು ಬಂದರು. ನಾವೆಲ್ಲಾ ಮಕ್ಕಳು ಒಟ್ಟಿಗೆ ಮಕ್ಕಳು ನೆಲದಲ್ಲಿ ಕುಳಿತೆವು. ಸ್ಟೇಜಲ್ಲಿ ದೊಡ್ಡ ದೊಡ್ಡ ಜನರು ಭಾಷಣ ಮಾಡಿದರು. ನಂತರ ಪಾನೀಯ ಮತ್ತು ಮಾಲ್‌ಪುರಿ ಕೊಟ್ಟರು. ಸಭೆ ಆದ ನಂತರ ಮೈದಾನದಲ್ಲಿ ಜಾರು ಬಂಡಿ ಇತ್ತು. ಮತ್ತೊಂದು ಮೇಲೆ ಕೆಳಗೆ ಮಾಡುವ ಆಟದ ಸಾಮಾನು ಇತ್ತು. ನಾವೆಲ್ಲಾ ಸೇರಿ ಅಲ್ಲಿ ಆಟ ಆಡಿದೆವು. ಹೀಗೆ ತುಂಬಾ ಖುಷಿ ಖುಷಿಯಾಯಿತು ನನ್ನ ತುಂಬಾ ದಿನಗಳ ನಂತರ ಹೋದ ಶಾಲಾ ದಿನ.

 

– ವೈಷ್ಣವಿ ವೈ. ಕೆ.

4ನೇ ತರಗತಿ, ದ..ಕ. ಜಿ.ಪಂ. ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ, ನಲ್ಕೆಮಾರ್

More from the blog

ನೀತಿ ಸಂಹಿತೆ ಉಲ್ಲಂಘನೆ : ಕೋಟಾ ಶ್ರೀನಿವಾಸ್‌ ಪೂಜಾರಿಗೆ ಕೋರ್ಟ್‌ ಸಮನ್ಸ್‌

ಬೆಂಗಳೂರು: ಬಿಜೆಪಿ ಅಭ್ಯರ್ಥಿ ಕೋಟಾ ಶ್ರೀನಿವಾಸ್‌ ಪೂಜಾರಿ ಅವರಿಗೆ ಕೋರ್ಟ್‌ ಸಮನ್ಸ್‌ ಜಾರಿ ಮಾಡಿದೆ. ಕೋಟಾ ಶ್ರೀನಿವಾಸ ಪೂಜಾರಿ, ಗುರ್ಮೆ ಸುರೇಶ್ ಶೆಟ್ಟಿ, ಲಾಲಾಜಿ ಮೆಂಡನ್ ಹಾಗೂ ಶಾಲಾ ಆಡಳಿತ ಮಂಡಳಿಗೆ ಜನಪ್ರತಿನಿಧಿಗಳ ವಿಶೇಷ...

ಸರ್ಕಾರದ ಕೋವಿ ಠೇವಣಿ ಕ್ರಮ: ಪರವಾನಿಗೆ ಪಡೆದ ರೈತರಿಂದ ಚುನಾವಣೆ ಬಹಿಷ್ಕಾರ 

ವಿಟ್ಲ: ಕರ್ನಾಟಕ ರಾಜ್ಯ ರೈತ ಸಂಘ ಹಸಿರುಸೇನೆಯ ದ.ಕ.ಜಿಲ್ಲಾ ಸಮಿತಿ ಮತ್ತು ಕೋವಿ ಪರವಾನಿಗೆ ಪಡೆದ ರೈತ ಬಳಕೆದಾರರ ಸಂಘವು ಈ ಬಾರಿ ಚುನಾವಣೆ ಬಹಿಷ್ಕರಿಸುತ್ತದೆ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಶ್ರೀಧರ...

ಟ್ರಾಫಿಕ್ ಪೊಲೀಸ್ ಠಾಣೆಯ ಕಾಮಗಾರಿಯನ್ನು ಪೊಲೀಸ್ ಹೌಸಿಂಗ್ ಕಾರ್ಪೋರೇಸನ್ ಎಡಿಜಿಪಿ ರಾಮಚಂದ್ರರಾವ್ ವೀಕ್ಷಣೆ

ಬಂಟ್ವಾಳ; ಬಿಸಿರೋಡಿನ ಪಾಣೆಮಂಗಳೂರಿನಲ್ಲಿ ಅಂದಾಜು ರೂ.3.18 ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಟ್ರಾಫಿಕ್ ಪೋಲೀಸ್ ಠಾಣೆಯ ಕಾಮಗಾರಿಯನ್ನು ಪೋಲಿಸ್ ಹೌಸಿಂಗ್ ಕಾರ್ಪೋರೇಸನ್ ಎಡಿಜಿಪಿ ರಾಮಚಂದ್ರರಾವ್ ವೀಕ್ಷಣೆ ನಡೆಸಿದರು. ಉತ್ತಮ ಗುಣಮಟ್ಟದಲ್ಲಿ ಠಾಣೆಯ ಕೆಲಸವನ್ನು ಮಾಡುವ...

ಸೌಜನ್ಯ ಹೋರಾಟ ಸಮಿತಿಯಿಂದ ನೋಟ ಅಭಿಯಾನ

ಮಂಗಳೂರು: ರಾಜಕೀಯ ಪಕ್ಷಗಳು ಮತ್ತು ನ್ಯಾಯಾಂಗ ವ್ಯವಸ್ಥೆಯ ಗಮನ ಸೆಳೆಯುವ ಉದ್ದೇಶದಿಂದ ಸೌಜನ್ಯ ಪರ ಹೋರಾಟ ಸಮಿತಿ ವತಿಯಿಂದ ಮುಂಬರುವ‌ ಲೋಕಸಭಾ ಚುನಾವಣೆಯಲ್ಲಿ ನೋಟಕ್ಕೆ ಮತ ಚಲಾಯಿಸಲು ಜನ ಸಾಮಾನ್ಯರನ್ನು ಪ್ರೇರೇಪಿಸಲು ನೋಟ...