ಬಂಟ್ವಾಳ: ಸರಪಾಡಿ ಶ್ರೀ ಶರಭೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯದ ಹಿನ್ನೆಲೆಯಲ್ಲಿ ಸರಪಾಡಿ ಯುವಕ ಮಂಡಲದ ವತಿಯಿಂದ ಆಯೋಜಿಸಿದ್ದ 6ನೇ ವರ್ಷದ ನಗರ ಭಜನೆಯಲ್ಲಿ ಸಂಗ್ರಹಗೊಂಡ 3,63.055 ರೂ.ಗಳ ಚೆಕ್ಕನ್ನು ಭಾನುವಾರ ದೇವಸ್ಥಾನದಲ್ಲಿ ಜೀರ್ಣೋದ್ಧಾರ ಸಮಿತಿಗೆ ಹಸ್ತಾಂತರಿಸಲಾಯಿತು.
ದೇವಸ್ಥಾನದ ಪ್ರಧಾನ ಅರ್ಚಕ ಶಂಕರನಾರಾಯಣ ಹೊಳ್ಳ ಅವರು ಪ್ರಾರ್ಥನೆ ನೆರವೇರಿಸಿದರು. ಯುವಕ ಮಂಡಲದ ಅಧ್ಯಕ್ಷ ಸಂತೋಷ್ ಶೆಟ್ಟಿ ಸರಪಾಡಿ ಅವರು ಜೀರ್ಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ನಾರಾಯಣ ಶೆಟ್ಟಿ ಹೊಳ್ಳರಗುತ್ತು ಅವರಿಗೆ ಚೆಕ್ ಹಸ್ತಾಂತರಿಸಿದರು. ಈ ತನಕ 6 ವರ್ಷಗಳ ನಗರ ಭಜನೆಯಲ್ಲಿ ಸಂಗ್ರಹಗೊಂಡ ಒಟ್ಟು ಮೊತ್ತ 14.75 ಲಕ್ಷ ರೂ.ಗಳನ್ನು ದೇವಸ್ಥಾನಕ್ಕೆ ಹಸ್ತಾಂತರಿಸಲಾಗಿದೆ.
ಪ್ರಮುಖರಾದ ಉಮೇಶ್ ಆಳ್ವ ಕೊಟ್ಟುಂಜ, ರಾಧಾಕೃಷ್ಣ ರೈ ಕೊಟ್ಟುಂಜ, ರಾಧಾಕೃಷ್ಣ ಶೆಟ್ಟಿ ಕಲ್ಕೊಟ್ಟೆ, ಆನಂದ ಶೆಟ್ಟಿ ಆರುಮುಡಿ, ದಯಾನಂದ ದರ್ಖಾಸು, ರಾಹುಲ್ ಕೋಟ್ಯಾನ್ ದರ್ಖಾಸು, ಚೇತನ್ ಬಜ, ಯೋಗೀಶ್ ಎಲ್, ಯೋಗೀಶ್ ಗೌಡ ನೀರೊಲ್ಬೆ, ಕಿಶನ್ ಸರಪಾಡಿ, ವಚನ್ ಬಜ, ಪ್ರವೀಣ್ ಗೌಡ ಉಪಸ್ಥಿತರಿದ್ದರು.