Sunday, October 22, 2023

ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಮಧ್ಯೆ ಬಿಸಿರೋಡಿನಲ್ಲಿ ಕೃತಕ ನೆರೆ ?

Must read

ಬಂಟ್ವಾಳ: ಶನಿವಾರ ಸುರಿದ ಬಾರಿ ಮಳೆಗೆ ನೀರು ಹರಿದು ಹೋಗಲು ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದೆ ರಸ್ತೆಯಲ್ಲಿ ಮಳೆ ನೀರು ಹರಿದು ಹೋಗುವ ದೃಶ್ಯ ಪುರಸಭಾ ವ್ಯಾಪ್ತಿಯ ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಕೈಕಂಬ ಬಿಸಿರೋಡು ಮಧ್ಯೆ ಇರುವ ಪೆಟ್ರೋಲ್ ಪಂಪ್ ಒಂದರ ಮುಂಭಾಗದಲ್ಲಿ ಕಂಡು ಬಂದಿದೆ.
ಶನಿವಾರ (ಇಂದು) ರಾತ್ರಿ ಸುಮಾರು 8 ಗಂಟೆಯಿಂದ ಅರ್ಧ ತಾಸುಗಳ ಕಾಲ ಎಡೆಬಿಡದೆ ಸುರಿದ ಬಾರೀ ಮಳೆಗೆ ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಬಿಸಿರೋಡು ರಸ್ತೆಯಲ್ಲಿ ಮಳೆ ನೀರು ಹರಿದು ಸಾಧ್ಯ ವಾಗದೆ ಕೃತಕ ನೆರೆಯಿಂದ ವಾಹನ ಸವಾರರಿಗೆ ತೊಂದರೆ ಯಾಯಿತು.

ಮಳೆ ನೀರು ಸರಾಗವಾಗಿ ಹರಿದುಹೋಗಲು ಸರಿಯಾದ ಚರಂಡಿ ವ್ಯವಸ್ಥೆ ಯನ್ನು ಸಂಬಂಧಿಸಿದ ಇಲಾಖೆ ಮಾಡದೆ ಇರುವ ಕಾರಣ ನೀರು ರಸ್ತೆ ತುಂಬಾ ತುಂಬಿ ಕೃತಕ ತೋಡಾಗಿ ಮಾರ್ಪಾಡು ಆಗಿತ್ತು.
ರಾತ್ರಿ ವೇಳೆ ಆಗಿದ್ದರಿಂದ ನೀರಿನ ಮಟ್ಟ ಸರಿಯಾಗಿ ಅಂದಾಜಿಸಲಾಗದೆ ದ್ವೀಚಕ್ರವಾಹನ ಸವಾರರಂತೂ ಸರ್ಕಸ್ ಮಾಡುತ್ತಾ ಚಾಲನೆ ಮಾಡಿ ದಡ ಸೇರುವ ಪ್ರಸಂಗ ಕೂಡ ನಡೆಯಿತು.
ಬಿಸಿರೋಡಿನಿಂದ ಪರಂಗಿಪೇಟೆ ವರೆಗೂ ಇದೇ ರೀತಿಯಲ್ಲಿ ರಸ್ತೆಯಲ್ಲಿ ನೀರು ತುಂಬಿಕೊಂಡು ವಾಹನ ಸವಾರರಿಗೆ ಚಾಲನೆ ಮಾಡುವುದೇ ಸಾಹಸದ‌ಕೆಲಸವಾಗಿದೆ.
ರಾಷ್ಟ್ರೀಯ ಹೆದ್ದಾರಿ ಬದಿಯ ಚರಂಡಿಯ ಸರಿಯಾಗಿ ಹೂಳೆತ್ತುವ ಕಾರ್ಯ ನಡೆಯದೇ ಇರುವುದೇ ಇಂತಹ ಎಡವಟ್ಟುಗಳಿಗೆ ಅವಕಾಶ ವಾಗಿದೆ ಎಂದು ಸಾರ್ವಜನಿಕ ವಲಯದ ಮಾತು.

More articles

Latest article