ಬಂಟ್ವಾಳ : ತಾಲೂಕಿನಾದ್ಯಂತ ಶನಿವಾರ ಸಂಜೆಯಿಂದ ರಾತ್ರಿವರೆಗೆ ಸುರಿದ ಭಾರೀ ಮಳೆ -ವಿಪರೀತ ಗಾಳಿಗೆ ತುತ್ತದ ಬಡಗಕಜೆಕಾರು ಪಂಚಾಯತ್ ವ್ಯಾಪ್ತಿಯ ಕಂರ್ಬಡ್ಕ,ಪಾದೆ, ಪರೊಟ್ಟು, ಕೋಮಿನಡ್ಕ,ಪಾದೆಮಣ್ಣು,ಪಿತ್ತಿಲು ಹಾಗೂ ಉಳಿ ಪಂಚಾಯತ್ ವ್ಯಾಪ್ತಿಗೆ ಮಾಜಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ. ರಮಾನಾಥ ರೈ ಯವರು ಭೇಟಿ ನೀಡಿ ಇಲಾಖಾ ಅಧಿಕಾರಿಗಳಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಸೂಕ್ತ ಪರಿಹಾರ ನೀಡುವಂತೆ ಸೂಚಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾದ ಪದ್ಮಶೇಖರ್ ಜೈನ್, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬೇಬಿ ಕುಂದರ್, ಅಕ್ರಮ ಸಮಿತಿ ಮಾಜಿ ಅಧ್ಯಕ್ಷರಾದ ಮಾಯಿಲಪ್ಪ ಸಾಲ್ಯಾನ್ ಉಳಿ ಹಾಗೂ ಬಡಕಜೆಕಾರು ಪಂಚಾಯತ್ ಸದಸ್ಯರು ವಲಯ ಕಾಂಗ್ರೆಸ್ ಅಧ್ಯಕ್ಷರು ಮೊದಲಾದವರು ಉಪಸ್ಥಿತರಿದ್ದರು.