ಬಂಟ್ವಾಳ ಅಕ್ಟೋಬರ್ 03 , 2021 ತಾಲೂಕಿನಾದ್ಯಂತ ಶನಿವಾರ ಸಂಜೆಯಿಂದ ರಾತ್ರಿವರೆಗೆ ಸುರಿದ ಭಾರೀ ಮಳೆ -ವಿಪರೀತ ಗಾಳಿಗೆ ತುತ್ತದ ಪಂಜಿಕಲ್ಲು ಪಂಚಾಯತ್ ವ್ಯಾಪ್ತಿಯ ಲಿಯೋ ಮಿನಿಜಸ್ ಕೊಂಬರ ಬೈಲು, ಮಜೀದ್ ಮಜಲೋಡಿ,ಲೋಕಯ್ಯ ಪೂಜಾರಿ ದಂಡೆ ಮೂಡನ ಗೋಡು,ದಿನೇಶ್ ಶೆಟ್ಟಿ ಬುಡೋಳಿ,ವಿಶ್ವನಾಥ್ ಶೆಟ್ಟಿ ಬುಡೋಳಿ, ಶ್ರೀನಿವಾಸ್ ಐತಾಳ್ ಬುಡೋಳಿ, ಸದಾನಂದ ಶೆಟ್ಟಿ ಬುಡೋಳಿ, ಅಶೋಕ್ ಕುಮಾರ್ ಜೈನ್ ಪಂಜಿಕಲ್ಲು,ಪ್ರವೀಣ್ ಕುಮಾರ್ ವಸ್ ಪಂಜಿಕಲ್ಲು, ವಲೇರಿಯನ್ ಪಂಜಿಕಲ್ಲು, ಕೇಶವ ಪೂಜಾರಿ ಪಂಜಿಕಲ್ಲು, ಪ್ರವೀಣ್ ಪರೊಟ್ಟು, ಪ್ರಕಾಶ್ ಜೈನ್ ಪಂಜಿಕಲ್ಲು, ವೆಂಕಟೇಶ್ ಭಟ್ ಕೊಪ್ಪಳ ವಾಮದಪದವು, ಉಮೇಶ್ ಶೆಟ್ಟಿ ಪಿಲಿಮೊಗ್ರು, ಚಂದ್ರಹಾಸ ಶೆಟ್ಟಿ, ಆನಂದ ಪೂಜಾರಿ ವಿಶ್ವನಾಥ ಶೆಟ್ಟಿ ಇವರ ಮನೆಗಳಿಗೆ ಮಾಜಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ. ರಮಾನಾಥ ರೈ ಯವರು ಭೇಟಿ ನೀಡಿ ಇಲಾಖಾ ಅಧಿಕಾರಿಗಳಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಸೂಕ್ತ ಪರಿಹಾರ ನೀಡುವಂತೆ ಸೂಚಿಸಿದರು.
ಈ ಸಂದರ್ಭದಲ್ಲಿ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬೇಬಿ ಕುಂದರ್,ಮಾಜಿ ಭೂ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷರಾದ ಸುದರ್ಶನ್ ಜೈನ್,ಬಂಟ್ವಾಳ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರಾದ ಸುರೇಶ್ ಜೋರ,ಚೆನ್ನೈತೋಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಭರತಿ, ಸದಾನಂದ ಶೆಟ್ಟಿ, ದಿನೇಶ್ ಶೆಟ್ಟಿ, ನವೀನ್ ಶೆಟ್ಟಿ,ಕೇಶವ ಪಂಜಿಕಲ್ಲು ಮೊದಲಾದವರು ಉಪಸ್ಥಿತರಿದ್ದರು.