ಬಂಟ್ವಾಳ: ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್ (ರಿ.) ಕೋಡಿಯಾಲ್ ಬೈಲು ಮಂಗಳೂರು ಇವರ ವತಿಯಿಂದ ಬಂಟ್ವಾಳ ವಲಯ ನವೋದಯ ಸ್ವಸಹಾಯ ಗುಂಪು ಗಳ ಸದಸ್ಯರಿಗೆ ಮಾಹಿತಿ ಕಾರ್ಯಗಾರ ಬಂಟ್ವಾಳ ಯಶವಂತ ವ್ಯಾಯಾಮ ಶಾಲೆಯಲ್ಲಿ ನಡೆಯಿತು.

ಡಿ.ಸಿ.ಸಿ.ಬ್ಯಾಂಕ್ ನಿವೃತ್ತ ಮುಖ್ಯ ಕಾರ್ಯನಿರ್ವಣಾಧಿಕಾರಿ ನಾರಾಯಣ ಕಾಮತ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಗುಂಪುಗಳ ರಚನೆಯಾದ ಬಳಿಕ ಅದು ಶಕ್ತಿಯಾಗಿ ಹೊರಬರಬೇಕಾದರೆ ಸಂಘಟನಾತ್ಮಕ ಮಟ್ಟದಲ್ಲಿ ಕಾರ್ಯಚಟುವಟಿಕೆಗಳನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಬೇಕು.
ಅ ನಿಟ್ಟಿನಲ್ಲಿ ಪರಸ್ಪರ ಸಂಬಂಧವನ್ನು ಗಟ್ಟಿಮಾಡಬೇಕು, ಹಾಗಾದರೆ ಮಾತ್ರ ಗುಂಪುಗಳು ಬೆಳೆಯಲು ಸಾಧ್ಯ ಎಂದು ಅವರು ಹೇಳಿದರು.

ಬಂಟ್ವಾಳ ಶಾಖಾ ಮ್ಯಾನೇಜರ್ ಗಾಯತ್ರಿ ಅವರು ಮಾತನಾಡಿ ಬ್ಯಾಂಕ್ ಜೊತೆ ಹೊಂದಾಣಿಕೆ ಮಾಡಿಕೊಂಡು ವ್ಯವಹಾರ ಮಾಡಿ ಎಂದು ಅವರು ಹೇಳಿದರು. ಇಂತಹ ಮಾಹಿತಿ ಕಾರ್ಯಗಾರಗಳ ಸದುಪಯೋಗ ಪಡೆದು ಕೊಳ್ಳಲು ಅವರು ತಿಳಿಸಿದ್ದಾರೆ.

ಬ್ಯಾಂಕ್ ಸೌಲಭ್ಯಗಳ ಸದುಪಯೋಗ ಪಡಿಸಿಕೊಂಡು ನಿಮ್ಮ ಹಾಗೂ ಬ್ಯಾಂಕ್ ಅಭಿವೃದ್ಧಿಗಾಗಿ ಸಹಕಾರ ನೀಡಿ ಎಂದರು.

ಡಿ.ಸಿ‌‌.ಸಿ.ಬ್ಯಾಂಕ್ ನವೋದಯ ಗುಂಪುಗಳ ಮೇಲ್ವಿಚಾರಕ ರಂಜಿತ್ ಕುಮಾರ್, ಅವರು ಮಾತನಾಡಿ ,ರಚನೆಯಾದ ಸ್ವಸಹಾಯ ಗುಂಪು ಸ್ಥಗಿತ ಗೊಳ್ಳದೆ ನಿರಂತರವಾಗಿ ಸಂಘಟನೆಯ ಶಕ್ತಿಯಾಗಿ ಅಭಿವೃದ್ಧಿ ಯತ್ತ ಸಾಗಬೇಕಾದರೆ ಮಾಹಿತಿಯ ಅವಶ್ಯಕತೆ ಇದೆ ಎಂದು‌ ಮನಗಂಡು ಬ್ಯಾಂಕ್ ಮಾಹಿತಿ ಕಾರ್ಯಗಾರ ಆಯೋಜನೆ ಮಾಡಿದೆ.
ಸ್ವಸಹಾಯ ಗುಂಪಿನ ಅಳಿವು ಉಳಿವು ಸದಸ್ಯ ರ ಕೈಯಲ್ಲಿ ಇದೆ ಎಂದರು. ಸ್ವಸಹಾಯ ಗುಂಪು ಉಳಿಕೆಯ ಗುಂಪಾಗದೆ ಸಮಸ್ಯೆಗಳಿಗೆ ಪರಿಹಾರ ನೀಡುವ ಅರ್ಥಿಕ ಚಟುವಟಿಕೆಯ ಸ್ವತ್ತುವಾಗಬೇಕು.

ನವೋದಯ ಗುಂಪುಗಳ ತಾಲೂಕು ಮೇಲ್ವಿಚಾರಕ ಸಂಜೀವ ಪೂಜಾರಿ,ಗುಂಪುಗಳ ಬಗ್ಗೆ ಮಾಹಿತಿ ನೀಡಿದರು.

ಬಂಟ್ವಾಳ ವಲಯ ಪ್ರೇರಕಿ ಶೋಭಾ ಸ್ವಾಗತಿಸಿ ವಂದಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here