Tuesday, April 23, 2024

ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ಪುನಾರಾರಂಭ 

“ಕಳೆದ ಒಂದಷ್ಟು ಸಮಯದಿಂದ ಶಾಲಾ ವಾತಾವರಣದಿಂದ ಹೊರಗಿದ್ದರೂ, ಶೈಕ್ಷಣಿಕ ಚಟುವಟಿಕೆ ಮಾತ್ರ ಮನೆಯಲ್ಲಿ ನಿರಂತರವಾಗಿತ್ತು. ಶಾಲೆಯಲ್ಲಿ ನಡೆಯುತ್ತಿದ್ದಂತಹ ಸಂಸ್ಕಾರಯುತ ಕಾರ್ಯಗಳು  ಪ್ರತಿ ಮನೆಯಲ್ಲಿಯೂ ಕೂಡ ನಡೆದಿರುವುದು ನಿಜವಾಗಿಯೂ ಶ್ಲಾಘನೀಯ. ಆದರೆ ಅನುಭವದ ಶಿಕ್ಷಣವನ್ನು, ಶಾಲೆಯ ಮೂಲಕವೇ ಪಡೆಯಲು ಮತ್ತೊಮ್ಮೆ ಅವಕಾಶ ಸಿಕ್ಕಿರುವುದು ಎಲ್ಲರಿಗೂ ಸಂತಸದ ವಿಚಾರ. ಕಲ್ಲಡ್ಕ ಶ್ರೀರಾಮ ಪ್ರಾಥಮಿಕ ಶಾಲೆಯು ಕನ್ನಡ ಮಾಧ್ಯಮದಲ್ಲಿ ರಾಜ್ಯದಲ್ಲಿಯೇ ಗರಿಷ್ಠ ಸಂಖ್ಯೆಯನ್ನು (1225 ಹೊಂದಿದ್ದು ಮಾತೃಭಾಷೆಯಲ್ಲಿ ಉಚಿತ ಶಿಕ್ಷಣ ನೀಡುತ್ತಿರುವ ಹೆಗ್ಗಳಿಕೆ ಈ ಸಂಸ್ಥೆಗಿದೆ. ಮುಂದಿನ ದಿನಗಳಲ್ಲಿ ಪರಿಸರದೊಂದಿಗಿನ ಶಿಕ್ಷಣವನ್ನು ನಮ್ಮಲ್ಲಿ ಅತ್ಯಂತ ಸಂತೋಷದಾಯಕವಾಗಿ ಪ್ರಾಣಿ, ಪಕ್ಷಿ, ಗೋವು, ಮರ-ಗಿಡಗಳೊಂದಿಗೆ ಬೆರೆತು ಕಲಿಯುವ ಅವಕಾಶ ಪೋಷಕರ ಸಹಭಾಗಿತ್ವದೊಂದಿಗೆ ನಿಮ್ಮದಾಗಲಿದೆ. “ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ| ಪ್ರಭಾಕರ್ ಭಟ್ ಕಲ್ಲಡ್ಕ ಹೇಳಿದರು.

ವಿದ್ಯಾರ್ಥಿಗಳು ಹಾಗೂ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ| ಪ್ರಭಾಕರ್ ಭಟ್ ಕಲ್ಲಡ್ಕ ಭಾರತಮಾತೆಗೆ ದೀಪ ಬೆಳಗಿಸಿ ಪುಷ್ಪಾರ್ಚನೆ ಮಾಡಿದರು. ನಂತರ ದಿನನಿತ್ಯದ ಪ್ರಾರ್ಥನೆಯಾದ ಸರಸ್ವತಿ ವಂದನೆ ಅಗ್ನಿಹೋತ್ರದೊಂದಿಗೆ ನಡೆಯಿತು.
ಅಧ್ಯಾಪಕ ವೃಂದದವರು ಬಂದಿರುವಂತಹ ಒಂದನೇ ತರಗತಿಯ ಪುಟಾಣಿಗಳಿಗೆ ಆರತಿ, ಅಕ್ಷತೆ, ತಿಲಕ ಧಾರಣೆ ಮಾಡಿ, ಸಿಹಿ ನೀಡಿ ವಿಶಿಷ್ಟವಾಗಿ ಸ್ವಾಗತಿಸಿದರು.
ವೇದಿಕೆಯಲ್ಲಿ ಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕರಾದ ವಸಂತಮಾಧವ, ರಾಷ್ಟ್ರಸೇವಿಕಾ ಸಮಿತಿಯ ಕಾರ್ಯಕಾರಿಣಿ ಸದಸ್ಯರಾದ ಕಮಲಾ ಪ್ರಭಾಕರ ಭಟ್ ಹಾಗೂ ಮುಖ್ಯೋಪಾಧ್ಯಾಯರಾದ ರವಿರಾಜ್ ಕಣಂತೂರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಶಿಕ್ಷಕರಾದ ಹೇಮಲತಾ ನಿರ್ವಹಿಸಿದರು.

More from the blog

ಬಿಜೆಪಿ ಪಕ್ಷದಿಂದ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಉಚ್ಛಾಟನೆ

ಶಿವಮೊಗ್ಗ: ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರನ್ನು ಬಿಜೆಪಿ ಶಿಸ್ತು ಸಮಿತಿ ಸೋಮವಾರ ಪಕ್ಷದಿಂದ ಉಚ್ಚಾಟನೆ ಮಾಡಿದೆ. ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜು ಅವರು ಸೋಮವಾರ ಈಶ್ವರಪ್ಪ ಅವರನ್ನು ಆರು ವರ್ಷಗಳ ಕಾಲ...

ವಿಟ್ಲ ವಿಘ್ನೇಶ್ವರ ರೂಫಿಂಗ್ಸ್ & ಎಂಜಿನಿಯರಿಂಗ್ ವರ್ಕ್ಸ್, ಕ್ರೈನ್ ಸರ್ವೀಸ್ ಹಾಗೂ ಶ್ರೀ ವಿಘ್ನೇಶ್ವರ ಸ್ಟೀಲ್ಸ್ ಸ್ವಂತ ಕಟ್ಟಡಕ್ಕೆ ಸ್ಥಳಾಂತರ 

ವಿಟ್ಲ: ಕಳೆದ ಹಲವಾರು ವರುಷಗಳಿಂದ ವಿಟ್ಲ - ಪುತ್ತೂರು ರಸ್ತೆಯ ಮೇಗಿನ ಪೇಟೆಯಲ್ಲಿ ವ್ಯವಹಾರ ನಡೆಸುತ್ತಿದ್ದ ಶ್ರೀ ವಿಘ್ನೇಶ್ವರ ರೂಫಿಂಗ್ಸ್ & ಎಂಜಿನಿಯರಿಂಗ್ ವರ್ಕ್ಸ್, ಕ್ರೈನ್ ಸರ್ವೀಸ್ ಹಾಗೂ ಶ್ರೀ ವಿಘ್ನೇಶ್ವರ ಸ್ಟೀಲ್ಸ್...

ಚುನಾವಣೆಯಲ್ಲಿ ಆಧಾರರಹಿತವಾಗಿ ಕಡಿಮೆ ಪ್ರಮಾಣದಲ್ಲಿ ಕುಲಾಲರ ಮತದಾರರ ಸಂಖ್ಯೆ ತೋರಿಸಿರುವುದು ಬೇಸರದ ವಿಚಾರ-ಸದಾಶಿವ ಬಂಗೇರ

ಬಂಟ್ವಾಳ: ದ.ಕ.ಜಿಲ್ಲೆಯಲ್ಲಿ ಕುಲಾಲ ಯಾನೆ ಮೂಲ್ಯ ಸಮುದಾಯ ಗರಿಷ್ಠ ಪ್ರಮಾಣದಲ್ಲಿದ್ದು, ಮೂರನೇ ಅತಿ ಹೆಚ್ಚು ಮತದಾರರಿರುವ ಸಮುದಾಯವಾಗಿದೆ. ಜಿಲ್ಲೆಯ ನಿರ್ಣಾಯಯ ಸ್ಥಾನದಲ್ಲಿರುವ ಕುಲಾಲರ ಮತದಾರರ ಸಂಖ್ಯೆ ಅಂದಾಜು ೧.೮೪ ಲಕ್ಷವಾಗಿದೆ. ಆದರೆ ಚುನಾವಣೆಯ...

ಸರಪಾಡಿಯಲ್ಲಿ ನಡೆದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ

ಬಂಟ್ವಾಳ: ಅಪಪ್ರಚಾರ ನಡೆಸುವವರಿಗೆ ಉತ್ತರ ನೀಡುವ ಅಗತ್ಯವಿಲ್ಲ. ನಮ್ಮ ಕೆಲಸವೇ ಅವರಿಗೆ ಉತ್ತರ ನೀಡಲಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ ಹೇಳಿದರು. ಮಣಿನಾಲ್ಕೂರು ವಲಯ ಕಾಂಗ್ರೆಸ್ ನೇತೃತ್ವದಲ್ಲಿ ಸರಪಾಡಿಯಲ್ಲಿ ನಡೆದ ಕಾಂಗ್ರೆಸ್...